ಜ್ಞಾನವಂತನಿಗೆ ವಿಧಿ ಕಾಡುವುದು ಸತ್ಯ
( ರಾಗ ಮುಖಾರಿ ಝಂಪೆ ತಾಳ)
ಜ್ಞಾನವಂತನಿಗೆ ವಿಧಿ ಕಾಡುವುದು ಸತ್ಯ , ಅ
ಜ್ಞಾನ ಮೂಢರಿಗೆ ಹರಿತನದ ಬಲವು ||ಪ||
ಚಂದ್ರನಿಗೆ ವಿಧಿ ಕಾಡಿ ಗ್ರಹಣ ನುಂಗುವದಾಯ್ತು
ಇಂದ್ರನಿಗೆ ವಿಧಿಕಾಡಿ ಭಂಗಪಡಿಸಿತು
ಚಂದದಲಿ ಪಾಂಡವರ ವನವಾಸ ಮಾಡಿಸಿತು
ಅಂದು ಲಲನೆ ಸೀತೆಯನ್ನು ಲಂಕೆಯಲಿಡಿಸಿತು ||
ಹಿಂದಕ್ಕೆ ಹರಿಶ್ಚಂದ್ರನರಣ್ಯವ ಸೇರಿಸಿತು
ಮಡದ್ಯಾಗಿ ಕಾಡಿತೊ ಕರಿಬಂಟಗೆ
ದುಮ್ದದೀಶ್ವರನ ಸುಡುಗಾಡ ಸೇರಿಸಿತು
ಇನ್ನು ವಿಧಿಯನು ನೋಡು ನರರ ಪಾಡೇನು ||
ವಿಧಿ ಕಾಡೋ ಕಾಲಕ್ಕೆ ಇಲ್ಲದಪವಾದ ಬಂತು
ಕಲಿಸಿತೋ ಸುಳ್ಳು ಕಳವು ಹಾದರವ
ವಿಧಿಯೊಳಗಾಗದಾ ನರರು ಮತ್ತಿಲ್ಲ
ವಿಧಿ ಗೆದ್ದನೊ ಪುರಂದರಾವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments