ಕೇಳು ಕೋಪಿಸಬೇಡ ಹೇಳಲಿಕಂಜುವೆನು
ಕೇಳು ಕೋಪಿಸಬೇಡ, ಹೇಳಲಿಕಂಜುವೆನು
ಬಾಳು ಬಡತನವ ನಾನು ||
ತಲೆಗೊಯ್ಕ ಹಿರಿಯ ಮಗ , ಇಳೆಗೆ ಪೂಜಿತನಲ್ಲ
ಬಲು ಭಂಡ ನಿನ್ನಯ ಕಿರಿಯ ಮಗ,
ಲಲನೆಯು ಸೇರಿದಳು , ಬಲು ಲೋಭಿಗಳ ಮನೆಯ
ಹೊಲೆ ಕುಲವರಿಯಳು ನಿನ್ನ ಸೊಸೆಯು ರಂಗ ||
ಮಗಳ ಮಾರ್ಗವು ಡೊಂಕು , ಮೈದುನ ಗುರುದ್ರೋಹಿ
ಮಗನ ಮಗನು ಚಾಡಿಕಾರ
ಹಗರಣಕೆ ನೀಚರ ಹಣ್ಣು ಮೆದ್ದೆಂಜಲ
ಜಗದೊಡೆಯನೆನಿಸಿಕೊಂಡೆ , ನೀನುಂಡೆ ||
ಲಕ್ಷ್ಮೀಪತಿಯು ಎನಿಸಿ , ಭಿಕ್ಷೆ ಬೇಡಲು ಪೋದೆ
ಪಕ್ಷಿಯ ಪೆಗಲೇರಿ ರಾಜನೆನಿಸಿದೆ
ಸಾಕ್ಷಾತು ಪುರಂದರವಿಠಲನೆ ನಿನ್ನ ಗುಣ-
ಲಕ್ಷಣವ ಪೇಳಲಳವೇ __ ಕಳವೇ ||
( ಇಲ್ಲಿ ಈವರೆಗೆ ಕ್ರಮವಾಗಿ ಬ್ರಹ್ಮ , ಕಾಮ , ಲಕ್ಷ್ಮಿ , ಸರಸ್ವತಿ , ಗಂಗೆ , ಚಂದ್ರ , ನಾರದರ ಬಗ್ಗೆ ಹೇಳಿದ್ದಾರೆ)
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments