ಈ ಜೀವವಿದ್ದು ಫಲವೇನು
(ಉದಯರಾಗ ಝಂಪೆತಾಳ )
ಈ ಜೀವವಿದ್ದು ಫಲವೇನು ಚೆಲುವ
ರಾಜೀವಲೋಚನನ ನೆನೆಯದ ಪಾಪಿತನುವಿನಲಿ ||ಪ||
ಅರುಣವುದಯದಲೆದ್ದು ಹರಿಯ ಸ್ಮರಣೆಯ ಮಾಡಿ
ಗುರುಹಿರಿಯರ ಮನದಲ್ಲಿ ನೆನೆದು ನೆನೆದು
ಪರಮಸುಖಿಯಾಗಿ ನದಿಯೊಳು ಮಿಂದು ರವಿ-
ಗರ್ಘ್ಯವನೆರೆಯದ ಪಾಪಿತನುವಿನಲಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ಈ ಜೀವವಿದ್ದು ಫಲವೇನು
- Log in to post comments