ಕರುಣಾಬ್ಧಿ ನೀನಂತೆ , ಉಳಿಸಿಕೊಳ್ಳಯ್ಯ ಪೆಸರ

ಕರುಣಾಬ್ಧಿ ನೀನಂತೆ , ಉಳಿಸಿಕೊಳ್ಳಯ್ಯ ಪೆಸರ

(ರಾಗ ಮೋಹನ ಆದಿತಾಳ) ಕರುಣಾಬ್ಧಿ ನೀನಂತೆ , ಉಳಿಸಿಕೊಳ್ಳಯ್ಯ ಪೆಸರ ಕರುಣದಿ ಎನ್ನ ಮಾತ ಲಾಲಿಸಯ್ಯ ||ಪ|| ಶರಣರ ಪೊರೆವ ಬಿರುದು ನಿನ್ನದಯ್ಯ ಕರಪಿಡಿದೆನ್ಮನ ಹರಿಕೆಯ ನೀಡಯ್ಯ ||ಅ|| ನಾರಿಲಕುಮಿಪತಿ ದೇವ ನೀನುತ್ತಮ ಮೀರುವರನ ನಿನ್ನ ಕಾಣೆನಯ್ಯ ಕೋರಿದ ವರಗಳ ನೀಡುವ ದಾತನೆ ಭಾರತೀಶ ವಾಯುಮತದಲಿ ಇರಿಸಯ್ಯ || ಐದೆರಡು ಮೇಲೆರಡು ಊರ್ಧ್ವಪುಂಡ್ರಗಳಯ್ಯ ಐದು ಮುದ್ರಾಂಕಿತವು ಭೇದಗಳಯ್ದು ಐದು ವಿಧಗಳಲಿ ತಾರತಮ್ಯಜ್ಞಾನ ಐದು ಮೂರನೆ ಮೊಗು ಕೃಷ್ಣಯ್ಯ ನೀಡೆನಗೆ || ಹೊಳೆವ ಸುದರ್ಶನ ಎಡದಲಿ ಶಂಖವು ಥಳಥಳಿಸುವ ದಿವ್ಯ ತುಳಸಿಯ ಹಾರ ಸುಲಭದಿಂದಲಿ ಒಲಿವ ಚೆಲುವ ರಾಜಗೋಪಾಲ ಕೊಳಲನೂದುವ ತಂದೆ ಪುರಂದರವಿಠಲಯ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು