ಸಾಲಿಗರಿನ್ನು ಬಿಡುವರೆ

ಸಾಲಿಗರಿನ್ನು ಬಿಡುವರೆ

( ರಾಗ ದರ್ಬಾರ್ ಆದಿತಾಳ) ಸಾಲಿಗರಿನ್ನು ಬಿಡುವರೆ ||ಪ|| ಬಲು ಜಾಲಗಳನು ಮಾಡಿ ಕಾಲ ನೂಕಿ ಕಳೆದರೆ ||ಅ|| ಜಲದೊಳು ಪೊಕ್ಕಡಗಿರಲು , ಬಲು ಗಿರಿಯನೆ ಪೊತ್ತು ಭಾರವೆಂದೆನಲು ತಲೆ ಕುಕ್ಕಿ ನೆಲಕೆ ಬಗ್ಗಿರಲು ಹಲ್ಲ ಕಿರಿಕಿರಿದರಿಯೆಂದೆನಲು || ಕಾಯವ ವಂಚಿಸಿಕೊಳಲು , ಬಲು ರಾಯರುಗಳಲ್ಲಿ ಹೇಳು ಎಂದೆನಲು ನ್ಯಾಯಕ್ಕೆ ನುಡಿವೆಂದೆನಲು , ಬಲು ಗಾಯತತನದಿಂದ ಕೋಣೆಯೊಳ್ಹೋಗಲು || ಉಟ್ಟದ್ದು ಬಿಟ್ಟು ನಿಂದಿರಲು ,ಬಲು ಕೆಟ್ಟೆನೆಂದು ಕುದುರೆಯ ಪಿಡಿದಿರಲು ಕೊಟ್ಟದ್ದು ಕೊಡಲೊಲ್ಲೆನೆನಲು ಘಟ್ಟಿಗ ಪುರಂದರವಿಠಲನಿರಲು ||
ದಾಸ ಸಾಹಿತ್ಯ ಪ್ರಕಾರ
ಬರೆದವರು