ಚಿಂತೆ ಯಾತಕೋ

ಚಿಂತೆ ಯಾತಕೋ

(ರಾಗ ಪಂತುವರಾಳಿ. ರೂಪಕ ತಾಳ) ಚಿಂತೆ ಯಾತಕೋ, ಬಯಲ ಭ್ರಾಂತಿ ಯಾತಕೋ ||ಪ|| ಕಂತು ಪಿತನ ದಿವ್ಯ ನಾಮ ಮಂತ್ರವನ್ನು ಜಪಿಸುವವಗೆ || ಅ.ಪ|| ಒಳ್ಳೆ ಉದಯ ಕಾಲದಲ್ಲಿ ವೇಳೆಯರಿತು ಕೂಗುವಂಥ ಕೋಳಿ ತನ್ನ ಮರಿಗೆ ಮೊಲೆಯ ಹಾಲ ಕೊಟ್ಟು ಸಲಹಿತೆ ||೧|| ಸಡಗರದ ನಾರಿಯರು ಹಡೆಯುವಾಗ ಸೂಲಗಿತ್ತಿ (/ಹಿಡಿದು ಸೂಲಗಿತ್ತಿ ಹೆರಿಸೆ) ಅಡವಿಯೊಳಗೆ ಹೆರುವ ಮೃಗವ ಹಿಡಿದು ಹೆರಿಸುವವರು ಯಾರು ||೨|| ಹೆತ್ತ ತಾಯಿ ಸತ್ತು ಹೋಗಲು ಕೆಟ್ಟೆನೆಂಬರು ಲೋಕ ಜನರು ಮತ್ತೆ ಗುಂಗುರಿಗೆ ತಾಯಿ ಹತ್ತಿರಿದ್ದು ಸಲಹಿತೆ ( /ಹೆತ್ತತಾಯಿ ಸತ್ತು ಹೋಗೆ ಮತ್ತೆ ಸಲಹಿರೆಂಬ ಜನರು ಹುತ್ತಿನೊಳಿರುವ ಹಾವನು ಹೆತ್ತ ತಾಯಿ ಸಲಹುತಿಹುದೆ) ||೨|| ಗಟ್ಟಿ ಮಣ್ಣ ಶಿಶುವ ಮಾಡಿ ಹೊಟ್ಟೆಯೊಳಗೆ ಇರಿಸಲಿಲ್ಲ ಕೊಟ್ಟ ದೈವ ಕೊಂಡು ಹೋದರೆ ಕುಟ್ಟಿಕೊಂಡು ಅಳುವೆಯೇಕೆ||೩|| ಪರದಲ್ಲಿ ಪದವಿಯುಂಟು ಇಹದಲ್ಲಿ ಸೌಖ್ಯವುಂಟು ಗುರು ಪುರಂದರವಿಠಲನ್ನ ಸ್ಮರಣೆಯನ್ನು ಮರೆಯದವಗೆ ||೪||
ದಾಸ ಸಾಹಿತ್ಯ ಪ್ರಕಾರ
ಬರೆದವರು