ಜತನ ಮಾಡೊ ಜೀವನವ

ಜತನ ಮಾಡೊ ಜೀವನವ

(ರಾಗ ಬೇಗಡೆ ಅಟತಾಳ) ಜತನ ಮಾಡೊ ಜೀವನವ, ಮುಂದೆ ಮತಿಭ್ರಷ್ಟವಾಗಿ ನೀ ಕೆಡಬೇಡ ಮನುಜ ||ಪ|| ಅಸ್ಥಿ ಮಲ ಮಾಂಸಾದಿ ಮೂತ್ರ , ಅದರ ಸುತ್ತಿಕೊಂಡಿರೋದು ಅಮರ ಬಳ್ಳಿ ಇಟ್ಟಾಡೆಯಲಿ ಬಾಹೋ ರಭಸ , ಅದರ ಹುಟ್ಟು ನೋಡಿದರೆ ಕುಂಬಾರನ ತಿಮಿರಿ || ಹಿಂದೆ ತಗರು ಮುಂದೆ ಭಾವಿ , ಅದರ ಸಂದಣಿಸುವ ಎಡಬಲದಿ ಮದ್ದಾನೆ ಒಂದಕ್ಕೆ ಒಂದು ಸಾಧನವ , ಅದರ ಮುಂದೆ ನೋಡಿದರೆ ತಾನದಸೋನೆ || ಹಮ್ಮು ಹಂಕಾರ ಈಡ್ಯಾಡು , ಪರ- ಬೊಮ್ಮಾನಂದದಲ್ಲಿ ತೇಲಿ ಮುಣುಗಾಡು ನಿನ್ನಲ್ಲಿ ನೀ ತಿಳಿದು ನೋಡು , ಪ್ರ- ಸನ್ನ ಶ್ರೀಪುರಂದರವಿಠಲನ್ನ ಕೂಡು ||
ದಾಸ ಸಾಹಿತ್ಯ ಪ್ರಕಾರ
ಬರೆದವರು