ಪುರಂದರದಾಸ

Compositions of Purandara dasa

ತೋಳು ತೋಳು ತೋಳು ರಂಗ

( ರಾಗ ಮುಖಾರಿ ಅಟ ತಾಳ)

ತೋಳು ತೋಳು ತೋಳು ರಂಗ ತೋಳನ್ನಾಡೈ ಸ್ವಾಮಿ

ನೀಲವರ್ಣದ ಬಾಲಕೃಷ್ಣನೆ ತೋಳನ್ನಾಡೈ ||ಪ||

 

ಹುಲಿಯುಗುರರಳೆಲೆ ಮಾಗಾಯಿಗಳನಿಟ್ಟ ತೋಳನ್ನಾಡೈ ಸ್ವಾಮಿ

ಘಲಿರೆಂಬಂದುಗೆ ಗೆಜ್ಜೆಲಿ ನಲಿವುತ್ತ ತೋಳನ್ನಾಡೈ

ನೆಲುವಿಗೆ ನಿಲುಕದೆ ಒರಳ ತಂದಿಟ್ಟ ತೋಳನ್ನಾಡೈ ಸ್ವಾಮಿ

ಚೆಲುವ ಮಕ್ಕಳ ಮುದ್ದು ಮಾಣಿಕವೆ ತೋಳನ್ನಾಡೈ ||

 

ಪೂತನಿಯೆಂಬವಳಸುವನೆ ಹೀರಿದ ತೋಳನ್ನಾಡೈ ಸ್ವಾಮಿ

ಮಾತೆಯ ಪಿತನ ಅಣುಗನ ಮಡುಹಿದ ತೋಳನ್ನಾಡೈ

ಮಾತಿಗೆ ಶಿಶುಪಾಲನ ಶಿರತರಿದ ತೋಳನ್ನಾಡೈ ಸ್ವಾಮಿ

ಶ್ರೀ ತುಲಸಿಯ ಪ್ರಿಯ ನಿತ್ಯವಿನೋದಿ ತೋಳನ್ನಾಡೈ ||

 

ದಟ್ಟಡಿಯಿಡುತಲೆ ಬೆಣ್ಣೆಯ ಮೆಲುವ ತೋಳನ್ನಾಡೈ ಸ್ವಾಮಿ

ದಾಸ ಸಾಹಿತ್ಯ ಪ್ರಕಾರ
ಬರೆದವರು

ತುತ್ತುರು ತೂರೆಂದು ಬತ್ತೀಸ ರಾಗಗಳನು

( ರಾಗ ಆನಂದಭೈರವಿ ಅಟತಾಳ) ತುತ್ತುರು ತೂರೆಂದು ಬತ್ತೀಸ ರಾಗಗಳನು ಚಿತ್ತವಲ್ಲಭ ತನ್ನ ಕೊಳಲನೂದಿದನು ||ಪ|| ಗೌಳ ನಾಟಿ ಆಹೇರಿ ಗುರ್ಜರಿ ಮಾಳವಿ ಸಾರಂಗ ರಾಗ ಕೇಳಿ ರಮಣಿ(ಯ)ರತಿ ದೂರದಿಂದ ಫಲಮಂಜರಿ ಗೌಳಿ ದೇಶಾಕ್ಷರಿ ರಾಗಂಗಳನು ನಳಿನನಾಭನು ತನ್ನ ಕೊಳಲನೂದಿತನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಾರಾಯಣ ಎನ್ನಬಾರದೆ

(ರಾಗ ಬಿಲಹರಿ ಆದಿತಾಳ ) ನಾರಾಯಣ ಎನ್ನಬಾರದೆ ನಿಮ್ಮ ನಾಲಿಗೆಯೊಳು ಮುಳ್ಳು ಮುರಿದಿಹುದೆ , ಕಲ್ಲು ಜಡಿದಿಹುದೆ ||ಪ|| ವಾರಣಾಸಿಗೆ ಪೋಗಿ ದೂರ ಬಳಲೆಲೇಕೆ ನೀರ ಕಾವಡಿ ಪೊತ್ತು ತಿರುಗಲೇಕೆ ಊರೂರು ತಪ್ಪದೆ ದೇಶಾಂತರವೇಕೆ ದಾರಿಗೆ ಸಾಧನವಲ್ಲವೆ ಹರಿನಾಮ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಾನು ಬೇರ ಮಾಡುವೆ

(ರಾಗ ಬೆಹಾಗ್ ಅಟ ತಾಳ ) ನಾನು ಬೇರ ಮಾಡುವೆ ಎನ್ನ ನಾಲಿಗೆಯೆಂಬೊ ಎತ್ತನೇರಿಕೊಂಡು || ತನುವೆಂಬೋದೆ ಒಂದು ಗೋಣಿಯಲ್ಲಿ ರಾಮನಾಮವೆಂಬೊ ಸರಕು ತುಂಬಿಕೊಂಡು || ಇಂದ್ರಿಯಂಗಳೆಂಬ ಸುಂಕದವರಡ್ಡ ಬಂದರೆ ಮು- ಕುಂದಮುದ್ರೆಯ ತೋರಿಸಿ ಹೊಡೆದಾಡಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಾನೇಕೆ ಪರದೇಶಿ ನಾನೇಕೆ ಬಡವನು

(ರಾಗ ಕೇದಾರಗೌಳ ಛಾಪು ತಾಳ ) ನಾನೇಕೆ ಪರದೇಶಿ ನಾನೇಕೆ ಬಡವನು ||ಪ|| ಘನ್ನ ಮಾನಾಭಿಮಾನಕ್ಕೆ ವಿಠಲ ನೀನಿರಲಾಗಿ ||ಅ|| ಮೂರುಲೋಕದ ಅರಸು ಶ್ರೀಹರಿ ಎನ್ನ ತಂದೆ ವಾರಿಜಮುಖಿ ಲಕುಮಿ ಎನ್ನ ತಾಯಿ ಮೂರು ಅವತಾರದ ಹನುಮಂತ ಎನ್ನ ಗುರು ಹರಿಭಕ್ತಜನರೆಲ್ಲ ಬಂಧುಬಳಗಿರಲಾಗಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೀನೇ ಗತಿಯೆನಗೆ - (ಲಕ್ಷ್ಮೀಸ್ತ್ರೋತ್ರ)

(ರಾಗ ಗಮನಕ್ರಿಯೆ ಮಟ್ಟೆತಾಳ ) ನೀನೇ ಗತಿಯೆನಗೆ ವನಜ ನೇತ್ರೆ ||ಪ|| ಕೈಲಾಸ ಎಂಬೋದು ಕಣ್ಣಿಲಿ ಕಾಣೆ ಮೈಲುವಾಹನಪಿತ ಎತ್ತ ಪೋದನೊ ಕಾಣೆ || ಸತ್ಯಲೋಕವೆಂಬೋದು ಮಿಥ್ಯವಾಗಿತು ಕಾಣೆ ಎತ್ತ ಪೋದನು ಬ್ರಹ್ಮ ಏನು ಮಾಡಲಿ ಅಮ್ಮ || ಸರಸಿಜನಾಭನು ಶರಧಿಯೊಳ್ ಮುಳುಗಿದ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೀನೇ ಬಲ್ಲಿದನೋ

(ರಾಗ ಶಂಕರಾಭರಣ ಅಟತಾಳ ) ನೀನೇ ಬಲ್ಲಿದನೋ ಹರಿ ನಿನ್ನ ದಾಸರು ಬಲ್ಲಿದರೊ ||ಪ|| ನಾನಾ ತೆರದಿ ನಿಧಾನಿಸಿ ನೋಡಲು ನೀನೇ ಭಕ್ತರಾಧೀನನಾದ ಮೇಲೆ ||ಅ|| ಜಲಜಭವಾಂಡಕ್ಕೆ ಒಡೆಯ ನೀನೆನಿಸುವೆ ಬಲು ದೊಡ್ಡವನು ನೀನಹುದೊ ಅಲಸದೆ ಹಗಲಿರುಳೆನ್ನದೆ ಅನುದಿನ
ದಾಸ ಸಾಹಿತ್ಯ ಪ್ರಕಾರ
ಬರೆದವರು

ತಾಂಬೂಲವ ಕೊಳ್ಳೋ

( ರಾಗ ಆನಂದಭೈರವಿ ಆದಿತಾಳ) ತಾಂಬೂಲವ ಕೊಳ್ಳೋ ತಮನ ಮರ್ದನನೆ, ಕಮಲ ವದನನನೆ ||ಪ|| ಅಂಬುಜಾಕ್ಷಿ ಮೋದದಿಂ ಮಡಚಿ ಕೊಡುತಾಳೆ ||ಅ|| ಸಂಪಿಗೆಣ್ಣೆ ಅತ್ತರು ಚಂದನದೆಣ್ಣೆ ಈ ಪರಿಪರಿವಿಧ ಪರಿಮಳದ ಎಣ್ಣೆ ಕೆಂಪುಕೇಸರಿ ಗಂಧಕಸ್ತೂರಿಯು ಚಂಪಕ ಮೊದಲಾದ ಪುಷ್ಪವ ಮುಡಿಯೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ತಾಯಿ ತಂದೆಯೆನ್ನ ಗುರು ದೈವ ನೀನೇ

( ರಾಗ ಸೌರಾಷ್ಟ್ರ ಅಟತಾಳ) ತಾಯಿ ತಂದೆಯೆನ್ನ ಗುರು ದೈವ ನೀನೇ, ಕೃಷ್ಣ ಪಾಹಿ ಪಂಚಾಕ್ಷರ ಪರಮಪುಣ್ಯ ನೀನೇ ||ಪ|| ಕಂದನು ಮಾಡಿದ ತಪ್ಪು ಕಾಯುವ ನೀನೇ, ರಾಮ ಕಂದರ್ಪಜನಕನೆ ಮೋಕ್ಷದಾತನು ನೀನೇ || ಅರುಣ ಕರುಣ ಪಿಡಿದು ಕರ್ಮ ಕಳೆಯಬೇಕೊ , ಮುಂದೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ತಾತ್ತತ ಧಿಮಿತ ಧಿಮಿಕಿ ಎನುತ

( ರಾಗ ತೋಡಿ ಅಟತಾಳ) ತಾತ್ತತ ಧಿಮಿತ ಧಿಮಿಕಿ ಎನುತ ಹರಿಯಾಡಿದನೆ ||ಪ|| ಚಿತ್ತಜಪಿತನುತ್ತಮ ಮುತ್ತಿನ ಗೊತ್ತುಗಳ್ ಕುತ್ತಿಯೊಳಗೆತ್ತ್ಯಾಡುತ ||ಅ|| ಹಾರ ಪದಕ ಕೇಯೂರ ಕಿರೀಟವು ಧೀರ ಬಾಹುಪುರಿಯದು ವೀರ ಹೊಳೆಯುತಿರೆ ಮಾರಜನಕ ಸುಕುಮಾರ ಸಾರಗುಣಸಾಂದ್ರ ಮಹಿಮಹರಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು