ಅನುಭವಿದೇ ನೋಡಿ ಆನಂದೋ ಬ್ರಹ್ಮ

ಅನುಭವಿದೇ ನೋಡಿ ಆನಂದೋ ಬ್ರಹ್ಮ

(ಮಾಲಕಂಸ್ ರಾಗ ತಾಳ ತ್ರಿತಾಳ) ಅನುಭವಿದೇ ನೋಡಿ ಆನಂದೋ ಬ್ರಹ್ಮ ಏನೆಂದ್ಹೇಳಲಿನ್ನಾಗು ಸಂಭ್ರಮ ||ಧ್ರುವ|| ಸುಖ ನೋಡಿ ನಮ್ಮ ಸ್ವಾನುಭವದ ಸಖರಿಂದ ಮೀರಿ ಬಲು ಸುಸ್ವಾದ ಆಖರಿಂದ ಕೇಳಿ ಗುರು ನಿಜಬೋಧ ಶುಕಮುನಿ ಸೇವಿಸುವದಾ ||೧|| ಬೆರೆದು ನೋಡಿ ಆರು ಚಕ್ರವೇರಿ ಸುರಿಯುತಿದೆ ಸುಖಸಂತ್ರಾಧಾರಿ ಭೋರ್ಗರೆಯುತಿದೆ ಅನಂತಪರಿ- ದೋರಿ ಕೊಡುತಾನೆ ಶ್ರೀಹರಿ ||೨|| ಸುಗ್ಗಿ ಇದೇ ನೋಡಿ ಸುಜ್ಞಾನಿಗಳು ಲಗ್ಗೆ ಮಾಡಿಕೊಳ್ಳಿ ಅದೆ ಬಲು ಬಹಳ ಬೊಗ್ಗಿ ಉಣಬೇಕು ಇದು ಸರ್ವಕಾಲ ಹಿಗ್ಗಿಕೊಳ್ಳೊ ಮಹಿಪತಿ ನೀ ತರಳ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು