ನೆನೆವೆ ನಾನನ್ಯರ ಕಾಣೆನು

ನೆನೆವೆ ನಾನನ್ಯರ ಕಾಣೆನು

(ರಾಗ ತೋಡಿ ರೂಪಕ ತಾಳ ) ನೆನೆವೆ ನಾನನ್ಯರ ಕಾಣೆನು ||ಪ || ಕೊಡುವರೊಳಗೆ ನೀನೇ ಎಂದು ಬಡವನಾಗಿ ನಾನು ಬಂದು ಉಡಿಯ ಪಿಡಿದು ಬೇಡಿಕೊಂಬೆ ನಾ ಉಡಿಯ ಪಿಡಿದು ಬೇಡಿಕೊಂಬೆ ದೃಢದಿ ವರವ ಕೊಡುವ ದೊರೆಯೆ || ರಾಮದೂತನಾಗಿ ಬಂದು ನಾಮಮುದ್ರಿಕೆ ಜಾನಕಿಗಿತ್ತು ಭೀಮನಾಗಿ ಕರವ ಮುಗಿವನ ಭೀಮನಾಗಿ ಕರವ ಮುಗಿದು ಜ್ಞಾನಪೂರ್ಣಪ್ರಾಣನೆನಿಪನ || ಈಶ ನರಸಿಂಹನಾದ ವಾಸವಾದಿವಿನುತ ಶೇಷ ದೋಷರಹಿತ ಪುರಂದರನ ದೋಷರಹಿತ ಪುರಂದರವಿಠಲ ದಾಸಭಾರತೀಶ ||
ದಾಸ ಸಾಹಿತ್ಯ ಪ್ರಕಾರ
ಬರೆದವರು