ಪುರಂದರದಾಸ

Compositions of Purandara dasa

ಕಮಲ ಕೋಮಲ ಕರತಲಲಾಲಿತ

(ರಾಗ ಸೌರಾಷ್ಟ್ರ ತ್ರಿಪುಟತಾಳ ) ಕಮಲ ಕೋಮಲ ಕರತಲಲಾಲಿತ ಪಾದಪಲ್ಲವ ನೀ ದಾರೈ ಕೃಷ್ಣ ಕಾಮಿನಿ ಭಾಮಿನಿರೂಪದ ಚಂದವ ನೋಡಬಂದೆನೇ ಭಾಮೇ ನಾನು ||೧|| ನಂದನಂದನ ಯದುಕುಲವಂದ್ಯನೆ ಇಂದುವದನ ನೀ ದಾರೈ ಕೃಷ್ಣ ಮಂಜುಳಭಾಷಿಣಿ ಕುರವಕಗಂಧಿನಿ ಕಂಜನಾಭನೆ ಬಾಲೇ ನಾನು || ೨ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಂಗಳಂ ಜಯ ಮಂಗಳಂ

(ರಾಗ ಸುರುಟಿ ಆದಿತಾಳ) ಮಂಗಳಂ ಜಯ ಮಂಗಳಂ ||ಪ|| ಗೋಪಗೋಪೀಸುತಗೆ ಗೋವಳರಾಯಕೆ ಗೋವರ್ಧನೋದ್ಧರ ಗೋವಿಂದಗೆ ಗೋಕುಲದಲಿ ಹುಟ್ಟಿ ಗೋವುಗಳನೆ ಕಾಯಿದ ಗೋಪಾಲಕೃಷ್ಣನ ಶ್ರೀಪಾದಕ್ಕೆ || ಭಕ್ತಜನ ಪಾಲಿಪಗೆ ಭವರೋಗವೈದ್ಯಗೆ ಅಚ್ಯುತಾನಂತ ಆದಿಪುರುಷಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಂಗಳಂ ಜಯ ಮಂಗಳಂ

ಮಂಗಳಂ ಜಯ ಮಂಗಳಂ ||ಪ|| ಸಾಗರದೊಳಾಡುವ ಮತ್ಸ್ಯನಿಗೆ ಬೇಗೆಗಿರಿಯ ಬೆನ್ನಲಿ ಪೊತ್ತ ಕೂರ್ಮನಿಗೆ ವೇಗದಿಂದಲಿ ಭೂಮಿಯ ತಂದ ವರಹಗೆ ಕೂಗಿದ ಶಿಶುಪರಿಪಾಲನಿಗೆ || ವಾಸವಾನುಜ ಪರಶುವರಾಯುಧ ದಾಶರಥಿ ರಾಮಚಂದ್ರನಿಗೆ ಸಾಸಿರದ್ಹರಿನಾರುನೂರೆಂಟು ಹೆಂಗಳ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮನ್ನಾರು ಕೃಷ್ಣಗೆ ಮಂಗಳ

( ರಾಗ ತೋಡಿ ಆದಿತಾಳ) ಮನ್ನಾರು ಕೃಷ್ಣಗೆ ಮಂಗಳ , ಜಗವ ಮನ್ನಿಸಿದೊಡೆಯಗೆ ಮಂಗಳ ||ಪ|| ಬೊಮ್ಮನ ಪಡೆದಗೆ , ಭಕ್ತರುದ್ಧಾರಿಗೆ ಕಮ್ಮಗೋಲನಯ್ಯಗೆ ಮಂಗಳ ಧರ್ಮರಕ್ಷಕನಿಗೆ ದಾನವಶಿಕ್ಷಗೆ ನಮ್ಮ ರಕ್ಷಿಸುವಗೆ ಮಂಗಳ || ತುರುಗಳ ಕಾಯ್ದಗೆ ಕರುಣಾಕರನಿಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಯಾತಕ್ಕೆ ದುರಾಶೆ ಎಲೆ ಮನವೆ

(ರಾಗ ಪೂರ್ವಿ ರೂಪಕ ತಾಳ) ಯಾತಕ್ಕೆ ದುರಾಶೆ ಎಲೆ ಮನವೆ ||ಪ|| ಎಲೆ ಮನವೆ ನೀ ತಿಳಿ ಮನವೆ ||ಅ|| ಜನ್ಮಜನ್ಮಾಂತರದ ಪೂಜೆ ಫಲವು ಅನುಭವಿಸಲ್ಲದೆ ಬಿಡದೆಲೊ ಮನವೆ || ಪಣೆಯಲ್ಲಿ ಬರೆದ ಬ್ರಹ್ಮನ ಲಿಪಿಯ ಮೀರುವುದುಂಟೆ ಜಗದೊಳು ಮನವೆ || ಪುರಂದರವಿಠಲನ ಚರಣಕಮಲಗಳು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹಾಲು ಮಾರಲು ಬಂದೆವಮ್ಮ

(ಶ್ರೀ ರಾಗ ಆದಿತಾಳ) ಹಾಲು ಮಾರಲು ಬಂದೆವಮ್ಮ ಈ ಮಧುರಾಪುರಕ್ಕೆ ||ಪ|| ಸೀರೆ ಶೃಂಗಾರದ ಕುಪ್ಪಸವ ತೊಟ್ಟು ಹರಿನಾಮಗಳಿಟ್ಟು ದೋರೆ ಬಂಗಾರದ ಬಳೆ ಕೈಕಟ್ಟು ಕಳವಳಿಸುತಲಿಟ್ಟು ಕ್ಷೀರದ ಬುಟ್ಟಿ ಶಿರದಲಿಟ್ಟು ಮಾರಬಂದೆವೆ ನಂದನ ಕಂಡು ದಾರಿಯೊಳಗೆ ನಮ್ಮ ಗೊಲ್ಲನ ಕಂಡು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹೆಣ್ಣು ಕೊಟ್ಟತ್ತೆಮಾವಂದಿರ ಮನೆಯಲ್ಲಿ

ಹೆಣ್ಣು ಕೊಟ್ಟತ್ತೆಮಾವಂದಿರ ಮನೆಯಲ್ಲಿ ಸೇರಿ ಇರುವರೇ ಎಲೆ ಮನುಜ ||ಪ|| ಬಂದ ಮೊದಲು ಇತ್ತ ಬನ್ನಿ ಕುಳ್ಳಿರೆಂದು ಬಲು ಉಪಚರಿಸುವರು ಅಂದಿನ ಮರುದಿನ ಬಂದ ಸ್ನೇಹಿತರನ್ನ ಕಂಡಂತೆ ಕಾಣೂವರೊ ಬಂದ ಮೂರಲ್ಲಿ ಪರದೇಶಿಯ ಕಂಡಂತೆ ಸಡ್ಡೆ ಮಾಡದೆ ಇಹರೊ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇಂತು ಶ್ರುತಿಸ್ಮೃತಿಗಳಲಿ ಸಾರುತಿದೆ

(ರಾಗ ಕಾಂಭೋಜ ಝಂಪೆತಾಳ) ಇಂತು ಶ್ರುತಿಸ್ಮೃತಿಗಳಲಿ ಸಾರುತಿದೆ ಕೋ ||ಪ|| ಕಂತುಪಿತನ ಗುಣಗಳನು ತಿಳಿಯಬೇಕು ||ಅ|| ಮನವ ಸಿರಿನರಹರಿಯ ಚರಣಕರ್ಪಿಸಬೇಕು ತನುವ ತೊಂಡರಿಗಡ್ಡ ಕೆಡಹಬೇಕು ಮಾತೆಯರ ಚೆಲುವಿಕೆಗೆ ಮರುಳಾಗದಿರಬೇಕು ಘನತೆಯಲಿ ಹರಿಚರಣ ಸ್ಮರಿಸುತಿರಬೇಕು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿ ಹರಿ ನಿನ್ನನು ಒಲಿಸಲುಬಹುದು

(ರಾಗ ಬಿಲಹರಿ ಅಟತಾಳ) ಹರಿ ಹರಿ ನಿನ್ನನು ಒಲಿಸಲುಬಹುದು ನರಜನರೊಲಿಸೋದು ಬಲು ಕಷ್ಟ ||ಪ|| ಸರಿಬಂದಂತೆ ಆಡುವ ಜನರಿಗೆ ಕಡೆತನಕಿರುವುದು ಬಲುಕಷ್ಟ ||ಅ|| ಸುಮ್ಮನೆ ಇದ್ದರೆ ಸೇರರು ಸಖರು ಗಮ್ಮಿನಾತನೆಂತೆಂಬೊ ರುನ್ಮಯದಿಂದ ಬಹಳನ್ನವನುಂಡರೆ ಭೂತಪ್ರಾಣಿ ಇವನೆಂಬರು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಜಯತು ಗೋಕುಲವಾಸ

(ರಾಗ ಸೌರಾಷ್ಟ್ರ ಝಂಪೆ ತಾಳ) ಜಯತು ಗೋಕುಲವಾಸ ದೈತ್ಯಪೂತವಿನಾಶ ಜಯತು ಕ್ಲೇಶವಿನಾಶ ಸರ್ವಲೋಕೇಶ ||೧|| ಜಯತು ರುಕ್ಮಿಣಿನಾಥ ಅನಾಥರಿಗೆ ನಾಥ ಜಯತು ಮಥುರಾನಾಥ ಪಾಲಿಸೋ ದಾತ ||೨|| ಜಯತು ಪಾವನಗಾತ್ರ ಚಾರುತರ ಚಾರಿತ್ರ ಜಯತು ಜಲಜಾನೇತ್ರ ಮುನಿನುತಿಪಾತ್ರ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು