ಪ್ರಾಚೀನ ಕರ್ಮವು ಬಿಡಲರಿಯದು
( ರಾಗ ಮುಖಾರಿ. ಝಂಪೆ ತಾಳ)
ಪ್ರಾಚೀನ ಕರ್ಮವು ಬಿಡಲರಿಯದು
ಯೋಚನೆಯ ಮಾಡಿ ನೀ ಬಳಲ ಬೇಡ || ಪ||
ಮುನ್ನ ಮಾಡಿದ ಕರ್ಮ ಬೆನ್ನಟ್ಟಿ ಬರುತಿರಲು
ತನ್ನಿಂದ ತಾನೆ ತಿಳಿಯಲರಿಯದೆ
ಇನ್ನು ದೇಹವನು ಆಶ್ರಯಿಸಿ ಫಲವೇನು
ಉನ್ನಂತ ಹರುಷದಲಿ ಮನದಿ ಯೋಚಿಸುವ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ಪ್ರಾಚೀನ ಕರ್ಮವು ಬಿಡಲರಿಯದು
- Log in to post comments