ಹರಿ ಹರಿ ಹರಿಯೆಂದು ಸ್ಮರಿಸುವ ಜನರಿಗೆ
( ರಾಗ ಶಂಕರಾಭರಣ ಆದಿತಾಳ)
ಹರಿ ಹರಿ ಹರಿಯೆಂದು ಸ್ಮರಿಸುವ ಜನರಿಗೆ
ದುರಿತವೆತ್ತಣದು ದುರ್ಗತಿಯೆಲ್ಲಿ ಬಹುದು ||ಪ||
ಸ್ನಾನವೇತಕೆ ಸಂಧ್ಯಾಜಪತಪವೇತಕೆ
ಮೌನವೇತಕೆ ಮೇಲೆ ವ್ರತವೇತಕೆ
ಮಾನಸದಲಿ ವಿಷ್ಣುಪದ ಧ್ಯಾನಿಸುವ ಮಹಾ-
ಜ್ಞಾನಿಗಳ ಸಂಗಸುಖದೊಳಿರ್ಪರಿಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ಹರಿ ಹರಿ ಹರಿಯೆಂದು ಸ್ಮರಿಸುವ ಜನರಿಗೆ
- Log in to post comments