ನಾನು ಬೇರ ಮಾಡುವೆ

ನಾನು ಬೇರ ಮಾಡುವೆ

(ರಾಗ ಬೆಹಾಗ್ ಅಟ ತಾಳ ) ನಾನು ಬೇರ ಮಾಡುವೆ ಎನ್ನ ನಾಲಿಗೆಯೆಂಬೊ ಎತ್ತನೇರಿಕೊಂಡು || ತನುವೆಂಬೋದೆ ಒಂದು ಗೋಣಿಯಲ್ಲಿ ರಾಮನಾಮವೆಂಬೊ ಸರಕು ತುಂಬಿಕೊಂಡು || ಇಂದ್ರಿಯಂಗಳೆಂಬ ಸುಂಕದವರಡ್ಡ ಬಂದರೆ ಮು- ಕುಂದಮುದ್ರೆಯ ತೋರಿಸಿ ಹೊಡೆದಾಡಿ || ಅಚಲಾನಂದ ಪುರಂದರವಿಠಲನಲ್ಲಿ ಪೋಗಿ ಪ್ರಚುರ ಭಕ್ತಿಯನಿತ್ತು ಮುಕ್ತಿಯ ಪಡೆದು ||
ದಾಸ ಸಾಹಿತ್ಯ ಪ್ರಕಾರ
ಬರೆದವರು