ಅರ್ಥಿಯಾಗಿದೆ ಬನ್ನಿ ಅರ್ತು ನೋಡುವ

ಅರ್ಥಿಯಾಗಿದೆ ಬನ್ನಿ ಅರ್ತು ನೋಡುವ

(ಬಿಹಾಗ್ ರಾಗ ದಾದರಾ ತಾಳ) ಅರ್ಥಿಯಾಗಿದೆ ಬನ್ನಿ ಅರ್ತು ನೋಡುವ ಗುರುಮೂರ್ತಿಯಿಂದ ನಿತ್ಯವಾಗಿ ಪೂರ್ಣಬೆರೆತು ಕೂಡುವಾ ಬನ್ನಿ ಗುರ್ತದಿಂದ ||ಧ್ರುವ|| ಸೂರ್ಯನಿಲ್ಲದೆ ಸುಪ್ರಕಾಶ ತುಂಬಿದೆ ಹೇಳತೀನ ತೂರ್ಯಾವಸ್ಥೆಯೊಳು ಬೆರೆದು ಕೂಡಿದೆ ಜ್ಞಾನಿಬಲ್ಲ ಖೂನ ಬರಿಯ ಮಾತನಾಡಿ ಹೊರೆಯ ಹೇಳುವದಲ್ಲ ಅರಹು ಸ್ಥಾನ ಪರಿಯಾಯದಿಂದ ಪರಿಣಮಿಸಿ ನೋಡಿ ಪರಮಪ್ರಾಣ ||೧|| ಚಂದ್ರನಿಲ್ಲದೆ ಬೆಳದಿಂಗಳು ಬಿದ್ದಿದೆ ಬಹಳ ಇಂದ್ರಾದಿಗಳೆಲ್ಲ ಹರುಷದಿ ನೋಡುವರು ಸರ್ವಕಾಲ ಸುಂದರವಾದ ಸುವಸ್ತು ಒಳಗೊಂಡಿದೆ ಅಚಲ ಸಾಂದ್ರವಾಗಿ ಸುಖ ತುಂಬಿ ತುಳುಕುತಿದೆ ಥಳ ಥಳ ||೨|| ಮನದ ಕೊನೆಯಲಿದ್ದ ಘನಸುಖ ನೋಡಿರೋ ನೆನೆದು ಬೇಗ ಸ್ವಾನುಭವದಲನುಭವಿಸುವದು ಬ್ರಹ್ಮಭೋಗ ನಾ ನೀನೆಂಬುವ ಮಾತು ಏನು ತಾಳುವದಲ್ಲ ರಾಜಯೋಗ ದೀನ ಮಹಿಪತಿಸ್ವಾಮಿ ತಾನೆತಾನಾದ ಸದ್ಗುರುವೀಗ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು