ಆದದ್ದೆಲ್ಲ ಒಳಿತೇ ಆಯಿತು

ಪಲ್ಲವಿ: ಆದದ್ದೆಲ್ಲ ಒಳಿತೇ ಆಯಿತು ನಮ್ಮ ಶ್ರೀಧರನ ಸೇವೆಗೆ ಸಾಧನ ಸಂಪತ್ತಾಯಿತು ಚರಣಗಳು: ದಂಡಿಗೆ ಬೆತ್ತ ಹಿಡಿಯುವುದಕ್ಕೆ ಮಂಡೆ ಮಾಚಿ ನಾಚುತಿದ್ದೆ ಹೆಂಡತಿ ಸಂತತಿ ಸಾವಿರವಾಗಲಿ ದಂಡಿಗೆ ಬೆತ್ತ ಹಿಡಿಸಿದಳಯ್ಯ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇದೇ ಸಮಯ ರಂಗ

ಪಲ್ಲವಿ: ಇದೇ ಸಮಯ ರಂಗ ಬಾರೆಲೊ ಇದೇ ಸಮಯ ಕೃಷ್ಣ ಬಾರೆಲೊ ಚರಣಗಳು: 1: ಅತ್ತಿಗೆ ಲಕ್ಷಬತ್ತಿ ಶೀಲಳೋ ಅಷ್ಟು ಆಗದೆ ಅವಳೇಳಳೊ ಅತ್ತೆ ಪುರಾಣದಿ ಲೋಲಳೊ ಸರಿ ಹೊತ್ತಿನ ವೇಳೆಗೆ ಬರುವಳೋ 2: ಮಾವ ಎನ್ನಲಿ ಅವಿಶ್ವಾಸಿಯೋ ಮದುವೆಯಾದ ಗಂಡ ಉದಾಸಿಯೋ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಲ್ಲಿದೆ ನಮ್ಮ ಮನೆ

ಅಲ್ಲಿದೆ ನಮ್ಮ ಮನೆ ಇಲ್ಲಿರುವುದು ಸುಮ್ಮನೆ! ||ಪಲ್ಲವಿ|| ಕದಬಾಗಿಲಿರಿಸಿದ ಕಳ್ಳ ಮನೆಇದು ಮುದದಿಂದಲೋಡ್ಯಾಡೋ ಸುಳ್ಳು ಮನೆ | ಇದಿರಾಗಿ ವೈಕುಂಠವಾಸಮಾಡುವಂತ ಪದುಮನಾಭನ ದಿವ್ಯ ಬದುಕುಮನೆ ||೧|| ಮಾಳಿಗೆಮನೆಯೆಂದು ನೆಚ್ಚಿಕೆಡಲುಬೇಡ ಕೇಳಯ್ಯ ಹರಿಕಥೆಶ್ರವಣಂಗಳ |
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗೋವಿಂದಾ ನಿನ್ನ ನಾಮವೆ ಚಂದ

ಪಲ್ಲವಿ ಗೋವಿಂದಾ ನಿನ್ನ ನಾಮವೆ ಚಂದ || ಅನುಪಲ್ಲವಿ ಅಣುರೇಣು ತೃಣ ಕಾಷ್ಟ ಪರಿಪೂರ್ಣ ಗೋವಿಂದ ನಿರ್ಮಲಾತ್ಮಕನಾಗಿ ಇರುವುದೆ ಆನಂದ|| ಚರಣ ಸೃಷ್ಟಿ ಸ್ಥಿತಿ ಲಯ ಕಾರಣ ಗೋವಿಂದ ಈ ಪರಿ ಮಹಿಮೆಯ ತಿಳಿಯುವುದೆ ಆನಂದ||೧||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗಜವದನ ಬೇಡುವೇ

ಪಲ್ಲವಿ ಗಜವದನ ಬೇಡುವೇ ಗೌರಿ ತನಯ ತ್ರಿಜಗ ವಂದಿತನೇ ಸುಜನರ ಪೊರೆವನೇ ಅನುಪಲ್ಲವಿ ಪಾಶಾಂಕುಶಧರ ಪರಮ ಪವಿತ್ರ ಮೂಷಿಕವಾಹನ ಮುನಿಜನಪ್ರೇಮಾ (ಗಜವದನ) ಚರಣ ಮೋದದಿ ನಿನ್ನಯ ಪಾದವ ತೋರೋ ಸಾಧು ವಂದಿತನೆ ಆದರದಿಂದಲಿ (ಗಜವದನ) ಸರಸಿಜನಾಭ ಶ್ರಿ ಪುರಂದರ ವಿಠಲನ
ದಾಸ ಸಾಹಿತ್ಯ ಪ್ರಕಾರ
ಬರೆದವರು

ದಯಮಾಡೋ ರಂಗ

ಪಲ್ಲವಿ ದಯಮಾಡೋ ರಂಗ ದಯಮಾಡೋ ದಯಮಾಡೋ ನಿನ್ನ ದಾಸನೆಂದೆಣಿಸಿ ಅನುಪಲ್ಲವಿ ಹಲವು ಕಾಲದಿ ನಿನ್ನ ಹಂಬಲ ಎನಗೆ ಒಲಿದು ಪಾಲಿಸಬೇಕು ವಾರಿಜನಾಭ ಚರಣ ಇಹ ಪರ ಗತಿ ನೀನೇ ಇಂದಿರ ರಮಣ ಸಹಾಯ ನಿನ್ನದೆ ಸರ್ವದಾ ತೋರಿ ಕರುಣ ಕರಿರಾಜ ವರದನೇ ಕಾಮಿತ ಫಲದ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಭಾಗ್ಯದ ಲಕ್ಷ್ಮೀ ಬಾರಮ್ಮಾ

ಭಾಗ್ಯದ ಲಕ್ಷ್ಮೀ ಬಾರಮ್ಮಾ ನಮ್ಮಮ್ಮ ನೀ ಸೌ ||ಪಲ್ಲವಿ|| ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ ಗೆಜ್ಜೆ ಕಾಲ್ಗಳ ಧ್ವನಿಯ ತೋರುತ ಸಜ್ಜನ ಸಾಧು ಪೂಜೆಯ ವೇಳೆಗೆ ಮಜ್ಜಿಗೆಯೊಳಗಿನ ಬೆಣ್ಣೆಯಂತೆ || ೧|| ಕನಕ ವೃಷ್ಟಿಯ ಕರೆಯುತ ಬಾರೆ ಮನ ಕಾಮನೆಯ ಸಿದ್ಧಿಯ ತೋರೇ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಂದದ್ದೆಲ್ಲಾ ಬರಲಿ

ಬಂದದ್ದೆಲ್ಲಾ ಬರಲಿ ಗೋ- ವಿಂದನ ದಯ ನಮಗಿರಲಿ || (ಪಲ್ಲವಿ) ಮಂದರಧರ ಗೋವಿಂದ ಮುಕುಂದನ ಸಂದರ್ಶನ ಒಂದಿದ್ದರೆ ಸಾಲದೇ || (ಬಂದದ್ದೆಲ್ಲಾ) ಆರು ಅರಿಯದಿರೆಲ್ಲನ ಮುರಾರಿಯು ಎನಗೆ ಪ್ರಸನ್ನ ಘೋರ ದುರಿತದ ಬನ್ನ ಭಯ ಹಾರಿ| ಗುಣಾಂಬುಧಿ ಘನ್ನ ಶ್ರೀ ರಮಣನ ಸಿರಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಂಬಿಗ ನಾ ನಿನ್ನ ನಂಬಿದೆ

ಪಲ್ಲವಿ: ಅಂಬಿಗ ನಾ ನಿನ್ನ ನಂಬಿದೆ ಜಗದಂಬಾರಮಣನ ನಂಬಿದೆ ಚರಣ: 1: ತುಂಬಿದ ಹರಿಗೋಲಂಬಿಗ ಅದಕೊಂಭತ್ತು ಛಿದ್ರವು ಅಂಬಿಗ ಸಂಭ್ರಮದಿಂ ನೋಡಂಬಿಗ ಅದರಿಂಬು ನೋಡಿ ನಡೆಸಂಬಿಗ 2: ಹೊಳೆವ ಭರವ ನೋಡಂಬಿಗ ಅದಕೆ ಸೆಳವು ಘನವಯ್ಯ ಅಂಬಿಗ
ದಾಸ ಸಾಹಿತ್ಯ ಪ್ರಕಾರ

ಅಂಗನೆಯರೆಲ್ಲ ನೆರೆದು

ಪಲ್ಲವಿ: ಅಂಗನೆಯರೆಲ್ಲ ನೆರೆದು ಚಪ್ಪಾಳಿಕ್ಕುತ ದಿವ್ಯ ಮಂಗಳ ನಾಮವ ಪಾಡಿ ರಂಗನ ಕುಣಿಸುವರು ಚರಣಗಳು: 1: ಪಾಡಿ ಮಲ್ಹಾರಿ ಭೈರವಿ ಸಾರಂಗ ದೇಶಿ ಗುಂಡಕ್ರಿಯ ಗುರ್ಜರಿ ಕಲ್ಯಾಣಿ ರಾಗದಿ ತಂಡ ತಂಡದಲಿ ನೆರೆದು ರಂಗನ ಉಡಿಯ ಘಂಟೆ ಘಣ್ ಘಣ್ ಘಣ್ ಘಣಿರೆಂದು ಹಿಡಿದು ಕುಣಿಸುವರು
ದಾಸ ಸಾಹಿತ್ಯ ಪ್ರಕಾರ
ಬರೆದವರು