ಕಡೆವ ಬನ್ನಿ ಸಡಗರದಿಂದ ಘುಡಘುಡಿಸಿ

ಕಡೆವ ಬನ್ನಿ ಸಡಗರದಿಂದ ಘುಡಘುಡಿಸಿ

( ಭೈರವಿ ರಾಗ ಕೇರವಾ ತಾಳ) ಕಡೆವ ಬನ್ನಿ ಸಡಗರದಿಂದ ಘುಡಘುಡಿಸಿ ದೃಢವೆಂಬುದು ಕಡುಕಂಬನೆ ಮಾಡಿ ನಡನಡಿಸಿ ನುಡಿ ನಿಜ ಒಡನೆ ಪಡಗವ ತಂದು ಜಡದಿಡಸಿ ಜಡದಿಡಸಿ ಹುಡುಕಿ ತೆಗೆದಡಕುವ ನವನೀತ ಗಡಬಡಿಸಿ ಗಡಬಡಿಸಿ ||೧|| ಮೀಸಲಮನ ಕೆನೆಮೊಸರನೆ ಮಾಡಿ ಶೋಧಿಸಿ ಶೋಧಿಸಿ ವಾಸನೆ ಮೊಸರ ಕರಣೆಕುಸಕಿರಿದು ಮರ್ದಿಸಿ ಮರ್ದಿಸಿ ಮೋಸಹೋಗದೆ ದುರಾಶದ ಕಿಲ್ಮಿಷ ಝಾಡಿಸಿ ಝಾಡಿಸಿ ಧ್ಯಾಸ ಬಲಿದು ಸುವಾಸನೆ ಕಳಲ ಕಡೆವದಾರಂಭಿಸಿ ||೨|| ನಾಮದಿವ್ಯ ಮಂತವ ಕಟ್ಟಿ ವಿಷಮಬಿಡಿಸಿ ವಿಷಮಬಿಡಿಸಿ ನೇಮದಿಂದ ಸುಪ್ರೇಮದರವಿಗೆ ಘಮಗುಡಿಸಿ ಘಮಗುಡಿಸಿ ಶಮೆದಮೆವೆಂಬ್ಹಗ್ಗನೆ ಸಮವಿಡಿದು ಧಿಮಿಗುಡಿಸಿ ಧಿಮಿಗುಡಿಸಿ ಶ್ರಮಜನ್ಮದ ಹರುವ ಕ್ರಮಗೊಂಡಾಹಂ ಬಿಡಿಸಿ ||೩|| ನಾವು ನೀವೆಂಬ ಹೊಲೆಗುಡತಿಯ ನೆರೆಬಿಡಿಸಿ ನೆರೆಬಿಡಿಸಿ ಸಾವಧಾನದಲಿ ಅನುಭವಾಮೃತ ನಿಜಕುಡಿಸಿ ನಿಜಕುಡಿಸಿ ಭಾವದಲಿ ಸದ್ಗುರು ದಯ ನವನೀತ ಝಲ್ಲಿಸಿ ಝಲ್ಲಿಸಿ ಸವಿಸವಿಗೊಂದು ಸುವಿದ್ಯ ಸಾರಾಯವ ಅನುಭವಿಸಿ ||೪|| ಕಡೆವ ಕುಶಲಿ ಒಬ್ಬಳೇ ಬಲು ನಿಜಜ್ಞಾನಶಕ್ತಿ ಶಕ್ತಿಯಿಂ ಒಡಗೂಡಲು ನಿಜಬಾಹುದು ಕೈಗೂಡಿ ಸದ್ಗತಿ ಸದ್ಗತಿ ಪಡಕೊಂಡರು ಇದರಿಂದಲಿ ಮುನಿಜನ ವಿಶ್ರಾಂತಿ ವಿಶ್ರಾಂತಿ ಕೊಂಡಾಡಿದ ಅನುಭವಸ್ತುತಿ ಮೂಢ ಮಹಿಪತಿ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು