ಯಥಾದೇವೋ ತಥಾಗುರೌ
(ಭೈರವಿ ರಾಗ ದೀಪಚಂದಿ ತಾಳ)
ಯಥಾದೇವೋ ತಥಾಗುರೌ
ಶ್ರುತಿ ಹೇಳಿದ ಸನ್ಮತದಲಿರೋ ||ಧ್ರುವ||
ವೃಥಾ ಅಭಾವ ನೀ ಹಿಡುವರೆ
ಸ್ವತಃ ಸಿದ್ಧವ ತಾಂ ಬಿಡುವರೆ
ಸತ್ಸಂಗದಲಿ ನೋಡಿನ್ನಾರೆ
ಚಿತ್ಸುಖ ಹೊಳೆವುದು ಕಣ್ಣಾರೆ ||೧||
ಮುಗಿಲಿಗೆ ಮತ್ತೆ ಮುಗಿಲುಂಟೆ
ಹಗಲಿಗೆ ಮತ್ತು ಹಗಲಾಗುದುಂಟೆ
ಜಗ ಇಹುದಕೆ ಜಗಮುಂಟೆ
ಹೀಗಾದ ಮ್ಯಾಲೆ ವಸ್ತು ಎರಡುಂಟೆ ||೨||
ಅನುಭವಕಿದರಿಟ್ಟು ಬಾಹುದು
ಖೂನ ಹೇಳ್ಯಾವು ನೋಡು ವೇದ
ದೀನ ಮಹಿಪತಿಗಿದೆ ಬೋಧ
ಭಾನುಕೋಟಿ ತೇಜವೊಂದೇ ತಾನಾದ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Read more about ಯಥಾದೇವೋ ತಥಾಗುರೌ
- Log in to post comments