ವೆಂಕಟರಮಣ ವೇದಾಂತ.

(ರಾಗ ಆರಭಿ. ಅಟ ತಾಳ.) ವೆಂಕಟರಮಣ ವೇದಾಂತ ನಿನ್ನಯ ಪಾದ ಪಂಕಜ ಕಂಡ ಮೇಲೆ ಮಂಕು ಮಾನವರ ಬೇಡಿಸುವುದುಚಿತವೆ ಶಂಖಚಕ್ರಾಂಕಿತನೆ ||ಪ|| ಕ್ಷೀರ ಸಾಗರವ ಪೊಂದಿದವ ಮಥಿಸಿದ ನೀರು ಮಜ್ಜಿಗೆ ಕಾಣನೆ? ಚಾರು ಕಲ್ಪವೃಕ್ಷದಡಿಯಲ್ಲಿ ಕುಳಿತವಗೆ ದೋರೆ ತಿಂತ್ರಿಣಿ ಬಯಕೆಯೆ?
ದಾಸ ಸಾಹಿತ್ಯ ಪ್ರಕಾರ
ಬರೆದವರು

ವಾಸುದೇವನ ಚರಣವನಜ.

(ರಾಗ ನಾಟ. ಅಟ ತಾಳ) ವಾಸುದೇವನ ಚರಣವನಜ ವಂದಿಪನೆ , ಸಂ- ನ್ಯಾಸ ರತ್ನಾಕರನೆ ವ್ಯಾಸಮುನಿರಾಯ ವಾದಿಗಜಸಿಂಹ ದುರ್ವಾದಿ ಮೃಗ ಭೇರುಂಡ ಮಾಯಾ- ವಾದಿ ಫಣಿ ಗರುಡ ತತ್ವಾದಿರಚಿತ ವಾದಿ ಭಯಂಕರ ದುರ್ವಾದಿ ಕೋಲಾಹಲ ವಾದಿ ಮಸ್ತಕ ಶೂಲ ಮಧುರ ಗುಣಶೀಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಉಣಲೊಲ್ಲೆ ಯಾಕೋ.

(ರಾಗ ಯದುಕುಲಕಾಂಭೋಜಿ. ಝಂಪೆ ತಾಳ.) ಉಣಲೊಲ್ಲೆ ಯಾಕೋ ಕಂದ , ಆವ ಗೋವಳತಿಯರ ಕಣ್ಣು ದೃಷ್ಟಿ ತಾಗಿತಯ್ಯ ||ಪ|| ಅನುದಿನ ನಮ್ಮೆಲ್ಲರ ಅಗಲಬಾರದು ಎಂದು ಮನಸೋತು ಗೋಪಿಯರು ಮೆಚ್ಚಿ ಮದ್ದಿಕ್ಕಿದರೆ ||ಅ. ಪ|| ಅಸುರೆ ಪೂತನಿಯಿತ್ತ ವಿಷದ ಮೊಲೆಗಳನುಂಡು
ದಾಸ ಸಾಹಿತ್ಯ ಪ್ರಕಾರ
ಬರೆದವರು

ತಿರುಪತಿ ವೆಂಕಟರಮಣ.

(ರಾಗ: ಖರಹರಪ್ರಿಯ. ಆದಿ ತಾಳ.) ತಿರುಪತಿ ವೆಂಕಟರಮಣ ನಿನಗೇತಕೆ ಬಾರದು ಕರುಣ ನಂಬಿದೆ ನಿನ್ನಯ ಚರಣ ಪರಿಪಾಲಿಸಬೇಕೋ ಕರುಣ ಅಳಗಿರಿಯಿಂದಲಿ ಬಂದ ಸ್ವಾಮಿ ಅಂಜನಗಿರಿಯಲಿ ನಿಂದ ಕೊಳಲು ಧ್ವನಿಯೂದೋ ಚಂದ ನಮ್ಮ ಕುಂಡಲರಾಯ ಮುಕುಂದ
ದಾಸ ಸಾಹಿತ್ಯ ಪ್ರಕಾರ
ಬರೆದವರು

ತನುವ ನೀರೊಳಗದ್ದಿ.

(ರಾಗ ಮಧ್ಯಮಾವತಿ ಅಟ ತಾಳ) ತನುವ ನೀರೊಳಗದ್ದಿ ಫಲವೇನು ಮನದಲ್ಲಿ ದೃಢ ಭಕ್ತಿ ಇಲ್ಲದ ಮನುಜನು ದಾನ ಧರ್ಮಗಳನ್ನು ಮಾಡುವುದೆ ಸ್ನಾನ ಜ್ಞಾನ ತತ್ವಂಗಳ ತಿಳಿವುದೆ ಸ್ನಾನ ಹೀನ ಪಾಪಂಗಳ ಬಿಡುವುದೆ ಸ್ನಾನ ಧ್ಯಾನದಿ ಮಾಧವನ ನೋಡುವುದೆ ಸ್ನಾನ ಗುರುಗಳ ಪಾದ ದರ್ಶನವೆ ಸ್ನಾನ
ದಾಸ ಸಾಹಿತ್ಯ ಪ್ರಕಾರ
ಬರೆದವರು

ತನಗಿಲ್ಲದಾ ವಸ್ತುವೆಲ್ಲಿದ್ದರೇನು

(ರಾಗ ಸಾವೇರಿ. ಆದಿ ತಾಳ.) ತನಗಿಲ್ಲದಾ ವಸ್ತುವೆಲ್ಲಿದ್ದರೇನು , ತನ್ನ ಮನಕೆ ಬಾರದ ಹೆಣ್ಣು ಮೆಚ್ಚಿ ಬಂದರೇನು ಆದರಣೆಯಿಲ್ಲದೂಟವು ಮೃಷ್ಟಾನ್ನವಾದರೇನು ವಾದಿಸುವ ಸತಿಸುತರು ಇದ್ದು ಬಲವೇನು ಕ್ರೋಧವನ್ನು ಬೆಳೆಸುವ ಸೋದರಿಗರಿದ್ದರೇನು
ದಾಸ ಸಾಹಿತ್ಯ ಪ್ರಕಾರ
ಬರೆದವರು

ತಾಳು ತಾಳೆಲೋ ರಂಗಯ್ಯ

(ರಾಗ ಶಂಕರಾಭರಣ ಆದಿ ತಾಳ) ತಾಳು ತಾಳೆಲೋ ರಂಗಯ್ಯ ನೀ ತಾಳು ತಾಳೆಲೋ ರಂಗಯ್ಯ ನಾಳೆ ನಮ್ಮನೆಗೆ ಬಂದರೆ ನಿನ್ನ ಕಾಲ ಕಂಭಕೆ ಕಟ್ಟಿ ಹೇಳುವೆ ಗೋಪಿಗೆ ದೊರೆಗಳ ಮಗನೆಂಬುದಕೇನೋ ಬಹು ದೂರದಿ ಮನೆಯ ಪೊಕ್ಕ ಪರಿಯೇನೋ ದುರುಳ ಬುದ್ಧಿ ನಿನಗೆ ತರವೇನೋ ,ಹಿಂದೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ತಾ ಪಡೆದು ಬಂದುದಕುಪಾಯವೇನು

(ರಾಗ ಕಾಂಭೋಜಿ ಝಂಪೆ ತಾಳ) ತಾ ಪಡೆದು ಬಂದುದಕುಪಾಯವೇನು ಕೋಪದಲಿ ಶ್ರೀಪತಿಯ ಶಪಿಸಿದರೇನು ಅನ್ನಕಿಲ್ಲವು ಎನ್ದು ಅತಿದೈನ್ಯ ಪಡಲೇನು ಮನ್ನಣೆಯ ಸೌಭಾಗ್ಯ ಬಯಸಲೇನು ತನ್ನ ಶಿರ ಅಡಿ ಮಾಡಿ ತಪವ ಮಾಡಿದರೇನು ಎಣ್ಣೆ ಹಚ್ಚಿ ಹುಡಿಯೊಳಗೆ ಉರುಳಾಡಲೇನು
ದಾಸ ಸಾಹಿತ್ಯ ಪ್ರಕಾರ
ಬರೆದವರು

ತಾಳ ಬೇಕು ತಕ್ಕ ಮೇಳ ಬೇಕು

( ರಾಗ: ಮಧ್ಯಮಾವತಿ. ಅಟ ತಾಳ) ತಾಳ ಬೇಕು ತಕ್ಕ ಮೇಳ ಬೇಕು , ಶಾಂತ ವೇಳೆ ಬೇಕು ಗಾನವನು ಕೇಳ ಬೇಕೆಂಬುವರಿಗೆ ಯತಿಪ್ರಾಸವಿರ ಬೇಕು ಗತಿಗೆ ನಿಲ್ಲಿಸ ಬೇಕು ರತಿಪತಿ ಪಿತನೊಳು ಅತಿ ಪ್ರೇಮವಿರ ಬೇಕು ಗಳ ಶುದ್ಧವಿರ ಬೇಕು ತಿಳಿದು ಪೇಳಲು ಬೇಕು ಕಳವಳ ಬಿಡ ಬೇಕು
ದಾಸ ಸಾಹಿತ್ಯ ಪ್ರಕಾರ
ಬರೆದವರು

ತಾ ಹೊನ್ನ ಹಿಡಿ ಹೊನ್ನ ಚಿನ್ನದ ಗುಬ್ಬಿ

(ರಾಗ: ಘಂಟಾರವ. ಆದಿ ತಾಳ.) ತಾ ಹೊನ್ನ ಹಿಡಿ ಹೊನ್ನ ಚಿನ್ನದ ಗುಬ್ಬಿ ಹಿಡಿ ಹೊನ್ನ ತಾ ಕೃಷ್ಣ ಎಂದಳೆ ಗೋಪಿ ತನಯನ ಎತ್ತಿ ಸಂತೋಷದಿಂದ ಗೋಪಿ ಮುನಿಜನ ವಂದ್ಯನ ಮುದ್ದಾಡಿಸುತ್ತ ಚಿನ್ಮಯ ರೂಪ ವಿಚಿತ್ರದ ಬೊಂಬೆ ನಿನ್ನ ಚೆಲುವ ಹಸ್ತವನಾಡಿಸು ಎಂದಳೆ
ದಾಸ ಸಾಹಿತ್ಯ ಪ್ರಕಾರ
ಬರೆದವರು