ತನಗಿಲ್ಲದಾ ವಸ್ತುವೆಲ್ಲಿದ್ದರೇನು

ತನಗಿಲ್ಲದಾ ವಸ್ತುವೆಲ್ಲಿದ್ದರೇನು

(ರಾಗ ಸಾವೇರಿ. ಆದಿ ತಾಳ.) ತನಗಿಲ್ಲದಾ ವಸ್ತುವೆಲ್ಲಿದ್ದರೇನು , ತನ್ನ ಮನಕೆ ಬಾರದ ಹೆಣ್ಣು ಮೆಚ್ಚಿ ಬಂದರೇನು ಆದರಣೆಯಿಲ್ಲದೂಟವು ಮೃಷ್ಟಾನ್ನವಾದರೇನು ವಾದಿಸುವ ಸತಿಸುತರು ಇದ್ದು ಬಲವೇನು ಕ್ರೋಧವನ್ನು ಬೆಳೆಸುವ ಸೋದರಿಗರಿದ್ದರೇನು ಮಾದಿಗನ ಮನೆಯಲಿ ಮದುವೆಯಾದರೇನು ಸಾವಿಗಿಲ್ಲದೌಷಧಿಯು ಸಂಚಿ ತುಂಬ ಇದ್ದರೇನು ದೇವಕೀ ಸುತನ ಹೊಗಳದ ಕವಿತ್ವವೇನು ಹೇವವಿಲ್ಲದ ಗಂಡು ಹೆಚ್ಚಾಗಿ ಬಾಳಿದರೇನು ಹಾವಿನ ಹೆಡೆಯೊಳಗೆ ಹಣವಿದ್ದರೇನು ಸನ್ಮಾನ ಮಾಡದ ದೊರೆ ಸಾವಿರಾರು ಕೊಟ್ಟರೇನು ತನ್ನ ತಾ ತಿಳಿಯದ ಜ್ಞಾನವೇನು ಚೆನ್ನಾಗಿ ಪುರಂದರ ವಿಟ್ಠಲನ ನೆನೆಯದವ ಸನ್ಯಾಸಿಯಾದರೇನು ಷಂಢನಾದರೇನು
ದಾಸ ಸಾಹಿತ್ಯ ಪ್ರಕಾರ
ಬರೆದವರು