ಕೊಂಡಿರ್ಯಾ ನೀವು ಕೊಂಡಿರ್ಯಾ
(ಕಾಲಿಂಗಡಾ ರಾಗ ದೀಪಚಂದಿ ತಾಳ)
ಕೊಂಡಿರ್ಯಾ ನೀವು ಕೊಂಡಿರ್ಯಾ
ಮಂಡಲದೊಳು ವಸ್ತು ಕೊಂಡಿರ್ಯಾ ||ಧ್ರುವ||
ಕೊಳಬೇಕಾದರೆ ನೀವು ತಿಳಿದುಕೊಂಡು ಬನ್ನಿ ||೧||
ತಿಳಿಯದಿದ್ದರೆ ಖೂನ ಕೇಳಿ ಸದ್ಗುರುವಿನ ||೨||
ಬೆಲೆಯು ಹೇಳುವದಲ್ಲ ನೆಲೆಯು ತಿಳಿಯುವದಲ್ಲ ||೩||
ಅಳೆದು ಕೊಡುವುದಲ್ಲ ಕೊಳಗ ಎಣಿಸುವುದಲ್ಲ ||೪||
ತೂಕ ಮಾಡುವದಲ್ಲ ಲೆಕ್ಕ ಇಡುವುದಲ್ಲ ||೫||
ಇಟ್ಟು ಮಾರುವುದಲ್ಲ ಕೊಟ್ಟರ್ಹೋಗುವುದಲ್ಲ ||೬||
ಪಂಡಿತರಿಗೆ ಪ್ರಾಣ ಕೊಂಡವರಿಗೆ ತ್ರಾಣ ||೭||
ಹೇಳಿದೆ ನಾ ನಿಮಗೊಂದು ಸುಲಭವಾಗಿಂದು ||೮||
ಒಮ್ಮನವಾದರೆ ಸುಮ್ಮನೆ ಬಾಹುದು ||೯||
ಸಾಧು ಸಜ್ಜನರಿಗೆ ಸಾಧ್ಯವಾಗದಿದು ||೧೦||
ಸಾರಿ ಚಲ್ಲಿದ ಮಹಿಪತಿ ವಸ್ತುಮಯವಿದು ||೧೧||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments