ಇತರೆ

ಪಟ್ಟಿಯಲ್ಲಿಲ್ಲದ ಬೇರೆ ದಾಸರ ರಚನೆಗಳಿಗೆ ಈ ಟ್ಯಾಗ್ ಹಾಕಬಹುದು

ಕಂಡೆ ಕಂಗಳಲೆನ್ನ ಮಂಗಳಾತ್ಮನ

(ಮಾಂಡ್ ರಾಗ ಕೇರವಾ ತಾಳ) ಕಂಡೆ ಕಂಗಳಲೆನ್ನ ಮಂಗಳಾತ್ಮನ ಮಂಗಳಾಂಗ ಶ್ರೀಗುರು ರಂಗನ ಕಂಡೆ ||ಧ್ರುವ|| ಬಾಲಲೀಲೆ ತೋರಿದ ನೀಲವರ್ಣನ ಕಂಡೆ ಪಾಲಗಡಲಲಿಹ ಗೋಪಾಲನ ಕಂಡೆ ಮೂಲರೂಪದಲಿ ಫಲ್ಗುಣಗೊಲಿದನ ಕಂಡೆ ಕುಲಕೋಟಿ ಬಂಧುವಾದ ಬಳಗನ ಕಂಡೆ ||೧|| ಕೊಳಲನೂದುವ ಮೂರ್ತಿ ನಳಿನನಾಭನ ಕಂಡೆ ಥಳಥಳಿಸುವ ಪದ ಹೊಳೆವನ ಕಂಡೆ ಕಳಲ ಮೊಸರ ಬೆಣ್ಣೆ ಮೆಲುವ ಚೆಲುವನ ಕಂಡೆ ಇಳೆಯೊಳು ಗೋಕುಲದಿ ಸುಳಿದನ ಕಂಡೆ ||೨| ಕಿರೀಟಕುಂಡಲಕರ್ಣ ಕೌಸ್ತುಭಧರನ ಕಂಡೆ ಪರಿಪರಿಭೂಷಣ ಸರ್ವಾಂಗನ ಕಂಡೆ ಗರುಡವಾಹನ ಸ್ವಾಮಿ ಉರಗಶಯನನ ಕಂಡೆ ಸಿರಿಯ ಲೋಲಲಿಹ ಸರ್ವೋತ್ತಮನ ಕಂಡೆ ||೩|| ವಿದುರವಂದಿತ ದೇವ ಮದನಮೋಹನ ಕಂಡೆ ಸಾಧುಹೃದಯ ಪ್ರಾಣ ಶ್ರೀಮಾಧವನ ಕಂಡೆ ಯದುಕುಲೋತ್ತಮ ಮಧುಸೂದನನ ಕಂಡೆ ಆದಿ ಅವಿನಾಶ ಶ್ರೀಧರನ ಕಂಡೆ ||೪||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇವನೋಡಮ್ಮಾ ನವನೀತ ಚೋರಾ

(ಬಹಾರ್ ರಾಗ ತ್ರಿತಾಳ)

 

ಇವನೋಡಮ್ಮಾ ನವನೀತ ಚೋರಾ

ದೇವ ದೇವ ಮಾಮನೋಹರಾ ||ಪ||

 

ಗೋವನಿವ ಗೋಪಾಲ ಶ್ರೀಧರಾ

ಗೋವಿಸುವ ಈವ ದಾಮೋದರಾ

ಸಾವಿರ ನಾಮದೊಡೆಯಾ ಸಹಕಾರಾ

ಹಾವಿನ ಫಣಿ ಮೆಟ್ಟಿದ ವೀರಾ ||೧||

 

ಸಿರಿಯ ಲೋಲನಿವ ನಂದಕುಮಾರಾ

ಉರಗಶಯನ ಕೌಸ್ತುಭಧರಾ

ಪರಮಪುರುಷ ಹರಿಯೆ ಸುರವರಾ

ಮರುಳು ಮಾಡಿದವ ಗೊಲ್ಲತೇರಾ ||೨||

 

ಬೆಣ್ಣಿಮೊಸರು ಕದ್ದು ಒಯ್ವನಾ

ಕಣ್ಣಿಲೆ ಕಟ್ಟಬೇಕು ಇವನಾ

ಪುಣ್ಯ ಉಳ್ಳ ಯಶೋದೆ ಕಂದನಾ

ಬಣ್ಣಿಸೋ ಮಹಿಪತಿಯನುದಿನಾ ||೩||

ದಾಸ ಸಾಹಿತ್ಯ ಪ್ರಕಾರ
ಬರೆದವರು

ತಿಳಿದುಕೊಳ್ಳಿ ಖೂನ ಬಲ್ತು ನಿಜ ಜ್ಞಾನ

(ಸೋಹನಿ ರಾಗ ತೀನ್ ತಾಳ) ತಿಳಿದುಕೊಳ್ಳಿ ಖೂನ ಬಲ್ತು ನಿಜ ಜ್ಞಾನ ||ಧ್ರುವ|| ಹಾದಿ ಅದೆ ಹಿಂದೆ ಗಾದ ಅದೆ ಮುಂದೆ ಭೇದಿಸಿನ್ನು ತಿಳಿದುಕೊಳ್ಳಿ ಗುರುಕೃಪೆಯಿಂದೆ ||೧|| ಲಬ್ಧ ಅದೆ ಹಿಂದೆ ಶಬ್ದ ಅದೆ ಮುಂದೆ ಲುಬ್ಧವಾಗಿ ಕೇಳಿಕೊಳ್ಳಿ ಗುರುದಯದಿಂದೆ ||೨|| ಅರ್ಥ ಅದೆ ಹಿಂದೆ ಸ್ವಾರ್ಥ ಅದೆ ಮುಂದೆ ಅರ್ತು ಇದೇ ಕೇಳಿಕೊಳ್ಳಿ ಗುರುಪಾದಕೊಂದೆ ||೩|| ಗುಂಭ ಅದೆ ಹಿಂದೆ ಡಂಭ ಅದೆ ಮುಂದೆ ಇಂಬು ಇದೆ ತಿಳಿದುಕೊಳ್ಳಿ ಗುರುಜ್ಞಾನದಿಂದೆ ||೪|| ನೋಟ ಅದೆ ಮುಂದೆ ಕೂಟ ಅದೆ ಹಿಂದೆ ತನುವಿನೊಳು ಮಾಡಿಕೊಳ್ಳಿ ಖೂನ ನಿಜ ಒಂದೆ ||೫|| ದೇಹ ಅದೆ ಮುಂದೆ ನೋವು ಅದೆ ಹಿಂದೆ ಸೋಹ್ಯ (ಸೋಹಂ ) ದೋರಿಕೊಡುವ ಮಹಿಪತಿಗುರು ತಂದೆ ||೬||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಂಡೆನು ಕೌತುಕವ ಏನೆಂದ್ಹೇಳಲಿ ಸೋಜಿಗವ

( ಭೈರವಿ ರಾಗ ದಾದರಾ ತಾಳ) ಕಂಡೆನು ಕೌತುಕವ ಏನೆಂದ್ಹೇಳಲಿ ಸೋಜಿಗವ ||ಧ್ರುವ || ಅಜ ನುಂಗಿತು ಗಜವ ವಾಜಿ ನುಂಗಿತು ಈ ಮೂಜಗವ ರಾಜ್ಯ ನುಂಗಿತು ಪ್ರಜರ ಸಂಜೀವ ನುಂಗಿತು ಸಂಜೀವ ||೧|| ಇಲಿಯು ನುಂಗಿತು ಮೊಲವ ಹಲ್ಲಿ ನುಂಗಿತು ಹಲವು ಕುಲವ ಜಲ ನುಂಗಿತು ಜಲವ ಹುಲಿ ನುಂಗಿತು ಈ ಮಾರ್ಬಲವ ||೨|| ಅರಿಯು ನುಂಗಿತು ಮರವ ನೊರಜ ನುಂಗಿತು ಗಿರಿಪರ್ವತವ ಇರಹು ನುಂಗಿತು ಸರ್ವ ಬೆರಗಾಯಿತು ಮಹಿಪತಿಜೀವ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಾಣಬಹುದಕೆ ಕನ್ನಡಿ ಯಾಕೆ

(ಭೈರವಿ ರಾಗ ದಾದರಾ ತಾಳ) ಕಾಣಬಹುದಕೆ ಕನ್ನಡಿ ಯಾಕೆ , ಭಿನ್ನವಿಲ್ಲದೆ ನೋಡಿ ತನ್ನೊಳು ಘನಬ್ರಹ್ಮವಿರಲಿಕ್ಕೆ ಅನುಮಾನವು ಬ್ಯಾಡಿ ||ಧ್ರುವ|| ಕುಂಭಿನಿಯೊಳು ಘನಹೊಳೆಯುತ ತುಂಬಿ ತುಳುಕುತಲ್ಯಾದೆ ಉಂಬವರಿಗಿದಿರಿಡುತ ಬಿಂಬಿಸುತಲ್ಯಾದೆ ಹಂಬಲಿಸಿದರೆ ತನ್ನೊಳಗೆ ತಾ ಗುಂಭಗುರುತವಾಗ್ಯಾದೆ ಡಿಂಬಿನೊಳಗೆ ನಿಜದೋರುತ ಇಂಬು ತಾನೆ ಆಗ್ಯಾದೆ ||೧|| ಹೇಳುವ ಮಾತಿನ ಮಾತಿಲ್ಲ ಕೇಳಿರಯ್ಯ ಚೆನ್ನಾಗಿ ಒಳಹೊರಗಿದು ಭಾಸುತಿಹುದೆಲ್ಲಾ ಸುಳುವು ಬಲ್ಲಾತ ಯೋಗಿ ಕಳೆಕಾಂತಿಗಳ ಅನುಭವವೆಲ್ಲಾನು ತಿಳಿಯಬಲ್ಲವ ಭೋಗಿ ಹೊಳೆವುತಿಹುದು ಸರ್ವಮಯವೆಲ್ಲಾ ಮೊಳೆಮಿಂಚು ತಾನಾಗಿ ||೨|| ಇಲ್ಲೆವೆ ಎರಡು ಹಾದಿಯ ಕಟ್ಟಿ , ಗುಲ್ಲುಮಾಡದೆ ನೋಡಿ ಮ್ಯಾಲಿಹ ಸ್ಥಾನಸ್ಥಾನವ ಮುಟ್ಟಿ ಮೂಲಸ್ಥಾನವ ಕೂಡಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೊಂಡಿರ್ಯಾ ನೀವು ಕೊಂಡಿರ್ಯಾ

(ಕಾಲಿಂಗಡಾ ರಾಗ ದೀಪಚಂದಿ ತಾಳ) ಕೊಂಡಿರ್ಯಾ ನೀವು ಕೊಂಡಿರ್ಯಾ ಮಂಡಲದೊಳು ವಸ್ತು ಕೊಂಡಿರ್ಯಾ ||ಧ್ರುವ|| ಕೊಳಬೇಕಾದರೆ ನೀವು ತಿಳಿದುಕೊಂಡು ಬನ್ನಿ ||೧|| ತಿಳಿಯದಿದ್ದರೆ ಖೂನ ಕೇಳಿ ಸದ್ಗುರುವಿನ ||೨|| ಬೆಲೆಯು ಹೇಳುವದಲ್ಲ ನೆಲೆಯು ತಿಳಿಯುವದಲ್ಲ ||೩|| ಅಳೆದು ಕೊಡುವುದಲ್ಲ ಕೊಳಗ ಎಣಿಸುವುದಲ್ಲ ||೪|| ತೂಕ ಮಾಡುವದಲ್ಲ ಲೆಕ್ಕ ಇಡುವುದಲ್ಲ ||೫|| ಇಟ್ಟು ಮಾರುವುದಲ್ಲ ಕೊಟ್ಟರ್ಹೋಗುವುದಲ್ಲ ||೬|| ಪಂಡಿತರಿಗೆ ಪ್ರಾಣ ಕೊಂಡವರಿಗೆ ತ್ರಾಣ ||೭|| ಹೇಳಿದೆ ನಾ ನಿಮಗೊಂದು ಸುಲಭವಾಗಿಂದು ||೮|| ಒಮ್ಮನವಾದರೆ ಸುಮ್ಮನೆ ಬಾಹುದು ||೯|| ಸಾಧು ಸಜ್ಜನರಿಗೆ ಸಾಧ್ಯವಾಗದಿದು ||೧೦||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೋಡಿ ನೋಡಿ ನಿಮ್ಮೊಳು ನಿಜ ಘನವ

(ಕಾಫಿ ರಾಗ ತೀನ್ ತಾಳ) ನೋಡಿ ನೋಡಿ ನಿಮ್ಮೊಳು ನಿಜ ಘನವ ||ಧ್ರುವ|| ಆಧಾರ ಧೃಡದಿಂದ ಆರು ಸ್ಥಳವ ಮುಟ್ಟಿ ಆದಿ ಅನಾದಿಯ ಪಥವ ನೋಡಿ ||೧|| ಭೂಚರ ಖೇಚರ ಜಲಚರ ಗೋಚರ ಅಲಕ್ಷ ಮುದ್ರೆಯ ಸ್ಥಾನ ನೋಡಿ ||೨|| ಪರಾಪಶ್ಯಂತಿಯ ಮಧ್ಯಮ ವೈಖರಿ ವೇದಾಂತಾಕರದ ಸಾರ ನೋಡಿ ||೩|| ಪಂಚತತ್ವದ ಗತಿ ಪಂಚಪ್ರಾಣದ ಸ್ಥಿತಿ ಪಂಚ ಕರುಣಾಕೃತಿ ಗತಿ ನೋಡಿ ||೪|| ಸ್ಥೂಲಸೂಕ್ಷ್ಮ ಕಾರಣ ಮಹಾಕಾರಣ ನೋಡಿ ಆನಂದಗತಿಯಲಿ ಬೆರೆದಾಡಿ ||೫|| ಅಕ್ಷರಕ್ಷರವು ಶಬ್ದನಿಶ್ಶಬ್ದವು ಶೂನ್ಯ ಮಹಾ- ಶೂನ್ಯ ನಿಶ್ಶೂನ್ಯ ನೋಡಿ ||೬|| ಮಹಿಪತಿ ಸ್ವಾಮಿ ಶ್ರೀಗುರು ಸರ್ವೋತ್ತಮನ ನೋಡಿ ಆನಂದಗತಿಯಲಿ ಬೆರೆದಾಡಿ ||೭||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಾಡುತಲಿಹುದು ಬೆಡಗಿನ ಕೋಡಗ

(ಮಾಂಡ್ ರಾಗ ಕೇರವಾ ತಾಳ) ಕಾಡುತಲಿಹುದು ಬೆಡಗಿನ ಕೋಡಗ ಬಡವರಿಗಳವಲ್ಲ ಪೊಡವಿಯಲಿ ||ಧ್ರುವ|| ಮಾಯದ ಮುಖವದು ಮೋಹದ ನಾಶಿಕ ಮಾಯ ಮಕರ ಕಿವಿಗಣ್ಣುಗಳು ಹ್ಯಾವ ಹೆಮ್ಮೆಯು ಹುಬ್ಬು ಕಪಿ ಕಣ್ಣ ಎವೆಗಳು ಬಾಯಿ ನಾಲಗೆ ಹಲ್ಲು ಬಯಕೆಗಳು ||೧|| ಗರ್ವಗುಣ ಶಿರ ಗಾತ್ರ ಸರ್ವಾಂಗವು ದುರುಳ ದುರ್ಬುದ್ಧಿಯ ಬೆರಳುಗಳು ಎರಡು ತುಟಿಗಳೆಂಬ ನಿಂದೆ ದೂಷಣಗಳು ಕೊರಳು ಕುತ್ತಿಗೆ ದುಷ್ಕರ್ಮಗಳು ||೨|| ಹಣೆಯು ದಾಡಿಯು ಗಲ್ಲ ಪ್ರಪಂಚ ಶೋಭಿತ ಕಣ್ಣ ಭಾವಗಳಿವು ಚಂಚಲವು ಬಣ್ಣಬಣ್ಣದಿ ಕುಣಿದಾಡುವ ಕಪಿ ಗುಣ ಏನೆಂದ್ಹೇಳಲಿ ಕಪಿ ವಿವರಣವ ||೩|| ಉದರ ಬೆನ್ನುಗಳಿವು ಸ್ವಾರ್ಥ ಬುದ್ಧಿಗಳು ಮದಮತ್ಸರಗಳೆಂಬ ಕೈಗಳು ಪಾದ ಕಾಲುಗಳಿವು ಕಾಮಕ್ರೋಧಗಳು ಮೇದಿನಿಯೊಳು ಕುಣಿದಾಡುವದು ||೪||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮನವೇನೆಂಬುದನರಿಯೋ ಮನುಜ

---ಅಸಾವೇರಿ( ಜೀವನಪುರಿ ರಾಗ ) ಆದಿತಾಳ ಮನವೇನೆಂಬುದನರಿಯೋ ಮನುಜ ಮನವೇನೆಂಬುದನು ||ಧ್ರುವ || ಮನವೇನೆಂಬುದನನುಭವಕೆ ತಂದು ಖೂನದಲಿಡದೆ ಜ್ಞಾನದಲಿ ನಾನಾ ಶಾಸ್ತ್ರವ ಓದಿ ನೀ ಅನುದಿನ ಏನು ಘಳಿಸಿದ್ಯೊ ಮರುಳ ಮನುಜಾ ||೧|| ಉತ್ಪತ್ತಿ ಸ್ಥಿತಿ ಲಯ ಕರ್ತರೆಂದೆನಿಸಿ ಪ್ರತ್ಯೇಕವರನು ತೋರುತಲಿ ಮತ್ತೆ ಬ್ಯಾರ್ಯಾದ ಪರಬ್ರಹ್ಮೆಂದು ತಾ ಚಿತ್ತ ಭ್ರಮಿಸುದು ದಾವುದೊ ಮನುಜ ||೨|| ಏಕೋ ವಿಷ್ಣು ವೆಂದೆನಿಸಿ ಮುಖದಲಿ ಪೋಕ ದೈವಕೆ ಬಾಯದೆರೆಸುತಲಿ ನಾಕು ವೇದವ ಬಲ್ಲವನೆಂದೆನಿಸಿ ವಿಕಳಿಸುತಿಹುದು ದಾವುದೊ ಮನುಜ ||೩|| ಉತ್ತಮೋತ್ತಮರ ಕಂಡಾಕ್ಷಣದಿ ಹರುಷದಿ ನಿತ್ಯಿರಬೇಕೀ ಸಹವಾಸವೆನಿಸಿ ಮತ್ತೊಂದರಘಳಿಗಾಲಸ್ಯವ ತೋರಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಡೆವ ಬನ್ನಿ ಸಡಗರದಿಂದ ಘುಡಘುಡಿಸಿ

( ಭೈರವಿ ರಾಗ ಕೇರವಾ ತಾಳ) ಕಡೆವ ಬನ್ನಿ ಸಡಗರದಿಂದ ಘುಡಘುಡಿಸಿ ದೃಢವೆಂಬುದು ಕಡುಕಂಬನೆ ಮಾಡಿ ನಡನಡಿಸಿ ನುಡಿ ನಿಜ ಒಡನೆ ಪಡಗವ ತಂದು ಜಡದಿಡಸಿ ಜಡದಿಡಸಿ ಹುಡುಕಿ ತೆಗೆದಡಕುವ ನವನೀತ ಗಡಬಡಿಸಿ ಗಡಬಡಿಸಿ ||೧|| ಮೀಸಲಮನ ಕೆನೆಮೊಸರನೆ ಮಾಡಿ ಶೋಧಿಸಿ ಶೋಧಿಸಿ ವಾಸನೆ ಮೊಸರ ಕರಣೆಕುಸಕಿರಿದು ಮರ್ದಿಸಿ ಮರ್ದಿಸಿ ಮೋಸಹೋಗದೆ ದುರಾಶದ ಕಿಲ್ಮಿಷ ಝಾಡಿಸಿ ಝಾಡಿಸಿ ಧ್ಯಾಸ ಬಲಿದು ಸುವಾಸನೆ ಕಳಲ ಕಡೆವದಾರಂಭಿಸಿ ||೨|| ನಾಮದಿವ್ಯ ಮಂತವ ಕಟ್ಟಿ ವಿಷಮಬಿಡಿಸಿ ವಿಷಮಬಿಡಿಸಿ ನೇಮದಿಂದ ಸುಪ್ರೇಮದರವಿಗೆ ಘಮಗುಡಿಸಿ ಘಮಗುಡಿಸಿ ಶಮೆದಮೆವೆಂಬ್ಹಗ್ಗನೆ ಸಮವಿಡಿದು ಧಿಮಿಗುಡಿಸಿ ಧಿಮಿಗುಡಿಸಿ ಶ್ರಮಜನ್ಮದ ಹರುವ ಕ್ರಮಗೊಂಡಾಹಂ ಬಿಡಿಸಿ ||೩|| ನಾವು ನೀವೆಂಬ ಹೊಲೆಗುಡತಿಯ ನೆರೆಬಿಡಿಸಿ ನೆರೆಬಿಡಿಸಿ
ದಾಸ ಸಾಹಿತ್ಯ ಪ್ರಕಾರ
ಬರೆದವರು