ಸಕಲ ಸಾಧನಕೆಲ್ಲ (ಭಾರತೀಸ್ತೋತ್ರ)

ಸಕಲ ಸಾಧನಕೆಲ್ಲ (ಭಾರತೀಸ್ತೋತ್ರ)

( ರಾಗ ನಾಟ ) ಸಕಲ ಸಾಧನಕೆಲ್ಲ ಸಿದ್ಧಿಗೊಳಿಸುವದು ಭಕುತಿ ಕಾರಣವಲ್ಲದೆ ಬೇರೆ ಸಾಧನವುಂಟೆ ಯುಕುತಿ ಜನರೆಲ್ಲ ಕೇಳಿ ಇತರ ಸಾಧನಕೆಲ್ಲ ಭಕುತಿ ಕಾರಣವಲ್ಲದೆ ಬೇರೆ ಭಕುತಿಕಭಿಮಾನಿ ಭಾರತಿದೇವಿಯರ ಕರುಣ ಯುಕುತಿ ಸಾಧನವೆಂದು ಮನದಿ ಭಜಿಸಿ ಅಖಿಲೇಶ ಪುರಂದರವಿಠಲ ತಾನೊಲಿವ ||
ದಾಸ ಸಾಹಿತ್ಯ ಪ್ರಕಾರ
ಬರೆದವರು