ಪುರಂದರದಾಸ

Compositions of Purandara dasa

ಕಣ್ಣೆತ್ತಿ ನೋಡಲು ಬೇಡ, ಅವಳ

(ರಾಗ ದರ್ಬಾರಿ ಆದಿತಾಳ) ಕಣ್ಣೆತ್ತಿ ನೋಡಲು ಬೇಡ ||ಪ|| ಅವಳ , ಸಣ್ಣ ಬೈತಲೆ ನೋಡಿ ಮರುಳಾಗಬೇಡ ||ಅ|| ಕಣ್ಣಿಟ್ಟು ಕೀಚಕ ಕೆಟ್ಟ , ಪರ- ಹೆಣ್ಣಿಗಾಗಿ ರಾವಣ ತಲೆಕೊಟ್ಟ ಇನ್ನೆಷ್ಟು ಹೇಳಲಾ ನಷ್ಟ ಹೆಣ್ಣ ಮೋಹಿಸಿದರೆ ಬರುವೋದು ಕಷ್ಟ || ದೂಷಿಸದಿರು ದುರುಳ ಕಣ್ಣ , ಅವಳ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಣ್ಣಿನಿಂದ ನೋಡೋ ಹರಿಯ

(ರಾಗ ಕಾಪಿ ಛಾಪುತಾಳ) ಕಣ್ಣಿನಿಂದ ನೋಡೋ ಹರಿಯ ||ಪ|| ಒಳಗಣ್ಣಿನೊಳಗಿಂದ ನೋಡೋ ಮೂಜಗದೊಡೆಯನ ||ಅ|| ಆಧಾರ ಮೊದಲಾದ ಆರು ಚಕ್ರ ಶೋಧಿಸಿ ಬಿಡಬೇಕು ಈಷಣ ಮೂರು ಸಾಧಿಸಿ ಸುಷುಮ್ನಾ ಏರು , ಅಲ್ಲಿ ಭೇದಿಸಿ ನೀ ಪರಬ್ರಹ್ಮನ ಸೇರು || ಎವೆ ಹಾಕದೆ ಮೇಲೆ ನೋಡಿ , ಬೇಗ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಣ್ಣ ಮುಂದಿರೋ ರಂಗ

(ರಾಗ ಶಂಕರಾಭರಣ ಆದಿತಾಳ) ಕಣ್ಣ ಮುಂದಿರೋ, ರಂಗ, ಕಣ್ಣ ಮುಂದಿರೋ ||ಪ|| ಪೂತನಿಯ ಮೊಲೆಯನುಂಡು ವಾತಶಕಟಾದಿ ದೈತ್ಯರ ಘಾತಿಸಿದ ರಂಗ ನಿನ್ನ ಪೋಕತನಕಂಜುವೆನು || ಕಡಹದ ಮರವನೇರಿ ಮಡುವ ಧುಮುಕಿ ಕಾಳಿಂಗನ ಪೆಡೆಯ ತುಳಿದು ಅವನ ಸ್ಥಳವ ಬಿಡಿಸಿ ಬಂದೆ ಕರುಣನಿಧಿಯೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಂಡೆ ಕಂಡೆ ಕಂಡೆ, ನಮ್ಮ ಕಂಗಳ ಧೇನುವ ಕಂಡೆ

(ರಾಗ ಮಲಹರಿ ಏಕತಾಳ) ಕಂಡೆ ಕಂಡೆ ಕಂಡೆ, ನಮ್ಮ ಕಂಗಳ ಧೇನುವ ಕಂಡೆ ಮಂಗಳಮೂರುತಿ ಮನ್ನಾರ ಕೃಷ್ಣನ ಕಂಡೆ ಕಂಡೆ ಕಂಡೆ ||ಪ|| ಉಟ್ಟಪೀತಾಂಬರ ತೊಟ್ಟ ವಜ್ರಾಂಗಿಯ ಪುಟ್ಟಪಾದದ ರನ್ನ ಮನ್ನಾರಕೃಷ್ಣನ || ಒರಳನೆಳೆವ ಬೆರಳ ಚೀಪುವನ ಧರೆಯೊಳು ಮೆರೆಯುವ ಮನ್ನಾರಕೃಷ್ಣನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಲ್ಲ್ಯಾಡಿ ಓಡಿ ಬಂದ್ಯೋ ಗೋವಿಂದ

(ರಾಗ ತೋಡಿ ಛಾಪುತಾಳ) ಎಲ್ಲ್ಯಾಡಿ ಓಡಿ ಬಂದ್ಯೋ ಗೋವಿಂದ ||ಪ|| ಚೆಲುವ ಫುಲ್ಲಲೋಚನ ಮದನ ಗೋಪಾಲಕೃಷ್ಣ ||ಅ|| ಆಡಿ ಬಂದ್ಯೊ ಮಕ್ಕಳೊಡನೆ ಕೈಲಿ ಚೆಂಡು ಬೇಡ ಬಂದ್ಯೊ , ದುಷ್ಕೃತದ ಬಂಧನ ಭವ ದೂಡ ಬಂದ್ಯೊ , ಭಕ್ತಜನಕೆ ಅಭಯಹಸ್ತ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಂತು ನಿನ್ನ ಪೂಜೆಗಳ ಮಾಡಿ ಮೆಚ್ಚಿಸುವೆನಯ್ಯಾ

(ರಾಗ ಸಾವೇರಿ ಆದಿತಾಳ) ಎಂತು ನಿನ್ನ ಪೂಜೆಗಳ ಮಾಡಿ ಮೆಚ್ಚಿಸುವೆನಯ್ಯಾ ||ಪ|| ಚಿಂತಾಯಕನೆ ನಿನ್ನ ನಾಮ ಎನಗೊಂದು ಕೋಟಿ ||ಅ|| ಪವಿತ್ರೋದಕದಿ ಪಾದವ ತೊಳೆವೆನೆಂದರೆ ಪಾವನವಾದ ಗಂಗೆ ಪಾದೋದ್ಭವೆ ನವಕುಸುಮವನು ಸಮರ್ಪಿಸುವೆನೆಂದರೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಈ ಶರೀರದ ಭ್ರಾಂತಿ ಇನ್ನೇಕೆ

(ರಾಗ ತೋಡಿ ತ್ರಿಪುಟ ತಾಳ) ಈ ಶರೀರದ ಭ್ರಾಂತಿ ಇನ್ನೇಕೆ ಮನವೆ ||ಪ|| ವಾಸುದೇವನ ನೆನೆದು ಸುಖಿಯಾಗೊ ಮನುಜ ||ಅ|| ದಂತಗಳು ಸಡಲಿದವು ಧಾತುಗಳು ಕುಂದಿದವು ಕಾಂತೆಯರು ಜರೆದು ಓಕರಿಸುವರೊ ಚಿಂತೆಯೇತಕೆ ಬಯಲಾದ ದೇಹಕ್ಕೆ ಇಂತೆಂದು ತಿಳಿದು ಶ್ರೀಕಾಂತನ ನೆನೆ ಮನವೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಈ ಮಹಿಯೊಳಗೆ ಗುರುಗಳೆನಿಪರೆಲ್ಲ

(ರಾಗ ಮುಖಾರಿ ಝಂಪೆತಾಳ ) ಈ ಮಹಿಯೊಳಗೆ ಗುರುಗಳೆನಿಪರೆಲ್ಲ ,ನಮ್ಮ ಶ್ರೀ ಮದಾಚಾರ್ಯ ಗುರುಶಿಖರಮಣಿಗೆ ಸರಿಯೆ ||ಪ|| ಈಯಖಿಲಜಗದೊಡೆಯ ಎಂಟು ಗುಣ ಶ್ರುತಿ ಪೌರು- ಷೇಯ ಎಂಬೀ ಕುಶಾಸ್ತ್ರಿಗಳೆಲ್ಲರು ಶ್ರೀಯರಸ ಪೂರ್ಣಗುಣ ಶ್ರುತಿ ನಿತ್ಯವೆಂಬ ಸ-
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇಷ್ಟಾದರು ಮುನ್ನೆ ಕೊಟ್ಟಿಲ್ಲದಿಲ್ಲ

(ರಾಗ ಯಮುನಾ ತ್ರಿಪುಟತಾಳ ) ಇಷ್ಟಾದರು ಮುನ್ನೆ ಕೊಟ್ಟಿಲ್ಲದಿಲ್ಲ ||ಪ|| ಅಟ್ಟಾದಡಿಗೆ ಬಿಟ್ಟು ಆಚೆಮನೆಯ ಬಿಟ್ಟು ಮೃಷ್ಟಾನ್ನವ ನೀ ಬಯಸಿದರಿಲ್ಲ ||ಅ|| ಹೆಣ್ಣಿನ ದೆಸೆಯಿಂದ ಬರುವದು ಇಲ್ಲ ಅನ್ಯ ದೇವತೆಗಳ ಪೂಜಿಸಿದರು ಇಲ್ಲ ಅನ್ಯರ ಕಾಡಿ ಬೇಡಿದರು ಇಲ್ಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇಲ್ಲೆ ಕುಳಿತಿದ್ದ ಭೂತವು

(ರಾಗ ಸುರುಟಿ ಆದಿತಾಳ) ಇಲ್ಲೆ ಕುಳಿತಿದ್ದ ಭೂತವು ||ಪ|| ಒಂದು , ಹಲ್ಲಿ ನುಂಗಿತು ಹದಿನಾಲ್ಕು ಲೋಕವ ||ಅ|| ಸೂಳೆಯ ಮನೆಯಲ್ಲಿ ಅದೊಂದು ಕೋಳಿ ಕೋಳಿಯ ನಾಲಿಗೆ ಏಳುತಾಳು ಉದ್ದ ಕೋಳಿ ನುಂಗಿತು ಏಳು ಕಾಳಿಂಗನಾಗನ್ನ ಮೇಲೆದ್ದು ಬೇಡಿತು ಸಿಂಹದ ಮರಿಯು ||
ದಾಸ ಸಾಹಿತ್ಯ ಪ್ರಕಾರ
ಬರೆದವರು