ಯಾತಕ್ಕೆ ದುರಾಶೆ ಎಲೆ ಮನವೆ

( ರಾಗ ಪೂರ್ವಿ. ರೂಪಕ ತಾಳ) ಯಾತಕ್ಕೆ ದುರಾಶೆ ಎಲೆ ಮನವೆ ||ಪ|| ಎಲೆ ಮನವೆ ನೀ ತಿಳಿ ಮನವೆ ನಿನಗ್ಯಾತಕ್ಕೆ ದುರಾಶೆ ||ಅ|| ಜನ್ಮ ಜನ್ಮಾಂತರದ ಪೂಜೆ ಫಲವು ಅನುಭವಿಸಲ್ಲದೆ ಬಿಡದೆಲೊ ಮನವೆ || ಪಣೆಯಲ್ಲಿ ಬರೆದ ಬ್ರಹ್ಮನ ಲಿಪಿಯ ಮೀರುವುದುಂಟೆ ಜಗದೊಳು ಮನವೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಾಘವೇಂದ್ರ ತೀರ್ಥನೀತ ರಾಜಿಸುವಾತ

ರಾಘವೇಂದ್ರ ತೀರ್ಥನೀತ ರಾಜಿಸುವಾತ || ಪ || ಪಾಪೌಘಗಳೆಲ್ಲವ ನೋಡಿಸಿ ಪುಣ್ಯಗಳೀವಾತಾ || ಅ || ಬಣ್ಣ ಬಣ್ಣದಿಂದ ಬಹಳ ಬೋಧಿಸುವಾತ - ಬಹಳ ಸಣ್ಣ ದೊಡ್ಡಭೀಷ್ಟಗಳ ಸಾಧಿಸುವಾತಾ ಪುಣ್ಯವಂತರಿಂದ ಬಹು ಪೂಜೆಗೊಂಬಾತ - ನಮಗೆ ಕಣ್ಣ ಹಬ್ಬವಾಗುವಂತೆ ಕಾಣಿಸುವಾತಾ || ೧ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಯಾರು ಬರುವರು ನಿನ್ನ ಹಿಂದೆ

( ರಾಗ ಯದುಕುಲಕಾಂಭೋಜ. ತ್ರಿಪುಟ ತಾಳ) ಯಾರು ಬರುವರು ನಿನ್ನ ಹಿಂದೆ ||ಪ|| ಇತ್ತ ಬಾರೆಂದು ಯಮಭಟರು ಸೆಳೆದೊಯ್ಯುವಾಗ ||ಅ|| ಸತಿಸುತರುಗಳು ಬರುವುದಿಲ್ಲ, ನಿನ್ನ ಹಿತವಾದ ಬಂಧು ಸ್ನೇಹಿತರು ಬರುವುದಿಲ್ಲ ಕ್ಷಿತಿಮಾನ್ಯಕ್ಷೇತ್ರವು ಬರುವುದಿಲ್ಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಯಾರು ಅರಿಯರೊ ನಮ್ಮೂರು

( ರಾಗ ಕಾಂಭೋಜ. ಆದಿ ತಾಳ) ಯಾರು ಅರಿಯರೊ ನಮ್ಮೂರು ಹರಿದಾಸರಿಗೊಲಿದರೆ ನಮ್ಮೂರು || ಅಂಡದ ತುದಿಯಲಿ ನಮ್ಮೂರು, ಅದು ಕಂಡವರಿಲ್ಲವೊ ನಮ್ಮೂರು ದಂಡೆ ಕಾಣದು ನಮ್ಮೂರು, ನಡು ಮಂಡೆಸ್ಥಳವೆ ನಮ್ಮೂರು || ಬೈಲಿಗೆ ಬೈಲೇ ನಮ್ಮೂರು, ಅದು ಬೈಲೇ ಬ್ರಹ್ಮನೆ ನಮ್ಮೂರು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಾರೋ ನಮ್ಮ ಮನೆಗೆ ಶ್ರೀ ರಾಘವೇಂದ್ರ

ಬಾರೋ ನಮ್ಮ ಮನೆಗೆ ಶ್ರೀ ರಾಘವೇಂದ್ರ || ಪ || ಬಾರೋ ದುಃಖಾಪಹಾರ - ಬಾರೋ ದುರಿತದೂರ ಬಾರಯ್ಯ ಸನ್ಮಾರ್ಗ ದಾರಿ ತೋರುವ ಗುರು || ಅ || ಬಾಲಪ್ರಹ್ಲಾದನಾಗಿ ಖೂಳ ಕಶ್ಯಪುವಿಗೆ ಲೋಲ ಶ್ರೀ ನರಹರಿ ಕಾಲರೂಪವ ತೋರ್ದೆ || ೧ || ವ್ಯಾಸನಿರ್ಮಿತ ಗ್ರಂಥ - ಮಧ್ವಕೃತ ಭಾಷ್ಯವ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೆರೆ ನಂಬಿದೆ ಮದ್‍ಹೃದಯಮಂಟಪದೊಳು

ನೆರೆ ನಂಬಿದೆ ಮದ್‍ಹೃದಯಮಂಟಪದೊಳು | ಪರಿಶೋಭಿಸುತಿರು ಪಾಂಡುರಂಗ |ಪ| ಶರಣಜನರ ಸಂಸಾರಮಹಾಭಯ | ಹರಣ ಕರುಣ ಸಿರಿ ಪಾಂಡುರಂಗ | ಅ ಪ | ನೆರೆದಿಹ ಬಹು ಜನರೊಳಿದ್ದರು ಮನ | ಸ್ಥಿರವಿಡು ನಿನ್ನಲಿ ಪಾಂಡುರಂಗ | ಪರಿಪರಿ ಕೆಲಸವು ನಿನ್ನ ಮಹಾಪೂಜೆ | ನಿರುತ ಎನಗೆ ಕೊಡು ಪಾಂಡುರಂಗ | ೧ |
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಂದಿವಾಹನ ನಳಿನಿಧರ

ನಂದಿವಾಹನ ನಳಿನಿಧರ ಮೌ ಳೇಂದು ಶೇಖರ ಶಿವ ತ್ರಿಯಂಬಕ ಅಂಧಕಾಸುರ ಮಥನ ಗಜಶಾರ್ದೂಲ ಚರ್ಮಧರ ಮಂದಜಾಸನತನಯ ತ್ರಿಜಗ ದ್ವಂದ್ಯ ಶುದ್ಧಸ್ಫಟಿಕ ಸನ್ನಿಭ ವಂದಿಸುವೆನನವರತ ಪಾಲಿಸೋ ಪಾರ್ವತೀರಮಣ ಫಣಿಫಣಾಂಚಿತಮುಕುಟರಂಜಿತ ಕ್ವಣಿತಡಮರುತ್ರಿಶೂಲಶಿಖಿ ದಿನ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇಲ್ಲಿರುವ ಪುರಂದರದಾಸರ ಕೀರ್ತನೆಗಳು ಮತ್ತು ಉಗಾಭೋಗಗಳ ಪಟ್ಟಿ ( ೬- ಏಪ್ರಿಲ್ - ೨೦೦೯ ರಲ್ಲಿನಂತೆ )

ಕೀರ್ತನೆಗಳು ====== ಅಂಗನೆಯರೆಲ್ಲ ನೆರೆದು ಅಂಗನೆಯರೆಲ್ಲ ನೆರೆದು ಚಪ್ಪಾಳಿಕ್ಕುತ ದಿವ್ಯ ಅಂಗಿ ತೊಟ್ಟೇನೆ, ಗೋಪಿ ಅಂಜಬೇಡ ಬೇಡಲೊ ಅಂಜಲೇತಕೆ ಮನವೆ ಅಂಜಿಕಿನ್ನಾತಕಯ್ಯ , ಸಜ್ಜನರಿಗೆ ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ ಅಂತರಂಗದಲಿ ಹರಿಯ ಕಾಣದವ

ನಮಃ ಪಾರ್ವತೀ ಪತಿ ನುತಜನಪರ ನಮೊ ನಮೋ ವಿರೂಪಾಕ್ಷ

ನಮಃ ಪಾರ್ವತೀ ಪತಿ ನುತಜನಪರ ನಮೊ ನಮೋ ವಿರೂಪಾಕ್ಷ |ಪ| ರಮಾರಮಣನಲ್ಲಮಲಭಕುತಿ ಕೊಡು ನಮೋ ವಿಶಾಲಾಕ್ಷ |ಅ ಪ| ನೀಲಕಂಠ ತ್ರಿಶೂಲ ಡಮರು ಹಸ್ತಾಲಂಕೃತರಕ್ಷ | ಫಾಲನೇತ್ರ ಕಪಾಲ ರುಂಡಮಣಿ ಮಾಲಾ ಧೃತ ವಕ್ಷ | ಶೀಲರಮ್ಯ ವಿಶಾಲ ಸುಗುಣ ಸಲ್ಲೀಲ ಸುರಾಧ್ಯಕ್ಷ |
ದಾಸ ಸಾಹಿತ್ಯ ಪ್ರಕಾರ
ಬರೆದವರು

ಯಾರಿಗೆ ಮಾಡ್ತಿ ಮ್ಯಾ

( ರಾಗ ಪೂರ್ವಿ. ಅಟ ತಾಳ) ಯಾರಿಗೆ ಮಾಡ್ತಿ ಮ್ಯಾ, ಸಂಪದ ಯಾರಿಗೆ ಮಾಡ್ತಿ ಮ್ಯಾ ನಾರಾಯಣನೆಂಬ ನಿಜಪದವರಿಯದೆ ಹೋರಾಡುವೆ ಹಗಲಿರುಳೆಂದೆನ್ನದೆ ||ಪ|| ನಾರಿಯು ನಿನಗಿಹಳೆ, ಹುಟ್ಟಿದ ಪೋರನು ನಿನಗಿಹನೆ ಭಾರಿಯೊಡವೆಯುಂಟೆ ನಿನಗೀ ಊರಜನರು ನೆಂಟೆ |
ದಾಸ ಸಾಹಿತ್ಯ ಪ್ರಕಾರ
ಬರೆದವರು