ವಂದನೆ ಮಾಡಿರೈ ಯತಿಕುಲಚಂದ್ರನ ಪಾಡಿರೈ

(ಭೈರವಿ ರಾಗ ರೂಪಕ ತಾಳ) ವಂದನೆ ಮಾಡಿರೈ ಯತಿಕುಲಚಂದ್ರನ ಪಾಡಿರೈ ||ಪ|| ಬಂದ ದುರಿತಗಳ ಕಳೆದು ಆ- ನಂದಪಡುವ ವಿಭುದೇಂದ್ರ ಕರೋದ್ಭವರ ||ಅ.ಪ|| ರಘುಕುಲ ವರಪುತ್ರ ರಾಮನ ಚರಣ ಕರುಣಾಪಾತ್ರ ನಿಗಮೋಕ್ತಿಯ ಸೂತ್ರಫಾರ ಪ್ರವಚನರತ ಸುಗುಣಜಿತಾಮಿತ್ರ ನಗಧರ ಶ್ರೀ ಪನ್ನಗಶಯನನ ಗುಣ ಪೊಗಳುವ ಅಪಾರ ಅಗಣಿತ ಮಹಿಮರ ||೧|| ವರಮಹಾತ್ಮೆ ತಿಳಿಸಿ ಮೊದಲಿಂ ಧರೆ ಆನಂದದಿ ಚರಿಸಿ ನಿರುತ ಮನವ ನಿಲಿಸಿ ಶ್ರೀಹರಿ ಕರಿವರದನ ಒಲಿಸಿ ಧರೆಜನರಿಗೆ ಅರಿಯದೆ ಮರೆಯಾಗುತ ಹರುಷದಿ ಗೋನದತರುವಲ್ಲಿರುವವರ ||೨|| ಮುದದಿ ಕೃಷ್ಣಾತಟಿಯ ಮಧ್ಯದಿ ಸದನದ ಪರಿಯ ಸದಮಲ ಯತಿವರ್ಯ ತಪಮೌನದಲಿದ್ದುದನರಿಯ ಒದಗಿ ನದಿಯು ಸೂಸುತ ಬರಲೇಳುದಿನ ಕುದಯಾದವರ ಸುಪದಕಮಲಂಗಳ ||೩|| ಮಾಸಮಾರ್ಗಶೀರ್ಷಾರಾಧನೆಗಶೇಷ ದಿನ ಅಮಾ-
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಂಗಾ ಮನೆಗೆ ಬಾರೊ ಕೃಪಾಂಗ

(ಗುರ್ಜರ ರಾಗ ಆದಿತಾಳ) ರಂಗಾ ಮನೆಗೆ ಬಾರೊ ಕೃಪಾಂಗ ಶ್ರೀರಂಗ ||ಪ|| ರಂಗ ಕಲುಷವಿಭಂಗ ಗರುಡ ತು- ರಂಗ ನವಮೋಹನಾಂಗ ಶ್ರೀರಂಗ ||ಅ.ಪ|| ಪಚ್ಚೆ ಬಾವುಲಿಗಳನು ನಿನ್ನ ಕಿವಿಯೊಳಗಿಟ್ಟು ಮೆಚ್ಚಿ ಮುದ್ದಾಡುವೆನು ಹೆಚ್ಚಿದ ವಾಲಿಯನು ಬಾಣದಿ ಚುಚ್ಚಿದ ಸಪ್ತ ತಾಳಂಗಳನು ಬಿಚ್ಚಿದ ಸಮುದ್ರವ ಸುತ್ತ ಮುಚ್ಚಿದ ಎಚ್ಚರಿಕೆಯಲಿ ಲಂಕೆಯನು ಪೊಕ್ಕು ಕಿಚ್ಚುಗಳ ಹಚ್ಚಿಸಿದ ಹನುಮನ ಮೆಚ್ಚಿದ, ಖರದೂಷಣರ ಶಿರಗಳ ಕೊಚ್ಚಿದ ಅಚ್ಯುತಾನಂತ ||೧|| ಮುತ್ತಿನ ಹಾರವನು ಕಂಠದೊಳಿಟ್ಟು ಎತ್ತಿ ಮುದ್ದಾಡುವೆನು ಹತ್ತಿದ ರಥವನು ಮುಂದೊತ್ತಿದ ಕೌರವರ ಸೇನೆಗೆ ಮುತ್ತಿದ
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಂಗನಾಥನ ನೋಡುವ ಬನ್ನಿ

(ನಾಟಿ ರಾಗ ಛಾಪುತಾಳ) ರಂಗನಾಥನ ನೋಡುವ ಬನ್ನಿ ಶ್ರೀ- ||ಪ|| ರಂಗನ ದಿವ್ಯ ವಿಮಾನದಲ್ಲಿಹನ ||ಅ.ಪ|| ಕಮನೀಯಗಾತ್ರನ ಕರುಣಾಂತರಂಗನ ಕಾಮಿತಾರ್ಥವೀವ ಕಲ್ಪವೃಕ್ಷನ ಕಮಲದಳ ನೇತ್ರನ ಕಸ್ತೂರಿರಂಗನ ಕಾಮಧೇನು ಕಾವೇರಿರಂಗನ ||೧|| ವಾಸುಕಿಶಯನನ ವಾರಿಧಿನಿಲಯನ ವಾಸುದೇವ ವಾರಿಜನಾಭನ ವಾಸವಾದಿ ಭಕ್ತ ಹೃದಯಾಂಬುಜದಲ್ಲಿ ವಾಸವಾಗಿರುತಿಹ ವಸುದೇವಸುತನ ||೨|| ಮಂಗಳಗಾತ್ರನ ಮಂಜುಳಭಾಷನ ಗಂಗಾಜನ ಅಜಜನಕನ ಸಂಗೀತಲೋಲನ ಸಾಧುಸಮ್ಮತನ ರಂಗವಿಠಲ ರಾಜೀವನೇತ್ರನ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಯಾಕೆ ಇಂಥ ದುಡುಕು ಕೃಷ್ಣಯ್ಯ

(ವರಾಳಿ ರಾಗ ಆದಿತಾಳ) ಯಾಕೆ ಇಂಥ ದುಡುಕು ಕೃಷ್ಣಯ್ಯ ನಿನ- ಗೇಕೆ ಇಂಥ ದುಡುಕು ಪಾಕಶಾಸನ ವಂದ್ಯ ಪೋಕತನಗಳಿನ್ನು ಸಾಕುಸಾಕಯ್ಯ ಕೃಷ್ಣ ||ಪ|| ಗೊಲ್ಲ ಬಾಲಕರು ನೀವೆಲ್ಲರು ಕೂಡಿಕೊಂಡು ಗುಲ್ಲು ಮಾಡದೆ ಮೊಸರೆಲ್ಲ ಸವಿದೆಯಂತೆ ಕೃಷ್ಣ ||೧|| ಪೂತನಿ ಮೊಲೆಯನ್ನು ಭೀತಿಯಿಲ್ಲದೆ ಉಂಡು ಘಾತವ ಮಾಡಿದೆ ಮಾತನಾಡಯ್ಯ ಕೃಷ್ಣ ||೨|| ದುಷ್ಟ ಕಂಸನ ನೀನು ಕಷ್ಟವಿಲ್ಲದೆ ಮಡುಹಿ ಮುಷ್ಟಿಕನ ಕೊಂದೆ ದೃಷ್ಟಿ ತಾಕೀತೆಂದು ||೩|| ನಿರ್ಜನ ಸ್ಥಳದಿ ಯಮಳಾರ್ಜುನರನ್ನು ಮಡುಹಿ ದುರ್ಜನರ ಕೊಂದೆ ಅರ್ಜುನ ಸಾರಥಿ ||೪|| ಅಂಗಿ ಟೊಪ್ಪಿಗೆ ಉಂಗುರ ಉಡಿದಾರ ಶೃಂಗರಿಸಿಕೊಂಡು ರಂಗವಿಠಲ ಬಾರೋ ||೫|||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಾಯ ಮತ ಒಳಿತಲ್ಲ ನಿನಗೆ

(ಪಾಡಿ ರಾಗ ಆದಿತಾಳ) ಮಾಯ ಮತ ಒಳಿತಲ್ಲ ನಿನಗೆ ನಾಯಿ ಜನ್ಮ ಬಾರದೆ ಬಿಡದಲ್ಲ ||ಪ|| ಜಗಕೆ ಕಾರಣ ದೇವ ತಾನಿರಲು ಬೊಗಳಿಕೊಂಬೆ ಭೇದವಿಲ್ಲೆಂದು ತೆಗೆವನು ಯಮ ಬೆನ್ನ ಚರ್ಮ ಇದು ನಗೆಯಲ್ಲ ಕೇಳೊ ತಿಳಿಯೊ ದುಷ್ಕರ್ಮ ||೧|| ಭೇದವಿಲ್ಲೆಂದು ತಿಳಿದು ನೀ ಮಾದಿಗರ ಮನೆಯಲ್ಲಿ ಉಣಲೊಲ್ಲೆ ಯಾಕೊ ಸಾಧಿಸಿ ನೋಡಲು ನಿನಗೆ ಇಷ್ಟು ಬದುಕುಂಟಾದರು ಉಸುರಲಿನ್ಯಾಕೊ ||೨|| ಅಕ್ಕತಂಗಿಯರಿರಲು ನೀನು ರೊಕ್ಕವಿಕ್ಕಿ ಮದುವೆ ಆಗುದ್ಯಾಕೊ ಚಿಕ್ಕ ತಂಗಿ ತಾಯಿ ಮೊದಲು ನಿನ್ನ ಲೆಕ್ಕದಲಿ ನೋಡಲು ಒಂದಲ್ಲವೇನೋ ||೩|| ಶಂಕರಮತಕೆ ನೀ ಹೊಂದಿ ಪಂಕದೊಳು ಬೀಳಬೇಕಲ್ಲೊ ಸಂಕಟಗೊಳಗಾದಿಯಲ್ಲ ನಿನ್ನ ಬಿಂಕವ ಮುರಿವರು ಯಮನವರಲ್ಲೊ ||೪|| ಇನ್ನಾದರು ಭೇದಮತವನು ನೀನು ಚೆನ್ನಾಗಿ ತಿಳಿಯೊ ರಂಗವಿಠಲನು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮರುದಂಶರ ಮತ ಪಿಡಿಯದೆ

(ನಾದನಾಮ ಕ್ರಿಯೆ ರಾಗ ಅಟ್ಟತಾಳ) ಮರುದಂಶರ ಮತ ಪಿಡಿಯದೆ ಇಹ- ಪರದಲ್ಲಿ ಸುಖವಿಲ್ಲವಂತೆ ||ಪ|| ಅರಿತು ವಿವೇಕದಿ ಮರೆಯದೆ ನಮ್ಮ ಗುರುರಾಯರ ನಂಬಿ ಬದುಕಿರೋ ||ಅ.ಪ|| ಕ್ಷೀರವ ಕರೆದಿಟ್ಟ ಮಾತ್ರದಿ ಸಂ- ಸ್ಕಾರವಿಲ್ಲದೆ ಘೃತವಾಗದಂತೆ ಸೂರಿಜನರ ಸಂಗವಿಲ್ಲದೆ ಸಾರ ವೈರಾಗ್ಯ ಭಾಗ್ಯ ಪುಟ್ಟದಂತೆ ||೧|| ಉಪದೇಶವಿಲ್ಲದ ಮಂತ್ರ ಏಸು ಜಪಿಸಲು ಫಲಗಳ ಕೊಡದಂತೆ ಉಪವಾಸ ವ್ರತಗಳಿಲ್ಲದೆ ಜೀವ ತಪಸಿಯೆನಿಸಿಕೊಳ್ಳಲರಿನಯದಂತೆ ||೨|| ಸಾರ ಮಧ್ವಶಾಸ್ತ್ರವೋದದೆ ಗುರು ತಾರತಮ್ಯ ಜ್ಞಾನ ಪುಟ್ಟದಂತೆ ಶ್ರೀ ರಂಗವಿಠಲನ ಭಜಿಸದೆ ಮುಂದೆ ಪರಮಗತಿ ದೊರಕೊಳ್ಳದಂತೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮರೆತೆಯೇನೋ ರಂಗಾ ಮಂಗಳಾಂಗ

(ಕಾಂಬೋಧಿ ರಾಗ ಝಂಪೆತಾಳ) ಮರೆತೆಯೇನೋ ರಂಗಾ ಮಂಗಳಾಂಗ ತುರುಕರ ಕಾಯ್ವಲ್ಲಿ ತೊಂಡನಾಗಿದ್ದೆನ್ನ ||ಪ|| ಕೋಲು ಕೈಯಲಿ ಕೊಳಲು ಜೋಲುಗಂಬಳಿ ಹೆಗಲ ಮ್ಯಾಲೆ ಕಲ್ಲಿ ಚೀಲ ಕೊಂಕಳಲ್ಲಿ ಕಾಲಗಡಗವನಿಟ್ಟು ಕಾಡೊಳಿಹ ಪಶುಹಿಂಡ ಲಾಲಿಸುವ ಬಾಲಕರ ಮ್ಯಾಳದೊಳಗಿದ್ದೆನ್ನ ||೧|| ಕಲ್ಲು ಮಣಿ ಕವಡೆಯನು ಕಾಡೊಳಿಹ ಗುಲಗಂಜಿ ಸಲ್ಲದೊಡವೆಯ ನೀನು ಸರ್ವಾಂಗಕೆ ಅಲ್ಲಲ್ಲೆಸೆಯೆ ಧರಿಸಿ ನವಿಲಗರಿಗಳ ಗೊಂಡೆ ಅಲ್ಲಿ ಗೊಲ್ಲರ ಕೂಡ ಚಲ್ಲಾಟ ಮಾಡುತಲಿ ||೨|| ಸಿರಿದೇವಿ ಬಂದು ಸೇರಿದ ಬಳಿಕ ಲೋಕದಲಿ ಸಿರಿ ಅರಸನೆಂದು ಸೇವಕರರಿವರೋ ಶರಣಾಗತರ ಪೊರೆವ ಶ್ರೀರಂಗವಿಠಲಯ್ಯ ನರಸಿಂಗ ನೀನಿರುವ ಪರಿಯು ಮುಂದಿನ ಸಿರಿಯು||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಭೂಷಣಕೆ ಭೂಷಣ ಇದು ಭೂಷಣ

(ಸಾರಂಗ ರಾಗ ಝಂಪೆ ತಾಳ) ಭೂಷಣಕೆ ಭೂಷಣ ಇದು ಭೂಷಣ ಶೇಷಗಿರಿವಾಸ ಶ್ರೀ ವರವೆಂಕಟೇಶ ||ಪ|| ನಾಲಿಗ್ಗೆ ಭೂಷಣ ನಾರಾಯಣ ನಾಮ ಕಾಲಿಗೆ ಭೂಷಣ ಹರಿಯಾತ್ರೆಯು ಆಲಯಕೆ ಭೂಷಣ ತುಲಸಿ ವೃಂದಾವನ ವಿ- ಶಾಲ ಕರ್ಣಕೆ ಭೂಷಣ ವಿಷ್ಣುಕಥೆಯು ||೧|| ದಾನವೇ ಭೂಷಣ ಇರುವ ಹಸ್ತಂಗಳಿಗೆ ಮಾನವೇ ಭೂಷಣ ಮಾನವರಿಗೆ ಜ್ಞಾನವೇ ಭೂಷಣ ಮುನಿಯೋಗಿವರರಿಗೆ ಮಾನಿನಿಗೆ ಭೂಷಣ ಪತಿಭಕ್ತಿಯು ||೨|| ರಂಗನನು ನೋಡುವುದೇ ಕಂಗಳಿಗೆ ಭೂಷಣ ಮಂಗಳಾಂಗಗೆ ಮಣಿವ ಶಿರ ಭೂಷಣ ಶೃಂಗಾರ ತುಲಸಿ ಮಣಿ ಕೊರಳಿಗೆ ಭೂಷಣ ರಂಗವಿಠಲ ನಿಮ್ಮ ನಾಮ ಅತಿ ಭೂಷಣ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮನೆಯಿಂದ ಸಂತೋಷ ಕೆಲವರಿಗೆ ಲೋಕದಲ್ಲಿ

ಮನೆಯಿಂದ ಸಂತೋಷ ಕೆಲವರಿಗೆ ಲೋಕದಲ್ಲಿ ಧನದಿಂದ ಸಂತೋಷ ಕೆಲವರಿಗೆ ಲೋಕದಲ್ಲಿ ವನಿತೆಯಿಂ ಸಂತೋಷ ಕೆಲವರಿಗೆ ಲೋಕದಲ್ಲಿ ತನಯರಿಂ ಸಂತೋಷ ಕೆಲವರಿಗೆ ಲೋಕದಲ್ಲಿ ಇನಿತು ಸಂತೋಷ ಅವರವರಿಗಾಗಲಿ ನಿನ್ನ ನೆನೆವೋ ಸಂತೋಷ ಎನಗಾಗಲಿ ನಮ್ಮ ರಂಗವಿಠಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಭಕ್ತಿ ಬೇಕು ವಿರಕ್ತಿ ಬೇಕು

(ಶಂಕರಾಭರಣರಾಗ ಅದಿತಾಳ) ಭಕ್ತಿ ಬೇಕು ವಿರಕ್ತಿ ಬೇಕು ಸರ್ವ- ಶಕ್ತಿ ಬೇಕು ಮುಕ್ತಿಯ ಬಯಸುವಗೆ ||ಪ|| ಸತಿ ಅನುಕೂಲ ಬೇಕು ಸುತನಲಿ ಗುಣಬೇಕು ಮತಿವಂತನಾಗಬೇಕು ಮತ ಒಂದಾಗಿರಬೇಕು ||೧|| ಜಪದ ಜಾಣುವೆ ಬೇಕು ತಪದ ನೇಮವೆ ಬೇಕು ಉಪವಾಸ ವ್ರತ ಬೇಕು ಉಪಶಾಂತವಾಗಿರಬೇಕು ||೨|| ಸುಸಂಗ ಹಿಡಿಯಲಿಬೇಕು ದುಸ್ಸಂಗ ಬಿಡಲಿಬೇಕು ರಂಗವಿಠಲನ್ನ ಬಿಡದೆ ನೆರೆ ನಂಬಿರಬೇಕು ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು