ತನುವೆಂಬ ದೊಡ್ಡ ದೋಣಿಯಲಿ
ತನುವೆಂಬ ದೊಡ್ಡ ದೋಣಿಯಲಿ
ಹರಿಯ ನಾಮವೆಂಬ ಭಾಂಡವ ತುಂಬಿ
ವ್ಯವಹಾರವನು ಮಾಡುವೆನಯ್ಯಾ
ಇಂದ್ರಿಯಗಳೆಂಬ ಸುಂಕಿಗರು ಅಡ್ದಾದರೆ
ಮುಕುಂದನ ಮುದ್ರೆಯ ತೋರಿ
ಹೊಳೆಯ ದಾಟುವೆನಯ್ಯಾ
ಪುರಂದರವಿಠಲನಲ್ಲಿಗೆ ಪೋಗಿ
ಮುಕುತಿ ಸುಖದ ಲಾಭವ ಪಡೆವೆ ನಾ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Read more about ತನುವೆಂಬ ದೊಡ್ಡ ದೋಣಿಯಲಿ
- Log in to post comments