ತಾಂಬೂಲವ ಕೊಳ್ಳೋ
( ರಾಗ ಆನಂದಭೈರವಿ ಆದಿತಾಳ)
ತಾಂಬೂಲವ ಕೊಳ್ಳೋ ತಮನ ಮರ್ದನನೆ, ಕಮಲ ವದನನನೆ ||ಪ||
ಅಂಬುಜಾಕ್ಷಿ ಮೋದದಿಂ ಮಡಚಿ ಕೊಡುತಾಳೆ ||ಅ||
ಸಂಪಿಗೆಣ್ಣೆ ಅತ್ತರು ಚಂದನದೆಣ್ಣೆ
ಈ ಪರಿಪರಿವಿಧ ಪರಿಮಳದ ಎಣ್ಣೆ
ಕೆಂಪುಕೇಸರಿ ಗಂಧಕಸ್ತೂರಿಯು
ಚಂಪಕ ಮೊದಲಾದ ಪುಷ್ಪವ ಮುಡಿಯೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ತಾಂಬೂಲವ ಕೊಳ್ಳೋ
- Log in to post comments