ಪುರಂದರದಾಸ

Compositions of Purandara dasa

ಸತ್ಯವೆಂಬುದೆ ಸ್ನಾನ ಉಪವಾಸ ಜಪ ನೇಮ

( ರಾಗ ಕಲ್ಯಾಣಿ ಆದಿತಾಳ) ಸತ್ಯವೆಂಬುದೆ ಸ್ನಾನ ಉಪವಾಸ ಜಪ ನೇಮ ಅ- ಸತ್ಯದಲಿ ಮಾಡುವ ಕರ್ಮ ವ್ಯರ್ಥ || ಪ|| ಅಪ್ಪಳಿಸಿ ಪರರ ಒಡವೆಗಳ ತಂದುಂಡು ತಾ- ನೊಪ್ಪದಿಂದುಪವಾಸ ವ್ರತವ ಮಾಡಿ ತಪ್ಪದಲೆ ಸ್ವರ್ಗವನು ಸೂರೆಗೊಂಬುವನೆಂಬೆ ಸರ್ಪಗಳು ಮಾಡಿದ ಅಪರಾಧವೇನಯ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಣ್ಣವನಿವನಾರಮ್ಮ

( ರಾಗ ಶಂಕರಾಭರಣ ಆದಿತಾಳ) ಸಣ್ಣವನಿವನಾರಮ್ಮ ಪೇಳೆಲೆ ತಂಗಿ ||ಪ|| ಕಾಣದ ಮಾಣಿಕ್ಯವ ಕಂಡೆನು ಇಂದಿಲ್ಲಿ || ಒಬ್ಬರ ಸುತನಲ್ಲ ಭಕ್ತವತ್ಸಲನಕ್ಕ ಉಬ್ಬಿ ನೆನೆವರಲಿ ಸುತ್ತಿ ನಲಿದಾಡುವ || ಭವಾದಿಗಳ ತಾತ ಭವಕೆ ತಾರಕನೀತ ಧವಳಗಂಗೆಯ ಪೆತ್ತ ಶ್ರೀವತ್ಸದಿಂದೊಪ್ಪುವ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಂಸಾರವೆಂಬಂಥ ಭಾಗ್ಯವಿರಲಿ

( ರಾಗ ಕಾಂಭೋಜ ಅಟತಾಳ) ಸಂಸಾರವೆಂಬಂಥ ಭಾಗ್ಯವಿರಲಿ ||ಪ|| ಕಂಸಾರಿ ನೆನವೆಂಬ ಸೌಭಾಗ್ಯವಿರಲಿ ||ಅ|| ತಂದೆ ನೀನೇ ಕೃಷ್ಣ ತಾಯಿ ಇಂದಿರೆದೇವಿ ಪೊಂದಿದ ಅಣ್ಣನು ವನಜಸಂಭವನು ಇಂದುಮುಖಿ ಸರಸ್ವತೀದೇವಿಯೆ ಅತ್ತಿಗೆಯು ಎಂದಿಂದಿಗೂ ವಾಯುದೇವರೆ ಗುರುವು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಲ್ಲದೊ ಕೃಷ್ಣ ಸಲ್ಲದೊ

( ರಾಗ ಕಲ್ಯಾಣಿ ಅಟತಾಳ) ಸಲ್ಲದೊ ಕೃಷ್ಣ ಸಲ್ಲದೊ ||ಪ|| ಸಿರಿವಲ್ಲಭ ಇದ ನೋಡಿ ಪಾಲಿಸಬೇಕೋ ||ಅ|| ಬಿತ್ತಿ ಬೆಳೆಸಿ ತಲೆಯೆತ್ತಿದ ಪೈರನ್ನು ಮತ್ತೆ ತುರುವಿಂಡು ಬಿಟ್ಟು ಮೆಲ್ಲಿಸುವದು || ಸಾವಿರ ಹೊನ್ನಿಕ್ಕಿ ಸದನವ ಸಾಧಿಸಿ ಪಾವಕನುರಿಗೆ ನೀನೊಪ್ಪಿಸಿ ಕೊಡುವುದು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಾಲಿಗರಿನ್ನು ಬಿಡುವರೆ

( ರಾಗ ದರ್ಬಾರ್ ಆದಿತಾಳ) ಸಾಲಿಗರಿನ್ನು ಬಿಡುವರೆ ||ಪ|| ಬಲು ಜಾಲಗಳನು ಮಾಡಿ ಕಾಲ ನೂಕಿ ಕಳೆದರೆ ||ಅ|| ಜಲದೊಳು ಪೊಕ್ಕಡಗಿರಲು , ಬಲು ಗಿರಿಯನೆ ಪೊತ್ತು ಭಾರವೆಂದೆನಲು ತಲೆ ಕುಕ್ಕಿ ನೆಲಕೆ ಬಗ್ಗಿರಲು ಹಲ್ಲ ಕಿರಿಕಿರಿದರಿಯೆಂದೆನಲು || ಕಾಯವ ವಂಚಿಸಿಕೊಳಲು , ಬಲು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಾಕು ಸಂಸಾರ ತೆರೆಯ ನೂಕಲಾರೆನು

( ರಾಗ ಹಿಂದುಸ್ತಾನ್ ದೇಶಿ ರೂಪಕತಾಳ) ಸಾಕು ಸಂಸಾರ ತೆರೆಯ ನೂಕಲಾರೆನು ಬೇಕು ನಿನ್ನ ಚರಣಕಮಲ ಬೇರನ್ಯತ್ರ ಗತಿಯ ಕಾಣೆ ||ಪ|| ಹುಟ್ಟಿದಂದಿನಿಂದ ಕಷ್ಟಪಟ್ಟು ಕಂಗೆಟ್ಟು ಮನದಿ ಗುಟ್ಟು ಪೇಳ್ವೆನಯ್ಯ ಒಂದಿಷ್ಟು ಲಾಲಿಸೊ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಾಕು ಸಂಸಾರ ನಮಗಿನ್ನೇತರ

( ರಾಗ ಆನಂದಭೈರವಿ ಆದಿತಾಳ) ಸಾಕು ಸಂಸಾರ ನಮಗಿನ್ನೇತರ ಒಗತನ ||ಪ|| ಲೋಕದೊಳಗೆ ಎನ್ನ ಬೇಕೆಂಬುವರಿಲ್ಲ ವಿವೇಕಿ ಪುರುಷ ಪರವಶನಾದರೆ ಏತರ ಸಂಸಾರ ||ಅ|| ಕಾಮವೆಂಬೊ ನೆಗೆಹೆಣ್ಣು ಎನ್ನ ಕಟ್ಟಿ ಆಳುತಾಳೆ ಕ್ರೋಧವೆಂಬೊ ಸವತಿ ಕೊಲ್ಲುತಾಳೆ , ಏತರ ಒಗತನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಕಲ ಸಾಧನಕೆಲ್ಲ (ಭಾರತೀಸ್ತೋತ್ರ)

( ರಾಗ ನಾಟ ) ಸಕಲ ಸಾಧನಕೆಲ್ಲ ಸಿದ್ಧಿಗೊಳಿಸುವದು ಭಕುತಿ ಕಾರಣವಲ್ಲದೆ ಬೇರೆ ಸಾಧನವುಂಟೆ ಯುಕುತಿ ಜನರೆಲ್ಲ ಕೇಳಿ ಇತರ ಸಾಧನಕೆಲ್ಲ ಭಕುತಿ ಕಾರಣವಲ್ಲದೆ ಬೇರೆ ಭಕುತಿಕಭಿಮಾನಿ ಭಾರತಿದೇವಿಯರ ಕರುಣ ಯುಕುತಿ ಸಾಧನವೆಂದು ಮನದಿ ಭಜಿಸಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಾಧುಸಜ್ಜನರೊಳಗಿರುವೋದೆ ಹಬ್ಬ

( ರಾಗ ಮಧ್ಯಮಾವತಿ ಆದಿತಾಳ) ಸಾಧುಸಜ್ಜನರೊಳಗಿರುವೋದೆ ಹಬ್ಬ ವೇದಾಂತಧರ್ಮದ ತಿಳಿವೋದೆ ಹಬ್ಬ || ಭೇದಬುದ್ಧಿಗಳೆಲ್ಲ ಬಿಡುವೋದೆ ಹಬ್ಬ ಭಾಗೀರಥಿಲಿ ಲೋಲಾಡುವುದೆ ಹಬ್ಬ || ಸಂಕಲ್ಪಸಿದ್ಧಿ ಮನಕೆ ದೊಡ್ಡ ಹಬ್ಬ ನಿಶ್ಚಿಂತ ಯೋಗಿಗೆ ಅನುದಿನ ಹಬ್ಬ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ತಾರಿಸೋ ಶ್ರೀಹರಿ

( ರಾಗ ಭೈರವಿ ಆದಿ ತಾಳ) ತಾರಿಸೋ ಶ್ರೀಹರಿ ನಮ್ಮ ತಾರಿಸೋ ||ಪ|| ತಾರಿಸೋ ಭವ ನಿವಾರಿಸೋ ನಿನ್ನ ಪಾದ ತೋರಿಸೋ ವೈಕುಂಠವಾಸ ರಂಗಯ್ಯ || ಪಾಪ ವಿನಾಶವ ಮಾಡುವೆ ನೀ ತಾಪಸಿಯರನು ಸಲಹುವೆ ವ್ಯಾಪಿಸಿ ನಿನ್ನ ನೆನೆವರ ಕಾಯ್ವ ಶ್ರೀಪಾಂಡುರಂಗ ಪರಮಾತ್ಮ ಮುಕುಂದ ||
ದಾಸ ಸಾಹಿತ್ಯ ಪ್ರಕಾರ
ಬರೆದವರು