ಉಗಾಭೋಗ

Haridasa compositions that fall under ugAbgOga category

ಜಯ ಹರಿಯೊಂಬುದೆ ಸುದಿನವು

ಜಯ ಹರಿಯೊಂಬುದೆ ಸುದಿನವು ಜಯ ಹರಿಯೆಂಬುದೆ ತಾರಾಬಲವು ಜಯ ಹರಿಯೆಂಬುದೆ ಚಂದ್ರಬಲವು ಜಯ ಹರಿಯೆಂಬುದೆ ವಿದ್ಯಾಬಲವು ಜಯ ಹರಿಯೆಂಬುದೆ ದೈವಬಲವು ಜಯ ಹರಿ ಪುರಂದರವಿಠಲನ ಬಲವಯ್ಯಾ ಸುಜನರಿಗೆ || ________________________ ಗಜ ತುರಗ ಸಹಸ್ರದಾನ ಗೋಕುಲ ಕೋಟಿ ದಾನ
ದಾಸ ಸಾಹಿತ್ಯ ಪ್ರಕಾರ
ಬರೆದವರು

ತನುವೆಂಬ ದೊಡ್ಡ ದೋಣಿಯಲಿ

ತನುವೆಂಬ ದೊಡ್ಡ ದೋಣಿಯಲಿ ಹರಿಯ ನಾಮವೆಂಬ ಭಾಂಡವ ತುಂಬಿ ವ್ಯವಹಾರವನು ಮಾಡುವೆನಯ್ಯಾ ಇಂದ್ರಿಯಗಳೆಂಬ ಸುಂಕಿಗರು ಅಡ್ದಾದರೆ ಮುಕುಂದನ ಮುದ್ರೆಯ ತೋರಿ ಹೊಳೆಯ ದಾಟುವೆನಯ್ಯಾ ಪುರಂದರವಿಠಲನಲ್ಲಿಗೆ ಪೋಗಿ ಮುಕುತಿ ಸುಖದ ಲಾಭವ ಪಡೆವೆ ನಾ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಧನದಾಸೆ ದೈನ್ಯ ಪಡಿಸುತಿದೆ

ಧನದಾಸೆ ದೈನ್ಯ ಪಡಿಸುತಿದೆ ವನಿತೆಯರಾಸೆ ಓಡಾಡಿಸುತಿದೆ ಮನದಾಸೆ ಮಂತ್ರವ ಕೆಡಿಸುತಿದೆ ಮನೆವಾರ್ತೆಯಾಸೆ ಮನವ ಬಾಧಿಸುತಿದೆ ಇನಿತರಾಸೆಯ ಬಿಡಿಸಿ ನಿನ್ನ ಚರಣಂಗಳ ನೆನೆವಂತೆ ಮಾಡೊ ಪುರಂದರವಿಠಲ _________________________ ಗುರಿಯನೆಚ್ಚವನೆ ಬಿಲ್ಲಾಳು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆರಿಗಾರಾಗುವರೊ ಆಪತ್ತು ಕಾಲಕ್ಕೆ

ಆರಿಗಾರಾಗುವರೊ ಆಪತ್ತು ಕಾಲಕ್ಕೆ ಆರಿಗಾರೊದಗುವರೊ ಸಂಪತ್ತು ಕಾಲಕ್ಕೆ ಆರಿಂದ ಬಪ್ಪುವುದು ಆರಿಂದ ತಪ್ಪುವುದು ಆರಿಸಿ ನೋಡುವುದು ಇದರ ಕಾರಣವನು ಇದಕಾರು ವಾರಣದಲ್ಲಿ ನೋಡಿ ಆರೋಪಿಸಲು ಎಲ್ಲಾ ಭಾರ ಅವಗೆ ಕಾರುಣ್ಯಮೂರುತಿ ಗೋಪಾಲವಿಠಲ ಈರೀತಿ ಅರಿದವಗೆ ಇಲ್ಲೇ ಪೊರೆವ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಒಬ್ಬ ಸತಿ ಪತಿಗಾಗಿ

ಒಬ್ಬ ಸತಿ ಪತಿಗಾಗಿ ಮುನಿಯ ಶಾಪವ ಧರಿಸಿ ಅಬ್ಜ ಬಾಂಧವನ ನಿಲಿಸಿದಳು ನೋಡಾ ಒಬ್ಬ ಸತಿ ಪತಿಗಾಗಿ ಧರ್ಮನ ಸಭೆಯ ಸಾರಿ ನಿಬ್ಬರದಿ ಪ್ರಾಣವ ಪಡೆದಳು ನೋಡಾ ಒಬ್ಬ ಸತಿ ಪತಿಗಾಗಿ ಚಿತ್ರಗುಪ್ತರು ಆಡಿದ ಶಬ್ದ ಆಲಿಸಿ ಐದೆತನ ಪಡೆದಳು ಊರ್ವಿಯೊಳಗೀಪರಿ ಸತಿಯರ ಸ್ವಧರ್ಮ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬೆನಕನನೊಲ್ಲೆನವ್ವ

ಬೆನಕನನೊಲ್ಲೆನವ್ವ ಕುಲುಕಿ ನಡಿಯುವವನ ಷಣ್ಮುಖನನೊಲ್ಲೆನವ್ವ ಹಲವು ಬಾಯವನ ಇಂದ್ರನನೊಲ್ಲೆನವ್ವ ಮೈಗಣ್ಣಿನವನ ಚಂದ್ರನನೊಲ್ಲೆನವ್ವ ಕ್ಷಯರೋಗದವನ ಸೂರ್ಯನನೊಲ್ಲೆನವ್ವ ಉರಿದು ಮೂಡುವವನ ಹರನ ನಾನೊಲ್ಲೆನವ್ವ ಹಣೆಗಣ್ಣಿನವನ ಜನಕೆಲ್ಲ ಚೆಲುವನ ಜಗಕೆಲ್ಲ ಒಡೆಯನ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಜಾರತ್ವವನು ಮಾಡಿದ ಪಾಪಗಳೆಗೆಲ್ಲ

ಜಾರತ್ವವನು ಮಾಡಿದ ಪಾಪಗಳಿಗೆಲ್ಲ ಗೋಪೀಜನ ಜಾರನೆಂದರೆ ಸಾಲದೆ ? ಚೋರತ್ವವನು ಮಾಡಿದ ಪಾಪಗಳಿಗೆಲ್ಲ ನವನೀತ ಚೋರನೆಂದರೆ ಸಾಲದೆ? ಕ್ರೂರತ್ವವನು ಮಾಡಿದ ಪಾಪಗಳಿಗೆಲ್ಲ ಮಾವನ ಕೊಂದವನೆಂದರೆ ಸಾಲದೆ? ಪ್ರತಿ ದಿವಸ ಮಾಡಿದ ಪಾಪಂಗಳಿಗೆಲ್ಲಾ ಪತಿತಪಾವನನೆಂದು ಕರೆದರೆ ಸಾಲದೆ?
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ

ಮನೆಯ ಕಟ್ಟುವರುಂಟು

ಮನೆಯ ಕಟ್ಟುವರುಂಟು ಮಡದಿ ಮಕ್ಕಳುಂಟು ಧನವ ಗಳಿಸುವರುಂಟು ಗಳಿಸದಿದ್ದವರುಂಟು ಧನವ ಕಟ್ಟುವರುಂಟು ದಾನ ಮಾಡುವರುಂಟು ಋಣವ ಕೊಟ್ಟವರುಂಟು ಋಣ ಮಾಡಿದವರುಂಟು ಮಣೆಗಾರತನವಿದರೊಳೆಂದಿಗೂ ಬೇಡ ಮುನಿಗಳು ಸಹಿತಾಗಿ ಮೋಸ ಹೋದರು ಇದಕೆ ಗುಣಪೂರ್ಣ ಚೆಲ್ವ ಗೋಪಾಲವಿಠ್ಠಲ ನಿನ್ನ
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ

ಸಾಗರಗಡೆಯ ಮಾಡಿ

ಸಾಗರಗಡೆಯ ಮಾಡಿ ಧರೆಯ ಕೂರಿಗೆ ಮಾಡಿ | ಹರಬ್ರಹ್ಮರೆಂಬೊ ಎರಡೆತ್ತು ಹೂಡಿ | ನರರೆಂಬೊ ಬೀಜವ ಬಿತ್ತಿ ಧರೆಯೊಳಗೆ | ಇಂದ್ರ ಬೆಳೆಸುವಾತ ಚಂದ್ರ ಕಳೆ ಕೀಳಿಸುವಾತ | ಯಮರಾಯನಯ್ಯ ಬಿತ್ತಿದ ಬೆಳಸೆಲ್ಲ | ಎತ್ತಿಕೊಂಡು ಹೋದಾಗ | ದುಃಖ ಪಡಬೇಡೆಂದನು ಪುರಂದರ ವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ

ಚೋರಗೆ ಚಂದ್ರೋದಯ

ಈ ಉಗಾಭೋಗವನ್ನು ಶ್ರೀ ವಿದ್ಯಾಭೂಷಣರು ಪಂತುವರಾಳಿ ರಾಗದಲ್ಲಿ ಹಾಡಿದ್ದಾರೆ. ಚೋರಗೆ ಚಂದ್ರೋದಯ ಸೊಗಸುವುದೇ ಜಾರಗೆ ಸೂರ್ಯೋದಯ ಸೊಗಸುವುದೇ ಶ್ರೀ ರಮಣನ ಕಥೆಯು ಕಳ್ಳಗೆ ಮೆಚ್ಚುವುದೇ| ನಾರಿಗೆ ನಯವಿಲ್ಲದ ಚೆಲುವಿಕೆಯು ಹರಿಸ್ಮರಣವಿಲ್ಲದ ಹಾಡಿಕೆಯು
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ