ಎಂತು ನಿನ್ನ ಪೂಜೆಗಳ ಮಾಡಿ ಮೆಚ್ಚಿಸುವೆನಯ್ಯಾ

ಎಂತು ನಿನ್ನ ಪೂಜೆಗಳ ಮಾಡಿ ಮೆಚ್ಚಿಸುವೆನಯ್ಯಾ

(ರಾಗ ಸಾವೇರಿ ಆದಿತಾಳ) ಎಂತು ನಿನ್ನ ಪೂಜೆಗಳ ಮಾಡಿ ಮೆಚ್ಚಿಸುವೆನಯ್ಯಾ ||ಪ|| ಚಿಂತಾಯಕನೆ ನಿನ್ನ ನಾಮ ಎನಗೊಂದು ಕೋಟಿ ||ಅ|| ಪವಿತ್ರೋದಕದಿ ಪಾದವ ತೊಳೆವೆನೆಂದರೆ ಪಾವನವಾದ ಗಂಗೆ ಪಾದೋದ್ಭವೆ ನವಕುಸುಮವನು ಸಮರ್ಪಿಸುವೆನೆಂದರೆ ಅಜ ಉದುಭವಿಸಿದನು ನಿನ್ನ ಪೊಕ್ಕಳ್ಹೂವಿನಲಿ || ದೀಪ ಬೆಳಗುವೆನೆ ನಿನ್ನ ಕಂಗಳೆ ಸಪ್ತ- ದ್ವೀಪಂಗಳೆಲ್ಲವ ಬೆಳಗುತಿವೆ ಆಪೋಶನವಾದರು ಈವನೆಂಬೆನೆ ಆಪೋಶನವು ಆಯಿತೇಳು ಅಂಬುಧಿಯು || ಕಾಣಿಕಿತ್ತಾದರು ಕೈಮುಗಿವೆಂಬೆನೇ ರಾಣಿವಾಸವು ಸಿರಿದೇವಿ ನಿನಗೆ ಮಾಣದೆ ಮನದೊಳು ನಿನ್ನ ನಾಮ ಸ್ಮರಣೆ ಎನ್ನಾಧೀನವ ಮಾಡೊ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು