ಪುರಂದರದಾಸ

Compositions of Purandara dasa

ಜೋಜೋ ಜೋಜೋ ಜೋ ಸಾಧುವಂತ

(ರಾಗ ಶಂಕರಾಭರಣ ಅಟತಾಳ)

 

ಜೋಜೋ ಜೋಜೋ ಜೋ ಸಾಧುವಂತ

ಜೋಜೋ ಜೋಜೋ ಜೋ ಭಾಗ್ಯವಂತ

ಜೋಜೋ ಜೋಜೋ ಜೋ ಗುಣವಂತ

ಜೋಜೋ ಜೋಜೋ ಜೋ ಲಕ್ಷ್ಮೀಕಾಂತ ||ಪ||

 

ಭಕ್ತವತ್ಸಲ ಭವಹರನೆ ಜೋಜೋ

ಕೃತ್ತಿವಾಸಪ್ರಿಯ ಕೃಷ್ಣನೆ ಜೋಜೋ

ಮುಕ್ತಿದಾಯಕ ಮುರಹರನೆ ಜೋಜೋ

ಚಿತ್ತಜನಯ್ಯ ಪರವಸ್ತುವೆ ಜೋಜೋ ||

 

ಕರುಣಾಕರ ಕರಿವರದನೆ ಜೋಜೋ

ಸುರನರ ಮುನಿವಂದಿತನೆ ಜೋಜೋ

ಗರುಡವಾಹನ ನಗಧರನೆ ಜೋಜೋ

ಖರದೂಷಣ ಸಂಹಾರನೆ ಜೋಜೋ ||

 

ವಾರಿಜಾಕ್ಷ ವಿಶ್ವಪಾಲನೆ ಜೋಜೋ

ವಾರಿಧಿಶಯನ ನರಹರಿಯೆ ಜೋಜೋ

ಘೋರದುರಿತ ಸಂಹಾರನೆ ಜೋಜೋ

ನಾರಾಯಣ ನರಹರಿಯೆ ಜೋಜೋ ||

 

ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೊಡುವುದೆಂದು ಎನ್ನ ಕೊಂಬುವುದೆಂದು

(ರಾಗ ಪೂರ್ವಿ ಅಟತಾಳ) ಕೊಡುವುದೆಂದು ಎನ್ನ ಕೊಂಬುವುದೆಂದು ಕೈ- ಪಿಡಿವುದೆಂದು ನೀನೊಲಿವುದೆಂದು || ಕೊಡುಕೊಂಬೊ ಮಹದನುಗ್ರಹದವನೆಂದು ನಿ- ನ್ನಡಿಗೆ ಸೇರಿದೆನಯ್ಯ ಬಡತನಕೌಷಧ ....||ಪ || ಶ್ವಾನ ಸೂಕರ ಜನ್ಮ ನಾನುಂಬೆನೆನ್ನಲ್ಲಿ ನೀನೆ ತದ್ರೂಪನಾದೆಯಲ್ಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೇಳೆ ಗೋಪಿ ಎನ್ನಕೂಡೆ ಈ ಕೃಷ್ಣ ಆಡುವ ಮಾತುಗಳ

(ರಾಗ ಸೌರಾಷ್ಟ್ರ ಆದಿತಾಳ) ಕೇಳೆ ಗೋಪಿ ಎನ್ನಕೂಡೆ ಈ ಕೃಷ್ಣ ಆಡುವ ಮಾತುಗಳ ||ಪ|| ಸೂಳೆಗಾರನಂತೆ ವೀಳ್ಯವ ಕೊಟ್ಟು ವೇಳೆವೇಳೆಗೆ ಬರಹೇಳಿದ ||ಅ|| ಪುಟ್ಟಪುಟ್ಟ ಕೈಯ ಗಟ್ಟಿ ಬೆಣ್ಣೆಯ ಮುದ್ದೆ ಎಷ್ಟು ಬೇಕೆಂದರೆ ಬಟ್ಟ ಕುಚಂಗಳ ಕೈಲಿ ಪಿಡಿದು ಇದರಷ್ಟು ಬೇಕೆಂದನೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೇಶವ ಮಾಧವ ಗೋವಿಂದ ವಿಠಲೆಂಬ

(ರಾಗ ಸೌರಾಷ್ಟ್ರ ಅಟತಾಳ) ಕೇಶವ ಮಾಧವ ಗೋವಿಂದ ವಿಠಲೆಂಬ ದಾಸಯ್ಯ ಬಂದ ಕಾಣೆ ||ಪ|| ದೋಷರಹಿತ ನರವೇಷವ ಧರಿಸಿದ ದಾಸಯ್ಯ ಬಂದ ಕಾಣೆ ||ಅ|| ಖಳನು ವೇದವನೊಯ್ಯೆ ಪೊಳೆವ ಕಾಯನಾದ ದಾಸಯ್ಯ ಬಂದ ಕಾಣೆ ಘಳಿಲನೆ ಕೂರ್ಮ ತಾನಾಗಿ ಗಿರಿಯ ಪೊತ್ತ ದಾಸಯ್ಯ ಬಂದ ಕಾಣೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಾವ ದೇವ ನೀನಲ್ಲದೆ

(ರಾಗ ಮಧ್ಯಮಾವತಿ ಆದಿತಾಳ) ಕಾವ ದೇವ ನೀನಲ್ಲದೆ ಜಗಕೆ ಇನ್ನಾವ ದೇವರುಳ್ಳರೈ ||ಪ|| ದೇವರ ದೇವ ನೀನೆಂದು ನಂಬಿದೆನೆನ್ನ ಕಾಯೊ ಕನಕಾಚಲ ಕೃಷ್ಣ ಕರುಣದಿ || ಅ|| ತಂದೆಯ ತೊಡೆಯ ಮೇಲೆ ಬಂದು ಕುಳಿತಿದ್ದ ಕಂದನ ಮಲತಾಯಿಯು ನೂಕಲು ಅಂದು ಶಿಶುವು ಅಡವಿಗೆ ನಡೆತರಲು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇರಬೇಕು ಹರಿದಾಸರ ಸಂಗ

(ರಾಗ ಕಾಂಭೋಜ ಅಟತಾಳ) ಇರಬೇಕು ಹರಿದಾಸರ ಸಂಗ ಪರಮ ಜ್ಞಾನಿಗಳ ಸಂಪಾದಿಸಬೇಕು ||ಪ|| ಅತಿಜ್ಞಾನಿಯಾಗಬೇಕು , ಹರಿಕಥೆ ಕೇಳಬೇಕು ಯತಿಗಳ ಪಾದಕ್ಕೆ ಎರಗಬೇಕು ಸತಿಸುತರಿರಬೇಕು , ಅತಿಮೋಹ ಬಿಡಬೇಕು ಮತಿಯೊಂದು ಬಿಡದೆ ಹರಿ ಪೂಜಿಪರ ಸಂಗ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇದೀಗ ಭಕುತಿಯು ಮತ್ತಿದೀಗ ಭಕುತಿಯು

(ರಾಗ ದೇಶಿಕತೋಡಿ ರೂಪಕತಾಳ) ಇದೀಗ ಭಕುತಿಯು ಮ- ತ್ತಿದೀಗ ಭಕುತಿಯು ||ಪ|| ಮಧುದ್ವಿಷನ ಪದಕಮಲಕೆ ಮಧುಪನಂತೆ ಮುದದಿ ವಂದಿಪಡೆ ||ಅ|| ಶ್ರೀಕಾಂತಮೂರುತಿ ಬಾಹ್ಯಾಂತರದಿ ಏಕಾಂತದಿ ನಿನಗಾನಂದ ತುಳುಕಾಡಿ ಮುಖವಿಕಾಸದಿ ತನುವ ಮರೆತು ಏಕಭಾವ ಬುದ್ಧಿಲಿ ಕುಣಿವ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇಂತಿಂಥಾದ್ದೆಲ್ಲವು ಬರಲಿ

(ರಾಗ ಪಂತುವರಾಳಿ ಏಕತಾಳ) ಇಂತಿಂಥಾದ್ದೆಲ್ಲವು ಬರಲಿ, ನಿ- ಶ್ಚಿಂತೆಂಬುದು ನಿಜವಾಗಿರಲಿ ||ಪ|| ಬಡತನವೆಂಬುದು ಕಡೆತನಕಿರಲಿ ಒಡವೆ ವಸ್ತುಗಳು ಹಾಳಾಗ್ಹೋಗಲಿ ನಡೆಯುವ ದಾರಿ ಎನ್ನ ಬಿಟ್ಟ್ಹ್ಹೋಗಲಿ ಅಡವಿಲಿ ಗಿಡಗಳು ಸಿಗದ್ಹಾಗ್ಹೋಗಲಿ || ಉದ್ಯೋಗವೆಂಬುದು ಮೊದಲೇ ಹೋಗಲಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆನೆಯು ಕರೆದರೆ ಆದಿಮೂಲ ಬಂದಂತೆ

ಆನೆಯು ಕರೆದರೆ ಆದಿಮೂಲ ಬಂದಂತೆ | ಅಜಾಮಿಳನು ಕರೆದರೆ ನಾರಾಯಣನು ಬಂದಂತೆ | ಅಡವಿಯಲ್ಲಿ ಧ್ರುವರಾಯ ಕರೆದರೆ ವಾಸುದೇವ ಬಂದಂತೆ | ಸಭೆಯಲ್ಲಿ ದ್ರೌಪದಿ ಕರೆದರೆ ಶ್ರೀಕೃಷ್ಣ ಬಂದಂತೆ | ನಿನ್ನ ದಾಸರ ದಾಸನು ನಾ ಕರೆದರೆ | ಎನ್ನ ಪಾಲಿಸಬೇಕು ಪುರಂದರ ವಿಠಲ |
ದಾಸ ಸಾಹಿತ್ಯ ಪ್ರಕಾರ
ಬರೆದವರು

ಯಾವ ಕರ್ಮವೋ

( ರಾಗ ಗೌಳಿಪಂತು/ಸೌಳವಂತು. ಛಾಪು ತಾಳ) ಯಾವ ಕರ್ಮವೋ, ಇದು ಯಾವ ಪುಣ್ಯವೋ ||ಪ|| ಸತ್ತವನು ಎತ್ತ ಹೋದ ಸತ್ತು ತನ್ನ ಜನ್ಮಕ್ಹೋದ ಸತ್ತವನು ಉಂಬುವನೆಂದು ನಿತ್ಯ ಪಿಂಡ ಇಕ್ಕಿದರೆ || ಎಳ್ಳು ದರ್ಭೆ ಕೈಲಿ ಪಿಡಿದು ಪಿತೃತೃಪ್ತಿಯೆಂದು ಬಿಡಲು ಎಳ್ಳು ಮೀನು ನುಂಗಿತು
ದಾಸ ಸಾಹಿತ್ಯ ಪ್ರಕಾರ
ಬರೆದವರು