ತಾತ್ತತ ಧಿಮಿತ ಧಿಮಿಕಿ ಎನುತ

ತಾತ್ತತ ಧಿಮಿತ ಧಿಮಿಕಿ ಎನುತ

( ರಾಗ ತೋಡಿ ಅಟತಾಳ) ತಾತ್ತತ ಧಿಮಿತ ಧಿಮಿಕಿ ಎನುತ ಹರಿಯಾಡಿದನೆ ||ಪ|| ಚಿತ್ತಜಪಿತನುತ್ತಮ ಮುತ್ತಿನ ಗೊತ್ತುಗಳ್ ಕುತ್ತಿಯೊಳಗೆತ್ತ್ಯಾಡುತ ||ಅ|| ಹಾರ ಪದಕ ಕೇಯೂರ ಕಿರೀಟವು ಧೀರ ಬಾಹುಪುರಿಯದು ವೀರ ಹೊಳೆಯುತಿರೆ ಮಾರಜನಕ ಸುಕುಮಾರ ಸಾರಗುಣಸಾಂದ್ರ ಮಹಿಮಹರಿ || ಮಂದಗಮನಯೆರು ಬೃಂದಬೃಂದದಲಿ ಚಂದ ನೋಡುತಿರೆ ಆನಂದಗೋಪನ ಕಂದ ಮುಕುಂದ ನಿತ್ಯಾನಂದ || ಕಂಕಣ ವಂಕಿಯು ಕಿಂಕಿಣಿ ರವಗಳು ಶಂಖ ಚಕ್ರ ದಿವ್ಯ ಪಂಕಜಮಾಲೆಯು ಶಂಖಗಳ ಶ್ರೀಪುರಂದರವಿಠಲ ವೇದಾಂತವೇದ್ಯ ಕೃಷ್ಣ ||
ದಾಸ ಸಾಹಿತ್ಯ ಪ್ರಕಾರ
ಬರೆದವರು