ಹರಿದಾಸ ಸಂಪದ ಸಂಪುಟಕ್ಕೆ ಸ್ವಾಗತ!

ಹರಿದಾಸ ಸಂಪದ ಸಂಪುಟಕ್ಕೆ ಸ್ವಾಗತ!

ಒಂದು ಸಾಯಂಕಾಲ ಹಾಗೆಯೇ ಪುರಂದರ ದಾಸರ ರಚನೆಯೊಂದನ್ನು ಕುರಿತು ಹಂಸಾನಂದಿಯವರೊಂದಿಗೆ ಚರ್ಚೆ ಮಾಡುವಾಗ ವಿದ್ಯಾಭೂಷಣರ ಟ್ಯೂನು ಮಾತ್ರ ನೆನಪಾಗಿ ಅದರ ಸಾಹಿತ್ಯ ಸರಿಯಾಗಿ ನೆನಪಾಗದೆ ಬೇಸರವಾಯ್ತು. ಹಂಸಾನಂದಿಯವರು ತಕ್ಷಣ ಸಾಹಿತ್ಯ ಸರಿಪಡಿಸಿದರಲ್ಲದೆ ನಾನು ಪ್ರಸ್ತಾಪಿಸಿದ ಉಳಿದ ಕೆಲವು ರಚನೆಗಳನ್ನೂ ನನಗೆ ಥಟ್ಟನೆ ಆ ಕೂಡಲೆ ಓದಲು ಕೊಟ್ಟರು. ಹಂಸಾನಂದಿಯವರ ಆಸಕ್ತಿ ನೋಡಿ ಇವರ ಕುರಿತು ನನಗುಂಟಾದ ಆಶ್ಚರ್ಯ, ಗೌರವ ಈ ವೆಬ್ಸೈಟನ್ನು ಹುಟ್ಟು ಹಾಕಿಸಿದೆ. ಸುಮಾರು ಒಂದು ವರ್ಷಕ್ಕಿಂತ ಹೆಚ್ಚು ಕಾಲ ಸಂಪದದಲ್ಲಿ ಬರೆಯುತ್ತ ಬರುತ್ತಿರುವ ಹಂಸಾನಂದಿಯವರ ನೇತೃತ್ವದಲ್ಲಿ ಈ ಯೋಜನೆ ಪ್ರಾರಂಭವಾಗಲಿದೆ. ಯೋಜನೆಯಲ್ಲಿ ನೀವೂ ಪಾಲ್ಗೊಳ್ಳಬಹುದು! ಹೆಚ್ಚಿನ ಮಾಹಿತಿ ನಿರೀಕ್ಷಿಸಿ, ಈ ಪುಟ ನೋಡುತ್ತಿರಿ!