ಚಿಂತೆ ಯಾತಕೋ

(ರಾಗ ಪಂತುವರಾಳಿ. ರೂಪಕ ತಾಳ) ಚಿಂತೆ ಯಾತಕೋ, ಬಯಲ ಭ್ರಾಂತಿ ಯಾತಕೋ ||ಪ|| ಕಂತು ಪಿತನ ದಿವ್ಯ ನಾಮ ಮಂತ್ರವನ್ನು ಜಪಿಸುವವಗೆ || ಅ.ಪ|| ಒಳ್ಳೆ ಉದಯ ಕಾಲದಲ್ಲಿ ವೇಳೆಯರಿತು ಕೂಗುವಂಥ ಕೋಳಿ ತನ್ನ ಮರಿಗೆ ಮೊಲೆಯ ಹಾಲ ಕೊಟ್ಟು ಸಲಹಿತೆ ||೧|| ಸಡಗರದ ನಾರಿಯರು ಹಡೆಯುವಾಗ ಸೂಲಗಿತ್ತಿ (/ಹಿಡಿದು ಸೂಲಗಿತ್ತಿ ಹೆರಿಸೆ) ಅಡವಿಯೊಳಗೆ ಹೆರುವ ಮೃಗವ ಹಿಡಿದು ಹೆರಿಸುವವರು ಯಾರು ||೨|| ಹೆತ್ತ ತಾಯಿ ಸತ್ತು ಹೋಗಲು ಕೆಟ್ಟೆನೆಂಬರು ಲೋಕ ಜನರು ಮತ್ತೆ ಗುಂಗುರಿಗೆ ತಾಯಿ ಹತ್ತಿರಿದ್ದು ಸಲಹಿತೆ ( /ಹೆತ್ತತಾಯಿ ಸತ್ತು ಹೋಗೆ ಮತ್ತೆ ಸಲಹಿರೆಂಬ ಜನರು ಹುತ್ತಿನೊಳಿರುವ ಹಾವನು ಹೆತ್ತ ತಾಯಿ ಸಲಹುತಿಹುದೆ) ||೨|| ಗಟ್ಟಿ ಮಣ್ಣ ಶಿಶುವ ಮಾಡಿ ಹೊಟ್ಟೆಯೊಳಗೆ ಇರಿಸಲಿಲ್ಲ ಕೊಟ್ಟ ದೈವ ಕೊಂಡು ಹೋದರೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಚಿಕ್ಕವನೇ ಇವನು

(ರಾಗ ಮೋಹನಕಲ್ಯಾಣಿ. ಅಟ ತಾಳ) ಚಿಕ್ಕವನೇ ಇವನು , ನಮ್ಮ ಕೈಗೆ ಸಿಕ್ಕದೆ ಓಡುವನು ||ಪ|| ಅಕ್ಕಯ್ಯ ಮಕ್ಕಳು ಹುಟ್ಟುವ ಮರ್ಮವ ಘಕ್ಕನೆ ಎನಕೂಡೆ ಹೇಳು ಹೇಳೆನುತಾನೆ || ಅ.ಪ || ನೀರಿಗೆ ಹೋಗುವಾಗ ನಿಂತುಕೊಂಡು ಯಾರು ಇಲ್ಲದೆ ಕರೆವ ದಾರಿಯಡ್ಡವ ಕಟ್ಟಿ ಕೂಡಿಕೊ ಎನುತಲೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಚಂದ್ರಚೂಡ ಶಿವ

(ರಾಗ ಶಂಕರಾಭರಣ. ಆದಿ ತಾಳ.) ಚಂದ್ರಚೂಡ ಶಿವ ಶಂಕರ ಪಾರ್ವತಿ ರಮಣಾ ನಿನಗೇ ನಮೋ ನಮೋ ಸುಂದರ ಮೃಗಧರ ಪಿನಾಕಧನುಕರ ಗಂಗಾಶಿರ ಗಜಚರ್ಮಾಂಬರಧರ ನಂದಿ ವಾಹನಾನಂದದಿಂದ ಮೂರ್ಜಗದಿ ಮೆರೆವನು ನೀನೆ ಕಂದರ್ಪನ ಕ್ರೋಧದಿಂದ ಕಣ್ದೆರೆದು ಕೊಂದ ಉಗ್ರನು ನೀನೆ , ಘಟ-
ದಾಸ ಸಾಹಿತ್ಯ ಪ್ರಕಾರ
ಬರೆದವರು

ಭಾರತಿ ದೇವಿಯ ನೆನೆ

(ರಾಗ ಖರಹರಪ್ರಿಯ. ಆದಿ ತಾಳ). ಭಾರತಿ ದೇವಿಯ ನೆನೆ ನೆನೆ ನಿರತ ಭಕುತಿಗಿದು ಮನೆ ಮನೆ ಮಾರುತನರ್ಧಾಂಗಿ ಸುಚರಿತ ಕೋಮಲಾಂಗಿ ಸಾರಸಾಕ್ಷಿ ಕೃಪಾಂಗಿ ಅಪಾಂಗಿ ಕಿಂಕಿಣಿ ಕಿಣಿ ಪಾದಪಂಕಜ ನೂಪುರ ಕಂಕಣ ಕುಂಡಲಾಲನ್ಕೃತ ದೇಹ ಶಂಕರಸುರವರ ವಂದಿತ ಚರಣೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಂಡನಾದೆನು

(ರಾಗ ಮುಖಾರಿ. ಝಂಪೆ ತಾಳ) ಬಂಡನಾದೆನು ನಾನು ಸಂಸಾರದಿ ಕಂಡು ಕಾಣದ ಹಾಗೆ ಇರಬಹುದೆ ಹರಿಯೆ ಕಂಡ ಕಲ್ಲುಗಳಿಗೆ ಕೈಮುಗಿದು ಸಾಕಾದೆ ದಿಂಡೆಗಾರರ ಮನೆಗೆ ಬಲು ತಿರುಗಿದೆ ಶುಂಡಾಲನಂತೆನ್ನ ಮತಿ ಮಂದವಾಯಿತೈ ಪುಂಡರೀಕಾಕ್ಷ ನೀ ಕರುಣಿಸೈ ಬೇಗ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬೇಡವೋ ಬ್ರಹ್ಮದ್ರೋಹ.

(ರಾಗ ಶಂಕರಾಭರಣ. ಅಟ ತಾಳ.) ಬೇಡವೋ ಬ್ರಹ್ಮದ್ರೋಹ ಬೇಡವೋ ||ಪ|| ಹೊತ್ತಿಹೆ ನರಜನ್ಮವನ್ನು ,ಪಾದ ಸುತ್ತಿ ಕೊಂಡಿಹುದಲ್ಲೊ ನೀನು ಆಹಾ ಚಿತ್ತದೊಳಗೆ ನೋಡು ಉತ್ತಮ ವಿಪ್ರರ ವೃತ್ತಿಯ ಕಳೆದು ಉನ್ಮತ್ತನಾಗಲು ಬೇಡ ಸೂಸುವ ನದಿಯಲ್ಲಿ ಬಿದ್ದು ಮುಂದೆ ಈಸಲಾರದೆ ಮುಳುಗೆದ್ದು ಆಹಾ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಣ್ಣಿಸಿ ಗೋಪಿ.

(ರಾಗ ಧನ್ಯಾಸಿ. ಆದಿ ತಾಳ) ಬಣ್ಣಿಸಿ ಗೋಪಿ ಹರಸಿದಳು ಎಣ್ಣೆಯನೊತ್ತುತ ಯದುಕುಲ ತಿಲಕನಿಗೆ ಆಯುಷ್ಯವಂತನಾಗು ಅತಿ ಬಲ್ಲಿದನಾಗು ಮಾಯದ ಖಳರ ಮರ್ದನನಾಗು ರಾಯರ ಪಾಲಿಸು ರಕ್ಕಸರ ಸೋಲಿಸು ವಾಯುಸುತಗೆ ನೀನೊಡೆಯನಾಗೆನುತ ಧೀರನು ನೀನಾಗು ಅಚ್ಯುತ ನೀನಾಗು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಗೆಬಗೆ ಆಟಗಳೆಲ್ಲಿ

(ರಾಗ ಕೇದಾರಗೌಳ. ಆದಿ ತಾಳ) ಬಗೆಬಗೆ ಆಟಗಳೆಲ್ಲಿ ಕಲಿತೆಯ್ಯ ಜಗವ ಮೋಹಿಪನೆ ||ಪ|| ಖಗವರಗಮನ ಅಗಣಿತಮಹಿಮ ಜಗದವರೊಳು ನೀ ಮಿಗಿಲಾಗೀ ಪರಿ ||ಅ.ಪ|| ಒಬ್ಬಳ ಬಸಿರಿಂದಲಿ ಬಂದು ಮ- ತ್ತೊಬ್ಬಳ ಕೈಯಿಂದಲಿ ಬೆಳೆದು ಕೊಬ್ಬಿದ ಭೂಭಾರವನಿಳುಹಲು ಇಂಥ ತಬ್ಬುಬ್ಬಿದಾಟಗಳೆಲ್ಲಿ ಕಲಿತೆಯ್ಯ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆರ ಹಾರೈಸಿದರೇನುಂಟು

(ರಾಗ ಮಧ್ಯಮಾವತಿ. ಆದಿ ತಾಳ.) ಆರ ಹಾರೈಸಿದರೇನುಂಟು, ಬರೆ ನೀರ ಕಡೆದರಲ್ಲೇನುಂಟು ಅಂತರವರಿಯದ ಅಧಮನ ಬಾಗಿಲ ನಿಂತು ಕಾಯ್ದರಲ್ಲೇನುಂಟು ಇಂತೆರದಲ್ಲಿಯು ಬಳಲಿಸಿ ತಾ ಯಮ- ನಂತೆ ಕೊಲುವನಲ್ಲೇನುಂಟು ಕೊಟ್ಟುದ ಕೊಂಡುದ ಹೇಳನ ಮಾಡೋ ಕ- ನಿಷ್ಠನ ಸೇರಿದರೇನುಂಟು
ದಾಸ ಸಾಹಿತ್ಯ ಪ್ರಕಾರ
ಬರೆದವರು

ವೀರ ಹನುಮ

(ರಾಗ ಆನಂದಭೈರವಿ. ಅಟ ತಾಳ) ವೀರ ಹನುಮ ಬಹು ಪರಾಕ್ರಮ ||ಪ|| ಸಜ್ಞಾನವಿತ್ತು ಪಾಲಿಸೆನ್ನ ಜೀವರೋತ್ತಮ ||ಅ.ಪ|| ರಾಮ ದೂತನೆನಿಸಿ ಕೊಂಡೆ ನೀ, ರಾಕ್ಷಸರ ವನವನೆಲ್ಲ ಕಿತ್ತು ಬಂದೆ ನೀ ಜಾನಕಿಗೆ ಮುದ್ರೆಯಿತ್ತು ಜಗತಿಗೆಲ್ಲ ಹರ್ಷವಿತ್ತು
ದಾಸ ಸಾಹಿತ್ಯ ಪ್ರಕಾರ
ಬರೆದವರು