ಪುರಂದರದಾಸ

Compositions of Purandara dasa

ಪ್ರಾತಃಕಾಲದ ನಿದ್ರೆ ಪರಿಹರಿಸಿ (ಪ್ರಾತಃಸ್ಮರಣೆ)

ಪ್ರಾತಃಕಾಲದ ನಿದ್ರೆ ಪರಿಹರಿಸಿ ಹರಿಯ ಸ್ಮರಿಸಿ ನಾಥ ಗೋವಿಂದಗೆ ಪ್ರದಕ್ಷಿಣೆ ಮಾಡಿ ಪ್ರೀತಿಯೊಳತಿಥಿಪೂಜೆಗೆಯ್ದು ಪುರಾಣ ಶಾಸ್ತ್ರವ ಕೇಳಿ ನಾಥ ಶ್ರೀಪುರಂದರವಿಠಲಗೆ ನಮೋ ಎನ್ನು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮನ ಚಂಚಲದಿ ತಪವ ಮಾಡಲು ಅಶಕ್ಯವು

ಮನ ಚಂಚಲದಿ ತಪವ ಮಾಡಲು ಅಶಕ್ಯವು ಘನ ಅಜ್ಞಾನದಿ ಹಲವು ಕರ್ಮವು ಹತ್ತವು ಧನಶುದ್ಧಿಯಿಲ್ಲದೆ ದಾನವು ವೃಥಾ ಇವು ಇನಿತಾದ್ದರಿಂದ ಪುರಂದರವಿಠಲ ಈ ಯುಗದಿ ತನ್ನ ನಾಮಸ್ಮರಣೆ ಲೇಸೆಂದನು
ದಾಸ ಸಾಹಿತ್ಯ ಪ್ರಕಾರ
ಬರೆದವರು

ದರಿದ್ರರೆನ್ನಬಹುದೆ ಹರಿದಾಸರ

ದರಿದ್ರರೆನ್ನಬಹುದೆ ಹರಿದಾಸರ ಸಿರಿವಂತರೆನಬಹುದೆ ಹರಿದ್ರೋಹಿಗಳ ಹರಿದಾಸರ ಮೇಲಿದ್ದ ಕರುಣವು ಸಿರಿದೇವಿ ಮೇಲಿಲ್ಲವೋ ಪುರಂದರ ವಿಠಲನ ಆಳುಗಳಿಗೆ ಎಲ್ಲಿಹುದೈ ಮಾನಾಭಿಮಾನ ಜಗದಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಲಗಿ ಪಾಡಿದರೆ ಕುಳಿತು ಕೇಳುವನು

ಮಲಗಿ ಪಾಡಿದರೆ ಕುಳಿತು ಕೇಳುವನು ಕುಳಿತು ಪಾಡಿದರೆ ನಿಂತು ಕೇಳುವನು ನಿಂತು ಪಾಡಿದರೆ ನಲಿದು ಕೇಳುವನು ನಲಿದು ಪಾಡಿದರೆ ಸ್ವರ್ಗ ಸೂರೆಬಿಟ್ಟೆನೆಂಬ ಪುರಂದರವಿಠಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮನ ಶುದ್ಧಿಯಿಲ್ಲದವಗೆ ಮಂತ್ರದ ಫಲವೇನು

ಮನ ಶುದ್ಧಿಯಿಲ್ಲದವಗೆ ಮಂತ್ರದ ಫಲವೇನು ತನು ಶುದ್ಧಿಯಿಲ್ಲದವಗೆ ತೀರ್ಥ ಫಲವೇನು ಮಿಂದಲ್ಲಿ ಫಲವೇನು ಮೀನು ಮೊಸಳೆಯಂತೆ ನಿಂದಲ್ಲಿ ಫಲವೇನು ಶ್ರೀಶೈಲದ ಕಾಗೆಯಂತೆ ಹೊರಗೆ ಮಿಂದು ಒಳಗೆ ಮೀಯದವರ ಕಂಡು ಬೆರಗಾಗಿ ನಗುತಿದ್ದ ಪುರಂದರ ವಿಠಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ತಪ್ಪು ಸಾಸಿರಗಳ ಒಪ್ಪಿ ಕಾಯೋ ಕೃಪಾಳು

ತಪ್ಪು ಸಾಸಿರಗಳ ಒಪ್ಪಿ ಕಾಯೋ ಕೃಪಾಳು | ಮುಪ್ಪುರವನಳಿದಂಥ ಮುನೀಂದ್ರ ವಂದ್ಯ | ಅಪ್ರಮೇಯನೆ ನಿನ್ನ ಅದ್ಭುತ ಮಹಿಮೆಗಳ | ಅಪ್ಪು ನಿಧಿಯಲಿ ಪುಟ್ಟಿದವಳರಿಯಳು | ಕಪ್ಪು ಮೇಘ ಕಾಂತಿಯೊಪ್ಪುವ ತಿಮ್ಮಪ್ಪ | ಅಪ್ರಾಕೃತರೂಪ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿನ್ನನೆ ಪಾಡುವೆ ನಿನ್ನನೆ ಪೊಗಳುವೆ

ನಿನ್ನನೆ ಪಾಡುವೆ ನಿನ್ನನೆ ಪೊಗಳುವೆ | ನಿನ್ನನೆ ಬೇಡಿ ಬೇಸರಿಸುವೆ | ನಿನ್ನ ಕಾಲನು ಪಿಡಿವೆ ನಿನ್ನ ಹಾರೈಸುವೆ | ನಿನ್ನ ತೊಂಡರಿಗೆ ಕೈ ಕೊಡುವೆ || ನಿನ್ನಂತೆ ಸಾಕಬಲ್ಲ ದೇವರಿನ್ನುಂಟೆ | ಘನ್ನ ಪುರಂದರವಿಠಲ ದೇವರ ದೇವ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಂತತಿ ಆಹೋದು ರಾಮಾಯಣವ ಕೇಳಲು

ಸಂತತಿ ಆಹೋದು ರಾಮಾಯಣವ ಕೇಳಲು | ಸಕಲ ಪಾಪಹರವು ಭಾರತ ಕೇಳಲು | ತಂತುಮಾತ್ರ ವಿಷ್ಣುಪುರಾಣವ ಕೇಳಲು | ತತ್ವ ವಿವೇಕವು ಬಾಹೋದು || ಅಂತರವರಿತು ಭಾಗವತ ಕೇಳಲು | ಆಹೋದಗ್ರ್ಯನಾ ಭಕ್ತಿ ವೈರಾಗ್ಯವು | ಸಂತತ ಪುರಂದರವಿಠಲನ ಸಂಕೀರ್ತನೆ ಪಾಡಲು | ಸಕಲವು ಬಾಹೋದು ಸಾಯುಜ್ಯವು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹಾರುವನ್ನ ಹೆಟ್ಟಬೇಕು

ಹಾರುವನ್ನ ಹೆಟ್ಟಬೇಕು | ಹಾರುವನ್ನ ಕುಟ್ಟಬೇಕು | ಹಾರುವನ್ನ ಕಂಡರೆ ಚಂಪೆ ಮೇಲೆ ಹೊಡೆಯಬೇಕು || ಹಾರುವನು ಪರಧನ ಪರಸತಿ ವಶನಾಗಿ ಊರವೊಳಗೆ ಆರು ಮಂದಿ ಹಾರುವಾರು | ಮೈದಾರಹಾರ ತಂದೆ ( ಮೈದಾರ ಹಾರದಂತೆ? ) ಮಾಡು ಎನ್ನ ಪುರಂದರವಿಠಲ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹಾಡಿದರೆ ಎನ್ನೊಡೆಯನ ಹಾಡುವೆ

ಹಾಡಿದರೆ ಎನ್ನೊಡೆಯನ ಹಾಡುವೆ | ಬೇಡಿದರೆನ್ನೊಡೆಯನ ಬೇಡುವೆ | ಒಡೆಯಗೆ ಒಡಲನು ತೋರುತ | ಎನ್ನ | ಬಡತನ ಬಿನ್ನಹ ಮಾಡುವೆ| ಒಡೆಯ ಶ್ರೀ ಪುರಂದರವಿಠಲರಾಯನ | ಅಡಿಗಳನು ಬದುಕುವೆ, ಸೇರಿ ಬದುಕುವೆ |
ದಾಸ ಸಾಹಿತ್ಯ ಪ್ರಕಾರ
ಬರೆದವರು