ಪೂಜಿ ಮಾಡುವ ಬನ್ನಿರೊ ಗುರುಪಾದ

ಪೂಜಿ ಮಾಡುವ ಬನ್ನಿರೊ ಗುರುಪಾದ

( ಭೈರವಿರಾಗ ತೀನ್ ತಾಳ) ಪೂಜಿ ಮಾಡುವ ಬನ್ನಿರೊ ಗುರುಪಾದ ಪೂಜಿ ಮಾಡುವ ಬನ್ನಿರೊ ||ಪ|| ತಿಳುಹು ತಿಳಿಯ ನೀರಿಲೆ ತನುವಿಲೆ ಅಭಿಷೇಕವ ಮಾಡುವ ನಿರ್ಮಳವೆಂಬ ಸುವಸ್ತ್ರದಿಂದಲಿ ದಿವ್ಯ ಪೂಜಿ ಮಾಡುವ ಬನ್ನಿರೊ ||೧|| ಶುದ್ಧ ಸುವಾಸನೆಯ ಗಂಧದಾರತಿ ಅಕ್ಷತಿಯಿಡುವ ಸದ್ಭಾವ ಪರಿಮಳ ಪುಷ್ಪದಿಂದಲಿ ದಿವ್ಯ ಪೂಜಿ ಮಾಡುವ ಬನ್ನಿರೊ ||೨|| ಅರವೆಂಬ ದೀಪದಲಿ ಗುರುಸ್ವರೂಪವ ನೋಡುವ ಬನ್ನಿರೊ ಪರಮಾನಂದ ಹರುಷ ನೋಡುತ ನಿಜ ನಲಿದಾಡುವ ಬನ್ನಿರೊ || ೩|| ಭಕ್ತವತ್ಸಲ ಮೂರ್ತಿಗೆ ಸುಖದುಃಖ ಧೂಪಾರತಿ ಮಾಡುವ ಏಕೋಚಿತ್ತವೆಂಬ ಏಕಾರತಿಯಿಂದ ಪೂಜಿ ಮಾಡುವ ಬನ್ನಿರೊ ||೪|| ನೆನವು ನೈವೇದ್ಯದಲಿ ಮನಬುದ್ಧಿ ತಾಂಬೂಲವ ನೀಡುವ ಪ್ರಾಣ ಮಹಿಪತಿಯ ಪಂಚಾರತಿಯಿಂದ ಪೂಜಿ ಮಾಡುವ ಬನ್ನಿರೊ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು