ಇಂದು ಶ್ರೀಗುರುಪಾದಪದ್ಮ ನೋಡುವ
(ರಾಗ - ವರಾಳಿ ( ಬಹಾರ್ ) ತೀನ್ ತಾಳ)
ಇಂದು ಶ್ರೀಗುರುಪಾದಪದ್ಮ ನೋಡುವ
ಎಂದೆಂದು ಬಿಡದೆ ಭಕ್ತಿಭಾವ ಮಾಡುವ ||ಪ||
ಮನವೆಂಬ ಮಂಟಪವನಾಡುವ
ನೆನವು ನವರತ್ನದ ಸಿಂಹಾಸನಿಡುವ
ಜ್ಞಾನಧ್ಯಾನದೆಡಬಲದಿ ಪಿಡಿವ
ಅನುವಾಗಿ ಅನಿಮಿಷದಲಿ ನೋಡುವ ||೧||
ತನುವೆಂಬ ತಾರತಮ್ಯಭಾವ ಮಾಡುವ
ಅನುಭವದಿಂದನುಪಮನ ನೋಡುವ
ಆನಂದವೆಂಬ ಅಭಿಷೇಕವ ಮಾಡುವ
ಮನೋ ಅಭೀಷ್ಟೆಯ ಸುವಸ್ತ್ರ ನೀಡುವ ||೨||
ಬುದ್ಧಿಭಾವನೆಯ ಗಂಧಾಕ್ಷತೆ ಇಡುವ
ಶುದ್ಧ ಸುವಾಸನೆ ಪರಿಮಳ ಮಾಡುವ
ಶಬ್ದ ಸುವಾಕ್ಯದ ಪುಷ್ಪವ ನೀಡುವ
ಸಿದ್ಧಾಂತವೆಂಬುವ ಸುಸೇವೆ ಮಾಡುವ ||೩||
ಪ್ರಾಣಪಂಚದಾ ಪಾದಪೂಜೆಯ ಮಾಡುವ
ಪುಣ್ಯ ಪೂರ್ವಾರ್ಜಿತ ಫಲಗಳಿಡುವ
ಅನೇಕವಾದ ಪರಿಪೂಜೆ ಮಾಡುವ
ಧನ್ಯಧನ್ಯವಾಗುವ ಮುಕ್ತಿ ಬೇಡುವ ||೪||
ನಿರ್ವಿಕಲ್ಪ ನಿಜಮೂರುತಿ ನೋಡುವ
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Read more about ಇಂದು ಶ್ರೀಗುರುಪಾದಪದ್ಮ ನೋಡುವ
- Log in to post comments