ರಾಮ ರಾಮೆನ್ನಿರೋ
(ನಂದ ರಾಗ , ಝಂಪೆತಾಳ)
ರಾಮ ರಾಮೆನ್ನಿರೋ ಮುಖ್ಯ ತಾ ಕಾರಣಾ
ನೇಮದಿಂದಾಯಿತು ಅಹಲ್ಯೋದ್ಧಾರಣಾ
ರೋಮ ರೋಮಕ ತಾ ಮ್ರೇಮ ಬಾ ಹೋಗುಣಾ
ನಾಮಸ್ಮರಿಸಿ ದಶರಥಾತ್ಮಜನಾ ||ಪ||
ಒಮ್ಮೆ ಸ್ಮರಿಸಿರೋ ರಾಮರಾಮೆಂದು ತಾ
ಸುಮ್ಮನೇ ಬಾಹುದು ಸಾರಸ ಅಮೃತಾ
ತಮ್ಮನಾ ಜೀವನಾ ಪಡೆದ ಸಂಜೀವ ತಾ
ಝಮ್ಮನೇ ಹಾದಿ ಮಾಡಿತು ಸಮುದ್ರ ತಾ ||೧||
ರಾಮರಾಮೆನ್ನಲು ಸಾಮರಾಜ್ಯಾಹುದು
ನೇಮದಿಂದೆನ್ನಿರೋ ಶ್ರಮ ನೀಗಿ ಹೋಹುದು
ನಾಮ ಕೊಂಡಾಡಲು ರಾಮನ ತಾಹುದು
ಸುಮ್ಮನೆಯಾದರೆ ತಾ ಮನೆ ಬಾಹುದು ||೨||
ರಾಮ ರಾಮೆಂದರೆ ತಾ ಬ್ರಹ್ಮರಾಕ್ಷಸ ತಾ
ಸುಮ್ಮನೆ ಓಡಿ ಹೋಗುದು ತಾತ್ಕಾಲ ತಾ
ನಾಮ ಸೇವಿಸಲು ಘಮ್ಮನ್ಹೊಳೆದು ತಾ
ಝಮ್ಮನೇ ಬಾಹುದು ಭಾಗ್ಯ ಕೈಗೊಟ್ಟು ತಾ ||೩||
ರಾಮನಾಮವೆ ತಾ ಪಾಪಕೆ ಎರವುತಾ
ನಾಮ ತೇಲಿಸಿತು ನೀರೊಳು ಎರವುತಾ
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Read more about ರಾಮ ರಾಮೆನ್ನಿರೋ
- Log in to post comments