ಕಂಡೆ ಕಂಡೆ ಕಂಡೆ, ನಮ್ಮ ಕಂಗಳ ಧೇನುವ ಕಂಡೆ

ಕಂಡೆ ಕಂಡೆ ಕಂಡೆ, ನಮ್ಮ ಕಂಗಳ ಧೇನುವ ಕಂಡೆ

(ರಾಗ ಮಲಹರಿ ಏಕತಾಳ) ಕಂಡೆ ಕಂಡೆ ಕಂಡೆ, ನಮ್ಮ ಕಂಗಳ ಧೇನುವ ಕಂಡೆ ಮಂಗಳಮೂರುತಿ ಮನ್ನಾರ ಕೃಷ್ಣನ ಕಂಡೆ ಕಂಡೆ ಕಂಡೆ ||ಪ|| ಉಟ್ಟಪೀತಾಂಬರ ತೊಟ್ಟ ವಜ್ರಾಂಗಿಯ ಪುಟ್ಟಪಾದದ ರನ್ನ ಮನ್ನಾರಕೃಷ್ಣನ || ಒರಳನೆಳೆವ ಬೆರಳ ಚೀಪುವನ ಧರೆಯೊಳು ಮೆರೆಯುವ ಮನ್ನಾರಕೃಷ್ಣನ || ಕರದ ಕಂಕಣ ಬೆರಳ ಮುದ್ರಿಕೆ ತರಳ ಉಡುಪಿಯ ಮನ್ನಾರಕೃಷ್ಣನ || ಅಲವಬೋಧರಿಗೆ ಒಲಿದು ಬಂದ ಮಹ- ಚೆಲುವ ಸ್ಮರನಪಿತ ಮನ್ನಾರಕೃಷ್ಣನ || ಶೇಷಶಯನನ ಭಾಸುರರೂಪನ ಶ್ರೀಶ ಪುರಂದರವಿಠಲರಾಯನ||
ದಾಸ ಸಾಹಿತ್ಯ ಪ್ರಕಾರ
ಬರೆದವರು