ಸದಾ ಎನ್ನ ಹೃದಯದಲ್ಲಿ.........

ಸದಾ ಎನ್ನ ಹೃದಯದಲ್ಲಿ.........

ರಾಗ : ದರ್ಬಾರ್ ಕಾನಡ ತಾಳ : ರೂಪಕ ಸದಾ ಎನ್ನ ಹೃದಯದಲ್ಲಿ, ವಾಸ ಮಾಡೋ ಶ್ರೀ ಹರೀ.. ನಾದ ಮೂರ್ತಿ ನಿನ್ನ ಪಾದ, ಮೋದದಿಂದ ಭಜಿಸುವೆನೋ..... ಙ್ಞಾನವೆಂಬೋ ನವರತ್ನದ ಮಂಟಪದ ಮಧ್ಯದಲ್ಲಿ... ವೇಣುಗಾನ ಲೋಲನ ಕುಳ್ಳಿರಿಸಿ ಙ್ಞಾನದಿಂದ ಭಜಿಸುವೇನೋ..... || ಸದಾ...|| ಭಕ್ತಿರಸವೆಂಬೋ...ಮುತ್ತು ಮಾಣಿಕ್ಯದಾ.. ಹರಿವಾಣದೀ.... ಮುಕ್ತನಾಗಬೇಕು ಎಂದು ಮುತ್ತಿನ ಆರತಿ ಎತ್ತುವೇನೋ.......... || ಸದಾ..|| ನಿನ್ನ ನಾನು ಬಿಡುವನಲ್ಲ... ಎನ್ನ ನೀನು ಬಿಡಲು ಸಲ್ಲ....... ಘನ್ನ ಮಹಿಮ ವಿಜಯ ವಿಠಲ... ನಿನ್ನ ಭಕುತರ ಕೇಳೋ ಸಲ್ಲ......... || ಸದಾ...||
ದಾಸ ಸಾಹಿತ್ಯ ಪ್ರಕಾರ
ಬರೆದವರು