Skip to main content

ಇತರೆ

ಪಟ್ಟಿಯಲ್ಲಿಲ್ಲದ ಬೇರೆ ದಾಸರ ರಚನೆಗಳಿಗೆ ಈ ಟ್ಯಾಗ್ ಹಾಕಬಹುದು

ಆರಿಗೆ ಆರಾಗರಯ್ಯ - ಶ್ರೀ ವಾಸುದೇವ ನೀನೊಬ್ಬನಲ್ಲದೇ

ಆರಿಗೆ ಆರಾಗರಯ್ಯ - ಶ್ರೀ ವಾಸುದೇವ ನೀನೊಬ್ಬನಲ್ಲದೇ ||ಪ||

ಮಾತೆ ಇದ್ದರು ದೃಢವೃತನಾದ ಧ್ರುವಗೆ ಶ್ರೀ-
ಪತಿ ನೀನೆ ಗತಿಯಾದೆ ಆರಾದರಯ್ಯ
ಪಿತನು ಹಿತನೆನ್ನೆ ಪ್ರಹ್ಲಾದಗಾದಂಥ
ಗತಿ ನೋಡಿ ನರಹರಿ ಗತಿಪ್ರದ ನೀನಾದೆ ||೧||

ಭ್ರಾತರಾವಣನ ಸಹಜಾತ ವಿಭೀಷಣನ ನಿ-
ರ್ಭೀತನ ಮಾಡಿ ಕಾಯ್ದವರಾರಯ್ಯ
ಪತಿಗಳೈವರು ಸತಿಯಾ ಅತಿ ಖೇದ ಹರಿಸಿದರೆ
ಸಂತೈಸಿದಾನಾಥರಕ್ಷಕ ಹರಿಯಲ್ಲವೇ     ||೨||

ಬಂಧುಗಳಿರೆ ಗಜರಾಜನ ನಕ್ರವು
ಬಂದು ಬಾಧಿಸೆ ಬಂಧ ಬಂದು ಹರಿಸಿದರ್‍ಯಾರೊ
ಅಂದು ಇಂದು ಎಂದನಿಮಿತ್ತ ಬಂಧು ನೀ
ಬಂಧುವಲ್ಲದೆ ಎಲ್ಲರು ಬಂಧಕರಯ್ಯಾ ||೩||

ಸುತರು ರಕ್ಷಕರೇನೊ  ಶತಸೂನುಗಳಿಗೆ ಪಿತ
ಧೃತರಾಷ್ಟ್ರಗೆ   ಕೊನೆಗಾರಾದರಯ್ಯ

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

ಅಲ್ಪವೆನಿಸಲಿ ಬೇಡವನ್ಯರಿಗೆ ಎಲೊ ಹರಿಯೆ

ಅಲ್ಪವೆನಿಸಲಿ ಬೇಡವನ್ಯರಿಗೆ ಎಲೊ ಹರಿಯೆ
ಕಾಲಿಗೆರಗುವೆನೊ ಕರುಣಾರ್ಣವೇಶ
ಕಾಲದೇಶವ ತೋರಿ ಕಠಿಣಮಾತುಗಳಾಡೆ
ಮೇಲೆ ನಿನ್ನ ಘನತೆಗೆ ಶ್ರೀಧರ
ಮೂಲ ನೀ ಸಕಲ ಕಾರಣಗಳಿಗೆ ಮುಖ್ಯ ತವ
ಆಳಿನಾಳೊ ನಾನು ಅನಿಮಿತ್ತ ಬಂಧು
ಬಾಲಕರ ಬಳಲಿಸುವ ಬಡಿವಾರವೇನೊ ನಾ
ಕೀಳುಮತಿಯಯ್ಯ ಕಿಂಕರರ ದೊರೆಯೆ
ಸಾಲುಸಾಲಿಗೆ ಶ್ರಮಜಾಲ ತೊಲಗಲು ನಿನ್ನ
ಊಳಿಗಕೆ ಮನವೆರಗುವುದೆ ಕೇಶವ
ಪಾಲಸಾಗರಶಾಯಿ ಪತಿತಪವನ ಮಾತ
ಲಾಲಿಸುವುದುಚಿತ ಸುವಿಶಾಲಚರಿತ
ಬಾಲಗೋಪಾಲ ಶ್ರೀಪತಿವಿಠಲನೆ ನಿನ್ನ
ಪಾಲಿಗೇ ಬಂದ ಪಾಮರದಾಸ ನಾನಯ್ಯ


 

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

ಆರು ಬಣ್ಣಿಪರಮ್ಮ ಶ್ರೀ ಹರಿಯ ದ್ವಾರಕೆಯ ದೊರೆಯ

ಆರು ಬಣ್ಣಿಪರಮ್ಮ ಶ್ರೀ ಹರಿಯ ದ್ವಾರಕೆಯ ದೊರೆಯ ||ಪ||

ಆರು ಬಣ್ಣಿಪರಮ್ಮ  ಶ್ರೀ ಹರಿಯ
ನೀರು ಪೊಕ್ಕ ಭಾರ ಹೊತ್ತ
ಧರೆಯನೆತ್ತಿದ ಕರುಳ ಕಿತ್ತಿದ
ಚರಿಯ ಹೇಳೆ ಸಿರಿಯು ಸೋತಳು ||೧||

ಆರು ಬಣ್ಣಿಪರಮ್ಮ ಶ್ರೀ ಹರಿಯ
ಮೂರು ಪಾದ ಬೇಡಿ ದೊರೆಯ
ಭಾರ ಕೊಡಲಿ ಪೊತ್ತ ಹಿರಿಯ
ನಾರಿ ತಂದ ಧೀರ ವರ್ಯ ||೨||

ಆರು ಬಣ್ಣಿಪರಮ್ಮ  ಶ್ರೀ ಹರಿಯ
ಕ್ರೂರ ಕಂಸನ ಕೊಂದ ಚರಿಯ
ನಾರಿಯರ ವ್ರತವನಳಿದ ಪರಿಯ
ಏರಿದ ರಾಮೇಶ ಕುದುರೆಯ ||೩||

-- ಗಲಗಲಿ ಅವ್ವನವರು 

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

ಆರತಿಯನು ಎತ್ತಿರಮ್ಮ ವರ ಮಹಾಲಕ್ಷುಮಿಗೆ

ಆರತಿಯನು ಎತ್ತಿರಮ್ಮ  ವರ ಮಹಾಲಕ್ಷುಮಿಗೆ
ಚಾರುಮತಿಗೆ ವರವನಿತ್ತಪಾರ ಕರುಣಾಂಬುಧಿಗೆ ||ಪ||

ಶ್ರಾವಣ ಶುಕ್ರವಾರದಲಿ  ಸಾವಧಾನ ಮನದಿ ನಿತ್ಯ
ಸೇವಿಸುವರಿಗೊಲಿದು ಭಾಗ್ಯವೀವ ಮಹಾಲಕ್ಷುಮಿಗೆ ||೧||

ಹೆತ್ತ ತಾಯಿ ತನ್ನ ಶಿಶುವನರ್ಥಿಯಿಂದ ಸಲಹುವಂತೆ
ಭೃತ್ಯವರ್ಗವನ್ನು  ಪೊರೆದು ನಿತ್ಯಲೋಕ ಮಾತೆಗೀಗ ||೨||

ಚಿಂತಿತಾರ್ಥವನೀವ ಲಕ್ಷ್ಮೀಕಾಂತನುರಸ್ಥಳದಿ ನಿಂತು
ದಂತಿವರದನನಂತ ಗುಣಗಳನಂತಗಾಣದಿರುವಳಿಗೆ ||೩||

--------ದಾಸರ ಲಕ್ಷ್ಮೀನಾರಾಯಣರಾಯರು 

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

Pages