ಪುರಂದರದಾಸ

Compositions of Purandara dasa

ಬಿಡು ಮನುಜಾ ಈ ಜಪವು ಸಿದ್ಧಿಗೆ ಬಾರದು

(ಜಪ) ಬಿಡು ಮನುಜಾ ಈ ಜಪವು ಸಿದ್ಧಿಗೆ ಬಾರದು ತೊಡೆಯ ಕೆಳಗೆ ಕೈ ಹಿಂದೆ ಮುಂದೆ ಕೈ ಚಾಚಿಬಿಡುತ ಮಂತ್ರಾರ್ಥ ನೋಡದಲೆ ಅಡಿಗಡಿಗೆ ಜಪವ ಮಾಡೆ ದೈತ್ಯರಿಗೆ ಆಹುದಯ್ಯ ಒಡೆಯ ಪುರಂದರವಿಠಲನೊಲಿಸಬೇಕಾದರೆ ಹಿಡಿಯೊ ಈ ಪರಿ ಹೇಳಿದ ವಚನತತ್ವಗಳ
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಮೆಯ ರಮಣನು ತಾನು ಬೊಮ್ಮಾದಿಗಳನೆಲ್ಲ

(ಅರ್ಘ್ಯ) ರಮೆಯ ರಮಣನು ತಾನು ಬೊಮ್ಮಾದಿಗಳನೆಲ್ಲ ಸುಮನಸರೊಳು ಸೂರ್ಯಗರ್ಘ್ಯವನಿತ್ತು ನಿಮ್ಮ ಪಾಪಗಳನೆಲ್ಲ ಚಿಮ್ಮಿ ಕಳೆಯಿರೆಂದು ಬೊಮ್ಮಮೂರುತಿ ತಾನು ಘಮ್ಮನೆ ಪೇಳಿರೆ ನಿಮ್ಮಜ್ಞಾನಕೆ ಸಿಲುಕಿ ಸುಮ್ಮನೆ ಕೆಡದಿರಿ ನಿಮ್ಮ ಶಿಕ್ಷಿಪನು ಪುರಂದರವಿಠಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹೃದಯದ ಮಲವನ್ನು ತೊಳೆಯಲರಿಯದೆ

(ಮನ ಶುದ್ಧಿ) ಹೃದಯದ ಮಲವನ್ನು ತೊಳೆಯಲರಿಯದೆ ತಾವು ಉದಯದಲೆದ್ದು ಮಿಂದು ಗದಗದಗುಟ್ಟುವಂತೆ ಅದರಿಂದೇನು ಫಲ ಅದಕಿಂತ ಉದಯಾಸ್ತಮಾನ ನೀರೊಳಗಿಪ್ಪ ಮುದಿಕಪ್ಪೆ ಮಾಡಿದ ತಪ್ಪೇನಯ್ಯ ಪುರಂದರವಿಠಲನ ನಾಮವ ನೆನೆಯದೆ ದಿನಕ್ಕೆ ನೂರು ಬಾರಿ ಮುಳುಗಿದರೇನಯ್ಯ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೂಪದಲ್ಲಾದರು ಕೊಳದಿ ಮುಣುಗಿದಲ್ಲಾದರು

(ಗೋಪೀಚಂದನ ಮಹಿಮೆ) ಕೂಪದಲ್ಲಾದರು ಕೊಳದಿ ಮುಣುಗಿದಲ್ಲಾದರು ಪಾಪಿಯಲ್ಲಾದರು ಅಶುಚಿಯಲ್ಲಾದರು ಪತ್ನಿ ನೆರೆದಾದರು ಗೋಪೀಚಂದನದ ಸಂಪರ್ಕವಿದ್ದರೆ ಮುಖ್ಯವಿದು ಕಾಲ ಸಂಧ್ಯಾ ಎಂದು ಲಕ್ಷ್ಮೀಪತಿ ಪುರಂದರವಿಠಲ ಪೇಳ್ದ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹಲ್ಲು ಬೆಳಗುವಲ್ಲಿ ಬಿಂಬ

(ಹಲ್ಲು ಶುದ್ಧಿ) ಹಲ್ಲು ಬೆಳಗುವಲ್ಲಿ ಬಿಂಬ ಪ್ಲಕ್ಷಪತ್ರೆ ನೆಲ್ಲು ನಿಲ್ಲು ಮಹಾಲಯ ಪುಣ್ಯ ದಿವಸದಿ ಬಲ್ಲಿದೇಕಾದಶಿ ಪಾರ್ವಣ ಅಮಾವಾಸ್ಯೆಯೆ ಇಟ್ಟ ಶಶಿ ರವಿ ಗ್ರಹಣದಲ್ಲಿ ಅಲ್ಲದೆಯ್ಯ ( ಸಲ್ಲದಯ್ಯ? ) ದಂತಕಾಷ್ಠ ಮಲಿನಗಳಿಗೆ ಝಲ್ಲಿಸಿ ನೀರ ಮುಕ್ಕುಳಿಸಿ ಹನ್ನೆರಡು
ದಾಸ ಸಾಹಿತ್ಯ ಪ್ರಕಾರ
ಬರೆದವರು

ತಂಬೂರಿ ಮೀಟಿದವ ಭವಾಬ್ಧಿ ದಾಟಿದವ

ತಂಬೂರಿ ಮೀಟಿದವ ಭವಾಬ್ಧಿ ದಾಟಿದವ ತಾಳವ ತಟ್ಟಿದವ ಸುರರೊಳು ಸೇರಿದವ ಗೆಜ್ಜೆಯ ಕಟ್ಟಿದವ ಖಳರೆದೆ ಮೆಟ್ಟಿದವ ಗಾಯನ ಪಾಡಿದವ ಹರಿಮೂರ್ತಿ ನೋಡಿದ್ದವ ಪುರಂದರವಿಠಲನ ನೋಡಿದವ ವೈಕುಂಠಕ್ಕೆ ಓಡಿದವ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿಯೆಂಬೋದೆ ಲಗ್ನಬಲವು

ಹರಿಯೆಂಬೋದೆ ಲಗ್ನಬಲವು, ಹರಿಯೆಂಬೋದೆ ಸುದಿನಬಲವು ಹರಿಯೆಂಬೋದೆ ತಾರಾಬಲವು, ಹರಿಯೆಂಬೋದೆ ಚಂದ್ರಬಲವು ಹರಿಯೆಂಬೋದೆ ವಿದ್ಯಾಬಲವು, ಹರಿಯೆಂಬೋದೆ ದ್ರವ್ಯಬಲವು ಹರಿಲಕ್ಷ್ಮೀಪತಿ ಪುರಂದರವಿಠಲನೆ ಬಲವಯ್ಯ ಸರ್ವ ಸುಜನರಿಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಣುವಿಗೆ ಅಣುವಾಗಿ ಘನಕೆ ಘನವಾಗಿ

ಅಣುವಿಗೆ ಅಣುವಾಗಿ ಘನಕೆ ಘನವಾಗಿ ಗುಣತ್ರಯ ತತ್ವಕೆ ಮೀರಿದ ದೊರೆಯಾಗಿ ತೃಣ ಮೊದಲಾಗಿ ಮೇರು ಪರಿಯಂತ ಇರುವವ ನೀನಾಗಿ ಗುಣನಿಧಿ ಪುರಂದರವಿಠಲ ನಿನ್ನ ಮಹಿಮೆ ಎಣಿಕೆ ಮಾಡುವರ್ಯಾರೋ ಎನ್ನಪ್ಪನೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಡವರೊಳಗೆ ಎನ್ನಿಂದ್ಯಾರು ಬಡವರಿಲ್ಲ

ಬಡವರೊಳಗೆ ಎನ್ನಿಂದ್ಯಾರು ಬಡವರಿಲ್ಲ ಕೊಡುವರೊಳಗೆ ನಿನ್ನಿಂದ್ಯಾರು ಕೊಡುವರಿಲ್ಲ ದೃಢಭಕ್ತಿ ನಿನ್ನಲ್ಲಿ ಎನಗೆ ಕಲ್ಪಿಸಿ ಬಿಡದೆ ಸಲಹೊ ಶ್ರೀ ಪುರಂದರ ವಿಠಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿ ನೀನೊಲಿವಂತೆ ಮಾಡು

ಹರಿ ನೀನೊಲಿವಂತೆ ಮಾಡು ಒಲಿದರೆ ತಿರಿವಂತೆ ಮಾಡು ತಿರಿದರೆ ದಾರು ನೀಡದಂತೆ ಮಾಡು ದಾರು ನೀಡಿದರೆ ಪೊಟ್ಟೆ ತುಂಬದಂತೆ ಮಾಡು ಪೊಟ್ಟೆ ತುಂಬಿದರೆ ಬಟ್ಟೆ ದೊರೆಯದಂತೆ ಮಾಡು ಬಟ್ಟೆ ದೊರೆತರೆ ಇಂಬು ದೊರೆಯದಂತೆ ಮಾಡು ಇಂಬು ದೊರೆಯದಿದ್ದರೆ ರಂಗ ನಿನ್ನ ಪಾದಾರವಿಂದದಲ್ಲಿ
ದಾಸ ಸಾಹಿತ್ಯ ಪ್ರಕಾರ
ಬರೆದವರು