ಪುರಂದರದಾಸ

Compositions of Purandara dasa

ಜಯಮಂಗಳಂ ನಿತ್ಯ ಶುಭಮಂಗಳಂ

(ರಾಗ ಮುಖಾರಿ ಅಟತಾಳ ) ಜಯಮಂಗಳಂ ನಿತ್ಯ ಶುಭಮಂಗಳಂ ||ಪ|| ವಾನರೇಂದ್ರನ ರೂಪವ ತಾಳಿದ ವನಧಿಯ ದಾಟಿ ಜಾನಕಿಗುಂಗುರವಿತ್ತ ದಾನವೇಂದ್ರನ ವನವನೆಲ್ಲವ ಕಿತ್ತು ಪಟ್ಟಣವನೆ ಸುಟ್ಟು ಇನಕುಲದ ರಾಮಗೆರಗಿದ್ಹನುಮಂತಗೆ || ದುಷ್ಟದುರ್ಯೋಧನನ ಮಡುಹಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೃಷ್ಣ ಬಾರೊ ಕೃಷ್ಣ ಬಾರೊ

(ರಾಗ ಮೋಹನ ಛಾಪು ತಾಳ) ಕೃಷ್ಣ ಬಾರೊ ಕೃಷ್ಣ ಬಾರೊ ಕೃಷ್ಣಯ್ಯ ನೀ ಬಾರಯ್ಯ ||ಪ|| ಸಣ್ಣ ಹೆಜ್ಜೆಯನಿಟ್ಟು ಗೆಜ್ಜೆನಾದಗಳಿಂದ ||ಅ|| ಮನ್ಮಥಜನಕನೆ ಬೇಗನೆ ಬಾರೊ ಕಮಲಾಪತಿ ನೀ ಬಾರೊ ಅಮಿತಪರಾಕ್ರಮ ಶಂಕರ ಬಾರೊ ಕಮನೀಯಗಾತ್ರನೆ ಬಾರಯ್ಯ ದೊರೆಯೆ || ಸುರುಳು ಕೇಶಗಳ ಒಲಿವ ಅಂದ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೃಷ್ಣನ ಭಜಿಪಗೆ ಮುಕುತಿಲ್ಲೆಂಬೋ ಭ್ರಷ್ಟನ ಬಾಯೊಳಗೊಂದು ಕೆರ

(ರಾಗ ಧನಶ್ರೀ ಲಾವಣಿಧಾಟಿ) ಕೃಷ್ಣನ ಭಜಿಪಗೆ ಮುಕುತಿಲ್ಲೆಂಬೋ ಭ್ರಷ್ಟನ ಬಾಯೊಳಗೊಂದು ಕೆರ ||ಪ|| ನಿಷ್ಠೆಯೊಳ್ ಹರಿದಾಸರ ಸೇವಿಸದ ಕ- ನಿಷ್ಠನ ಬಾಯೊಳಗೊಂದು ಕೆರ ||ಅ|| ನರಹರಿಮಹಿಮೆಯ ಸುಳ್ಳೆಂತೆಂಬುವ ನರನ ಬಾಯೊಳಗೊಂದು ಕೆರ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕರುಣಾಬ್ಧಿ ನೀನಂತೆ , ಉಳಿಸಿಕೊಳ್ಳಯ್ಯ ಪೆಸರ

(ರಾಗ ಮೋಹನ ಆದಿತಾಳ) ಕರುಣಾಬ್ಧಿ ನೀನಂತೆ , ಉಳಿಸಿಕೊಳ್ಳಯ್ಯ ಪೆಸರ ಕರುಣದಿ ಎನ್ನ ಮಾತ ಲಾಲಿಸಯ್ಯ ||ಪ|| ಶರಣರ ಪೊರೆವ ಬಿರುದು ನಿನ್ನದಯ್ಯ ಕರಪಿಡಿದೆನ್ಮನ ಹರಿಕೆಯ ನೀಡಯ್ಯ ||ಅ|| ನಾರಿಲಕುಮಿಪತಿ ದೇವ ನೀನುತ್ತಮ ಮೀರುವರನ ನಿನ್ನ ಕಾಣೆನಯ್ಯ ಕೋರಿದ ವರಗಳ ನೀಡುವ ದಾತನೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಈಸಲಾರೆನೆ ಈ ಸಂಸಾರದಲಿ

(ರಾಗ ನಾದನಾಮಕ್ರಿಯೆ ) ಈಸಲಾರೆನೆ ಈ ಸಂಸಾರದಲಿ, ಲೇಸು ಕಾಣೆನೆ ಇದರಲ್ಲಿ ಹೇ ಸಖಿಯೆ ಕೇಳೆ ||ಪ|| ಅತ್ತಿಗೆಯರು ಅತಿವ್ಯಭಿಚಾರಿಗಳಮ್ಮ , ಎಡೆ ಬಿಡದೆ ಎನ್ನ ಸುತ್ತಮುತ್ತ ಕಾದಿಹರೆ ನೋಡಮ್ಮ , ಅವರಂತೆ ಎನ್ನ ಚಿತ್ತದಲಿ ತಿಳಿದಿಹರೆ ಕೇಳಮ್ಮ , ಇವರೆಲ್ಲರ ಹಮ್ಮು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇಷ್ಟು ಪಾಪವ ಮಾಡಿದ್ದೆ ಸಾಕು

(ರಾಗ ಕಾಂಭೋಜ ಝಂಪೆ ತಾಳ ) ಇಷ್ಟು ಪಾಪವ ಮಾಡಿದ್ದೆ ಸಾಕು ||ಪ|| ಸೃಷ್ಟೀಶನೆ ಎನ್ನ ಉದ್ಧರಿಸಬೇಕು ||ಅ|| ಒಡಲ ಕಿಚ್ಚಿಗೆ ಪರರ ಕಡುನೋಯಿಸಿದೆ ಕೊಡದೆ ಅನ್ಯರ ಋಣವನಪಹರಿಸಿದೆ ಮಡದಿಯ ನುಡಿ ಕೇಳಿ ಒಡಹುಟ್ಟಿದವರೊಡನೆ ಹಡೆದ ತಾಯಿಯ ಕೂಡೆ ಹಗೆ ಮಾಡಿದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇದಕೊಳ್ಳಿ ಭವರೋಗಕೌಷಧವನು

( ರಾಗ ಕಾಂಭೋಜ ಝಂಪೆ ತಾಳ) ಇದಕೊಳ್ಳಿ ಭವರೋಗಕೌಷಧವನು ||ಪ|| ಇಂದ್ರಿಯವಜೈಸುವುದೆ ಇದಕೆ ಇಚ್ಛಾಪಥ್ಯ ||ಅ|| ವಾಸುದೇವನ ನಾಮ ವಾತವಿಧ್ವಂಸಿನಿ ಜನಾರ್ದನನ ನಾಮ ಜ್ವರಾಂಕುಶ ಮಾಧವನ ನಾಮವೇ ಮನಗಂಡ ಮಂಡೂರ ಮಂಗಳಾತ್ಮಕ ನಾಮ ಮಾಲ್ಯವಸಂತ || ಚಿಂತಾಯಕನ ನಾಮ ತ್ರೈಲೋಕ್ಯ ಚಿಂತಾಮಣಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇಕ್ಕೊ ನವನೀತ ಚೋರ ಸಿಕ್ಕಿದನಮ್ಮ

(ರಾಗ ನವರೋಜು ಏಕತಾಳ) ಇಕ್ಕೊ ನವನೀತ ಚೋರ ಸಿಕ್ಕಿದನಮ್ಮ , ಹೆ- ಮ್ಮಕ್ಕಳೆಲ್ಲರು ಕೂಡಿ ನಮ್ಮಕ್ಕರ ತೀರಿಸಿಕೊಂಬ ||ಪ|| ಅಂದು ಮೊದಲಾಗಿ ನಮ್ಮ ಮಂದಿರದೊಳು ಪೊಕ್ಕು ತಿಂದ ಮೀಸಲ ಬೆಣ್ಣೆ ದಂಧೆ ಮಾಡಿ ಪೋದನಕ್ಕ , ಬಹು ದಂಧೆ ಮಾಡಿ ಪೋದನಕ್ಕ || ಗಾಢದಿಂದಲಿವನ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಭಳಿ ಭಳಿರೆ ಎನ್ನ ಸುಖವೆಂಬುದೇ ಸುಖವು

(ರಾಗ ನಾಟಿ ಝಂಪೆತಾಳ)

 

ಭಳಿ ಭಳಿರೆ ಎನ್ನ ಸುಖವೆಂಬುದೇ ಸುಖವು

ಕಲಿಕಾಲಕಿದಕಿರಲೊ ಕಾವೇರಿ ರಂಗನೆ ||ಪ||

 

ತಂದೆ ನೀನೆ ಕೃಷ್ಣ, ತಾಯಿ ಇಂದಿರಾದೇವಿ

ಮಂದಜಾಸನ ಎನಗೆ ಹಿರಿಯಣ್ಣನು

ಇಂದುಮುಖಿ ಶ್ರೀಸರಸ್ವತಿದೇವಿಯತ್ತಿಗೆಯು

ಎಂದೆಂದಿಗೂ ವಾಯುದೇವರೇ ಗುರುವು ||

 

ಗುರುಪತ್ನಿ ಶ್ರೀಭಾರತಿಯು ನೋಡೆ ಮೇಲಾಗಿ

ಗರುಡಾಹಿ(ಗರುಡಾದಿ?) ರುದ್ರರಣ್ಣನ ಮಕ್ಕಳು

ಸುರರು ಸನಕಾದಿಗಳು ಪರಮ ಬಾಂಧವರೆನಗೆ

ಸ್ಥಿರವಾದ ವೈಕುಂಠವೆನಗೆ ಮಂದಿರವು || 

 

ನಿನ್ನ ಪಾದಾಂಬುರುಹ ಭಜಿಸುವುದೆ ಸೌಭಾಗ್ಯ

ನಿನ್ನ ನಿರ್ಮಾಲ್ಯಗಳೆ ಭೋಗದ್ರವ್ಯ

ನಿನ್ನ ಕಥೆ ಕೇಳುವುದೆ ಮಂಗಳ ಸುವಾದ್ಯಗಳು

ದಾಸ ಸಾಹಿತ್ಯ ಪ್ರಕಾರ
ಬರೆದವರು

ಜ್ಞಾನವಂತನಿಗೆ ವಿಧಿ ಕಾಡುವುದು ಸತ್ಯ

( ರಾಗ ಮುಖಾರಿ ಝಂಪೆ ತಾಳ) ಜ್ಞಾನವಂತನಿಗೆ ವಿಧಿ ಕಾಡುವುದು ಸತ್ಯ , ಅ ಜ್ಞಾನ ಮೂಢರಿಗೆ ಹರಿತನದ ಬಲವು ||ಪ|| ಚಂದ್ರನಿಗೆ ವಿಧಿ ಕಾಡಿ ಗ್ರಹಣ ನುಂಗುವದಾಯ್ತು ಇಂದ್ರನಿಗೆ ವಿಧಿಕಾಡಿ ಭಂಗಪಡಿಸಿತು ಚಂದದಲಿ ಪಾಂಡವರ ವನವಾಸ ಮಾಡಿಸಿತು
ದಾಸ ಸಾಹಿತ್ಯ ಪ್ರಕಾರ
ಬರೆದವರು