ತಾಳು ತಾಳೆಲೋ ರಂಗಯ್ಯ
(ರಾಗ ಶಂಕರಾಭರಣ ಆದಿ ತಾಳ)
ತಾಳು ತಾಳೆಲೋ ರಂಗಯ್ಯ
ನೀ ತಾಳು ತಾಳೆಲೋ ರಂಗಯ್ಯ
ನಾಳೆ ನಮ್ಮನೆಗೆ ಬಂದರೆ ನಿನ್ನ
ಕಾಲ ಕಂಭಕೆ ಕಟ್ಟಿ ಹೇಳುವೆ ಗೋಪಿಗೆ
ದೊರೆಗಳ ಮಗನೆಂಬುದಕೇನೋ ಬಹು
ದೂರದಿ ಮನೆಯ ಪೊಕ್ಕ ಪರಿಯೇನೋ
ದುರುಳ ಬುದ್ಧಿ ನಿನಗೆ ತರವೇನೋ ,ಹಿಂದೆ
ತಿರುಗಿ ಬೇಡ್ಯುಂಡದ್ದು ಮರೆತ್ಯೇನೋ ರಂಗ
ಚಿಕ್ಕ ಮಕ್ಕಳು ಹೋದರು ಎಂದು ನೀ
ಬಂದು ಕಕ್ಕುಲತೆಯ ಮಾಡುವರೇನೋ
ಸಿಕ್ಕಿದ ಗೋಪಾಲ ಹಿಡಿ ಹಿಡಿ ಎಂದರೆ, ನೀನು
ಬಿಕ್ಕಿ ಬಿಕ್ಕಿ ಅತ್ತರೆ ಬಿಡುವರೇನೋ ರಂಗ
ಕಟ್ಟಿದಾಕಳ ಮೊಲೆಗಳುಂಡು, ಕರು
ಬಿಟ್ಟು ಹೇಳುವುದೇನೇಲೋ ರಂಗ
ಸೃಷ್ಟಿಗೊಡೆಯ ಶ್ರೀ ಪುರಂದರ ವಿಠಲ ನೀ
ಕಟ್ಟಲ್ಲಿ ನಿಂತ ಕಾರಣವೇನೋ ರಂಗ
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments