ಇನ್ನೇನಿನ್ನೇನು ಎನಗಿನ್ನು ಇನ್ನೇನಿನ್ನೇನು
(ಪೂರ್ವಿ ರಾಗ ದೀಪಚಂದಿ ತಾಳ)
ಇನ್ನೇನಿನ್ನೇನು ಎನಗಿನ್ನು ಇನ್ನೇನಿನ್ನೇನು ||ಧ್ರುವ||
ಎನ್ನೊಳು ಗುರು ತನ್ನ ಮರ್ಮವ ತೋರಿದ ಇನ್ನೇನಿನ್ನೇನು ||೧||
ಮುನ್ನಿನ ಕರ್ಮವು ನಿರ್ಮೂಲವಾಯಿತು ಇನ್ನೇನಿನ್ನೇನು ||೨||
ಎನ್ನೊಳು ಘನ ಬ್ರಹ್ಮವಸ್ತು ತಾನಾಯಿತು ಇನ್ನೇನಿನ್ನೇನು ||೩||
ನಾನು ನಾನೆಂಬುದು ನೆಲೆಯು ತಾ ತಿಳಿಯಿತು ಇನ್ನೇನಿನ್ನೇನು||೪||
ಏನೆಂದು ತಿಳಿಯದ ಅನುಮಾನಗಳೆಯಿತು ಇನ್ನೇನಿನ್ನೇನು ||೫||
ಪರಮತತ್ವದ ಗತಿ ನೆಲೆನಿಭ ತೋರಿತು ಇನ್ನೇನಿನ್ನೇನು ||೬||
ಎನ್ನೊಳಾತ್ಮ ಖೂನ ಕುರುಹುವು ತಿಳಿಯಿತು ಇನ್ನೇನಿನ್ನೇನು ||೭||
ಕನಸುಮನಸು ಎಲ್ಲ ನಿನ್ನ ಸೇವ್ಯಾಯಿತು ಇನ್ನೇನಿನ್ನೇನು ||೮|
ಹಗಲಿರುಳೆಂಬುದು ಹಗರಣವಾಯಿತು ಇನ್ನೇನಿನ್ನೇನು ||೯||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Read more about ಇನ್ನೇನಿನ್ನೇನು ಎನಗಿನ್ನು ಇನ್ನೇನಿನ್ನೇನು
- Log in to post comments