ನಿಲ್ಲೊ ನಿಲ್ಲೊ ಮೋಹನಾಂಗ

ನಿಲ್ಲೊ ನಿಲ್ಲೊ ಮೋಹನಾಂಗ

(ರಾಗ ಸೌರಾಷ್ಟ್ರ ಛಾಪು ತಾಳ ) ನಿಲ್ಲೊ ನಿಲ್ಲೊ ಮೋಹನಾಂಗ ನಿಂತೆವಲ್ಲವೊ ನಿನ್ನ ಸಂಗ ಒಲ್ಲೆವೊ ನಾ ನಿನ್ನ ಅಂಗ ಬಣ್ಣಗಾರ ಶ್ರೀರಂಗ || ಚರಣಸೇವೆಗೆ ದಯಮಾಡೊ ಚೆನ್ನಾಗಿ ಮಾತನಾಡೊ ಕರುಣಕಟಾಕ್ಷದಿ ನೋಡೊ ಕಸ್ತೂರಿರಂಗ ನೀ ಕೂಡೊ || ಗಂಧಕಸ್ತೂರಿ ಗೀರುನಾಮ ಘಮಘಮಿಸುವ ರಂಗಧಾಮ ಚಂದ್ರಪೂರ್ಣವದನ ಕಾಮ ಚೆಲ್ಲಾಡುವ ನಿಸ್ಸೀಮ || ಮಧುವೆಂಬೊ ಮಲ್ಲನ ಗೆದ್ದು ಮಾವ ಕಂಸನ ಅಳಿದೆಂದು ಚತುರೆ ಗೋಪಿಯರ ಕೂಡೆಂದು ಸಂಕರ್ಷಣ ನೀನೆಂದು || ಮಾನಿನಿಯರೆಲ್ಲರು ಕೂಡಿ ಮಾನಬಿಟ್ಟೇವು ನಿನ್ನನು ಬೇಡಿ ಮನೆಯ ಮರೆತು ಬಂದೇವು ಓಡಿ ಮನ್ನಿಸೆಮ್ಮನು ದಯಮಾಡಿ || ನಿನ್ನನ್ನೆ ನಂಬಿದ್ದೆವಲ್ಲ ನೀನಲ್ಲದೆ ಅನ್ಯತ್ರವಿಲ್ಲ ಮನ್ನಿಸೊ ಪ್ರಾಣವತ್ಸಲ್ಲ ಶ್ರೀ ಪುರಂದರವಿಠಲ್ಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು