ಭಾಸ್ಕರಗುರುವರ ಮಗುಟ ವಿಶ್ವದೊಳೊಬ್ಬರೆ ಪ್ರಗಟ

ಭಾಸ್ಕರಗುರುವರ ಮಗುಟ ವಿಶ್ವದೊಳೊಬ್ಬರೆ ಪ್ರಗಟ

(ರಾಗ-ಹಂಸಧ್ವನಿ ತಾಳ-ದಾದರಾ) ಭಾಸ್ಕರಗುರುವರ ಮಗುಟ ವಿಶ್ವದೊಳೊಬ್ಬರೆ ಪ್ರಗಟ ಭಾಸ್ಕರಗುರುದಯನೋಟ ರಸಕಾಯ ಸವಿದುಂಬೂಟ ||ಪ|| ಭಾಸ್ಕರಗುರು ನಿಜದೆಯ ಲೇಸುದೋರುವ ವಿಜಯ ಭಾಸ್ಕರಗುರು ಅಭಯ ಹಸನಾದ ಪುಣ್ಯೋದಯ ||೧|| ಭಾಸ್ಕರ ಕರುಣಾಕಟಾಕ್ಷ ಭಾಸುದು ಘನ ಪ್ರತ್ಯಕ್ಷ ಭಾಸ್ಕರಗುರು ನಿಜಭಿಕ್ಷ ಹಸನಾಗಿ ಮಾಡುವಾ ಸಂರಕ್ಷ ||೨|| ಭಾಸ್ಕರಗುರು ನಿಜಬೋಧ ಭಾಸುವ ಘನಸರ್ವದಾ ಭಾಸ್ಕರಗುರು ಪ್ರಸಾದ ಸ್ವಸುಖದೋರುವ ಸಂವಿಸ್ವಾದ ||೩|| ಭಾಸ್ಕರಗುರು ಉಪದೇಶ ಭಾಸುವ ಬಲು ಸಂತೋಷ ಭಾಸ್ಕರಗುರುವರೇಶ ಈಶನಹುದೊ ಸರ್ವೇಶ ||೪|| ಭಾಸ್ಕರಗುರುಕೃಪೆ ಜ್ಞಾನ ಲೇಸಾಗಿ ತೋರುವದುನ್ಮನ ಭಾಸ್ಕರಗುರು ದಯಕರುಣ ದಾಸಮಹಿಪತಿಗಾಭರಣ ||೫|| --- ಮಹೀಪತಿದಾಸರು
ದಾಸ ಸಾಹಿತ್ಯ ಪ್ರಕಾರ
ಬರೆದವರು