ಪುರಂದರದಾಸ

Compositions of Purandara dasa

ಕೋತಿ ಹಾಗೆ ಕುಣಿದಾಡಬೇಡ

(ರಾಗ ನಾದನಾಮಕ್ರಿಯೆ ಅಟತಾಳ) ಕೋತಿ ಹಾಗೆ ಕುಣಿದಾಡಬೇಡ ರೀತಿಮಾರ್ಗವ ಹಿಡಿಯೆಲೊ ಮೂಢ ||ಪ|| ಆತುರ ಹಚ್ಚಿ ಕೂಗಾಡಬೇಡ ಪಾತಕ್ಕೆ ಈ ಜನ್ಮ ಬಿದದಿರೊ ಮೂಢ ||ಅ|| ಹಳ್ಳೂರು ಕೇರ್ಯಾಗೆ ಇರುವುದು ಹಂದಿ ನಾನಾ ಜನ್ಮವ ತಿರುಗುತ ಬಂದೆ ಇಷ್ಟು ಸಂಸಾರವ ಮರೆಮಾಡಿಕೊಂಡೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಲಿಯುಗದೊಳು ಹರಿನಾಮವ ನೆನೆದರೆ

(ರಾಗ್ ಬೇಹಾಗ್ ಆದಿತಾಳ) ಕಲಿಯುಗದೊಳು ಹರಿನಾಮವ ನೆನೆದರೆ ಕುಲಕೋಟಿಗಳುದ್ಧರಿಸುವುವು ||ಪ|| ಸುಲಭದ ಮುಕುತಿಗೆ ಸುಲಭನೆಂದೆನಿಸುವ ಜಲರುಹನಾಭನ ನೆನೆಮನವೆ ||ಅ|| ಸ್ನಾನವನರಿಯೆನು ಮೌನವನರಿಯೆನು ಧ್ಯಾನವನರಿಯೆನೆಂದೆನಬೇಡ ಜಾನಕಿವಲ್ಲಭ ದಶರಥನಂದನ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆರೇನು ಮಾಡುವರು ಅವನಿಯೊಳಗೆ

(ರಾಗ ಕಾಂಭೋಜ ಝಂಪೆತಾಳ ) ಆರೇನು ಮಾಡುವರು ಅವನಿಯೊಳಗೆ ||ಪ|| ಪೂರ್ವ ಜನ್ಮದ ಕರ್ಮ ಹಣೆಯಲಿ ಬರೆದುದಕೆ ||ಅ|| ಮಾಡಿದಾಡುಗೆಯು ಕೆಡಲು , ಮನೆಯ ಗಂಡಸು ಬಿಡಲು ಕೂಡಿದ್ದ ಸತಿ ತಾನು ಕುಣಿಸ್ಯಾಡಲು ಗೋಡೆಗೆ ಬರೆದ ಹುಲಿ ಘುಡುಘುಡಿಸಿ ತಿನಬರಲು ಆಡದ ಮಾತುಗಳು ಅಖಿಳರೂ ನಿಜವೆನಲು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೇಳನೋ ಹರಿ ತಾಳನೋ

(ರಾಗ ಕಲ್ಯಾಣೀ ಅಟತಾಳ) ಕೇಳನೋ ಹರಿ ತಾಳನೋ ||ಪ|| ತಾಳಮೇಳಗಳಿದ್ದು ಪ್ರೇಮವಿಲ್ಲದ ಗಾನ ||ಅ|| ತಂಬೂರಿ ಮೊದಲಾದ ಅಖಿಳವಾದ್ಯಗಳಿದ್ದು ಕೊಂಬು ಕೊಳಲು ಧ್ವನಿ ಸ್ವರಗಳಿದ್ದು ತುಂಬುರು ನಾರದರ ಗಾನ ಕೇಳುವ ಹರಿ ನಂಬಲಾರ ಈ ಡಂಭಕದ ಕೂಗಾಟ || ನಾನಾಬಗೆಯ ರಾಗ ಭಾವ ತಿಳಿದು ಸ್ವರ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಜಯ ಜಯ ಮಂಗಳ ಹರಿಗೆ

(ಶ್ರೀರಾಗ ಆದಿತಾಳ) ಜಯ ಜಯ ಮಂಗಳ ಹರಿಗೆ ಜಯ ಜಯ ಮಂಗಳ ಸಿರಿಗೆ ಜಯ ಜಯ ಮಂಗಳ ವರದಪುರಂದರವಿಠಲಗೆ ||೧|| ಶುಭ ಇದು ಶೋಭನ ಹರಿಗೆ ಶುಭ ಇದು ಶೋಭನ ಸಿರಿಗೆ ಶುಭ ಇದು ಶೋಭನ ವರದಪುರಂದರವಿಠಲಗೆ ||೨|| ಪರಮಾನಂದವು ಹರಿಗೆ ಪರಮಾನಂದವು ಸಿರಿಗೆ ಪರಮಾನಂದವು ವರದಪುರಂದರವಿಠಲಗೆ ||೨||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೊಟ್ಟವರು ಸರಿಯೆ , ಕೊಡದೆ ಬಿಟ್ಟವರು ಸರಿಯೆ

(ರಾಗ ಪೂರ್ವಕಲ್ಯಾಣಿ ಆದಿತಾಳ) ಕೊಟ್ಟವರು ಸರಿಯೆ , ಕೊಡದೆ ಬಿಟ್ಟವರು ಸರಿಯೆ ||ಪ|| ಇಕ್ಕಿದವರಿಗುಂಟು , ಮದದಲಿ ಸೊಕ್ಕಿದರೇನುಂಟು ರಕ್ಕಸಾಂತಕ ನಮ್ಮ, ಲಕುಮಿಪತಿಯ ಮೊರೆ ಹೊಕ್ಕವರಾದ ಭಜಕರಿಗೆ || ಅರಸನದರು ಸರಿಯೆ , ನಮಗೆ , ತಿರುಕನಾದರು ಸರಿಯೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಜಂಗಮರು ನಾವು ಜಗದೊಳು

( ರಾಗ ನಾದನಾಮಕ್ರಿಯೆ ಏಕತಾಳ) ಜಂಗಮರು ನಾವು ಜಗದೊಳು ||ಪ|| ಜಂಗಮರು ನಾವು ಲಿಂಗಾಂಗಿಗಳು ಮಂಗಳವಂತರು ಭವಿಗಳೆಂತೆಂಬಿರಿ ||ಅ|| ಹರಗುರು ದೈವ ಕೇಶವ ನಮ್ಮ ಮನೆದೈವ ವರದ ಮೋಹನ ಗುರುಶಾಂತೇಶ ಹರಗುರು ದ್ರೋಹ ಮಾಡಿದ ಪರವಾದಿಯು ರೌರವ ನರಕದಿ ಮುಳುಗುವುದೆ ಸಿದ್ಧ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏಕೆ ಚಿಂತಿಪೆ ಬರಿದೆ ನೀ

(ರಾಗ ಖರಹರಪ್ರಿಯ ಛಾಪು ತಾಳ) ಏಕೆ ಚಿಂತಿಪೆ ಬರಿದೆ ನೀ , ವಿಧಿ ಬರೆದ ವಾಕು ತಪ್ಪದು ಪಣೆಯೊಳು , ಮರುಳೆ ||ಪ|| ಹುಟ್ಟಲಿಕೆ ಮೊದಲೆ ತಾಯ ಮೊಲೆಯೊಳಗೆ ಇಟ್ಟಿದ್ದಿಯೋ ಕ್ಷೀರವ ತೊಟ್ಟಿಲೊಳು ಮಲಗುವಾಗ , ಗಳಿಸಿ ನೀ ಇಟ್ಟುಕೊಂಡುಣುತಿದ್ದೆಯ, ಮರುಳೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕುರುಡು ನಾಯಿ ತಾ ಸಂತೆಗೆ ಬಂತಂತೆ

(ರಾಗ ಪೂರ್ವಿ ಆದಿತಾಳ) ಕುರುಡು ನಾಯಿ ತಾ ಸಂತೆಗೆ ಬಂತಂತೆ ಅದು ಏತಕೆ ಬಂತೋ ||ಪ|| ಖಂಡ ಸಕ್ಕರೆ ಹಿತವಿಲ್ಲವಂತೆ ಖಂಡ ಎಲುಬು ಕಡಿದಿತಂತೆ ಹೆಂಡಿರ ಮಕ್ಕಳ ನೆಚ್ಚಿತಂತೆ ಕೊಂಡು ಹೋಗುವಾಗ ಯಾರಿಲ್ಲವಂತೆ || ಭರದಿ ಅಂಗಡಿ ಹೊಕ್ಕಿತಂತೆ ತಿರುವಿ ದೊಣ್ಣೆಲಿ ಇಕ್ಕಿದರಂತೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಾಗದ ಬಂದಿದೆ ನಮ್ಮ ಕಮಲನಾಭನದು

(ರಾಗ ( ಮುಸಲ್ಮಾನಿ ) ಗಮನಶ್ರಮ ಏಕತಾಳ) ಕಾಗದ ಬಂದಿದೆ ನಮ್ಮ ಕಮಲನಾಭನದು, ಈ ಕಾಗದವನ್ನು ಓದಿಕೊಂಡು ಕಾಲವ ಕಳೆಯಿರೊ ||ಪ|| ಕಾಮಕ್ರೋಧವ ಬಿಡಿರೆಂಬೊ ಕಾಗದ ಬಂದಿದೆ ನೇಮನಿಷ್ಠೆಯೊಳಿರೆಂಬೊ ಕಾಗದ ಬಂದಿದೆ ತಾಮಸ ಜನರನ್ನು ಕೂಡದಿರೆಂಬೋ ಕಾಗದ ಬಂದಿದೆ , ನಮ್ಮ
ದಾಸ ಸಾಹಿತ್ಯ ಪ್ರಕಾರ
ಬರೆದವರು