ಗುಣಾತೀತ ಸದ್ಗುರು ಗಣನಾಥ

ಗುಣಾತೀತ ಸದ್ಗುರು ಗಣನಾಥ

( ರಾಗ ಜೋಗಿಯಾ ತಾಳ ದೀಪಚಂದಿ) ಗುಣಾತೀತ ಸದ್ಗುರು ಗಣನಾಥ ಘನಸುಖದಾಯಕ ಸದೋದಿತ ||ಪ|| ಅನುದಿನ ಮಾಡುವೆ ಮನೋಹರ ಅಣುರೇಣುದೊಳು ನೀ ಸಾಕ್ಷಾತ್ಕಾರ ಮುನಿಜನರಿಗಾಗುವಿ ಸಹಕಾರ ನೀನಹುದೋ ಭಕ್ತರ ವಿಘ್ನಹರ ||೧|| ನಿಮ್ಮ ಬೋಧಗುಣವೆ ಸರಸ್ವತಿ ಸಮ್ಯಗ್ ಜ್ಞಾನ ಬೀರುವ ನಿಜಸ್ಥಿತಿ ಬ್ರಹ್ಮಾದಿಗಳೊಂದಿತ ನಿಜಖ್ಯಾತಿ ಬ್ರಹ್ಮಾನಂದದೋರುವ ಫಲಶ್ರುತಿ ||೨|| ಬೇಡಿಕೊಂಬೆ ನಿಮಗೆ ಅನುದಿನ ಕೊಡುವವರೆಗೆ ನೀನೆನಗೆ ನಿಧಾನ ಮೂಢ ಮಹಿಪತಿ ಒಡೆಯ ನೀ ಪೂರ್ಣ ಮಾಡುತಿಹೆ ನಿತ್ಯವು ನಾ ನಮನ ||೩|| ------- ಮಹೀಪತಿದಾಸರು
ದಾಸ ಸಾಹಿತ್ಯ ಪ್ರಕಾರ
ಬರೆದವರು